ಹೊಳೆ ಬರಡು: ಜಲನಿಧಿ ಯೋಜನೆ ವ್ಯರ್ಥ


Team Udayavani, Mar 25, 2017, 4:24 PM IST

24-kbl-1.jpg

ಕುಂಬಳೆ: ಬೇಸಗೆಯ ಸುಡು ಬಿಸಿಲಲ್ಲಿ ಜಿಲ್ಲೆಯ ಬಹುತೇಕ ಹೊಳೆಗಳು ಬತ್ತಿ ಬರಡಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೃಷಿ ಭೂಮಿಗಳಲ್ಲಿ ತೀವ್ರ ನೀರಿನ ಅಭಾವ ಕಾಡುತ್ತಿದೆ. ಮಂಜೇಶ್ವರ, ಉಪ್ಪಳ, ಕಳಾಯಿ, ಶಿರಿಯ, ಮೊಗ್ರಾಲ್‌, ಕುಂಬಳೆ ಹೊಳೆಗಳು ಈಗಾಗಲೇ ಬತ್ತಿ ಹೋಗಿ ಬರಡಾಗಿವೆ. ಹಿಂದಿನ ಕಾಲದಲ್ಲಿ  ಹೊಳೆಗಳಲ್ಲಿ ಎಪ್ರಿಲ್‌-ಮೇ ಮಾಸಗಳಲ್ಲೂ ನೀರು ಸಾಕಷ್ಟು ಲಭಿಸುತ್ತಿದ್ದು ಪ್ರಕೃತ ಜನರಿಯಲ್ಲೇ ನೀರು ಕುಂಠಿತವಾಗಿದೆ. ಹೊಳೆಗಳ ಬತ್ತುವಿಕೆಯೊಂದಿಗೆ ಪಾರಂಪರಿಕ ಕೆರೆ, ಬಾವಿ, ಸುರಂಗಗಳಲ್ಲೂ ಗಣನೀಯ ಪ್ರಮಾಣದ ನೀರಿನ ಕ್ಷಾಮ ತಲೆದೋರಿದೆ.

ಇದೀಗ ಹೆಚ್ಚಿನ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಪರದಾಟ ಆರಂಭಗೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಮನಗಂಡು ಕೇಂದ್ರ ರಾಜ್ಯ ಸರಕಾರಕಾರಗಳ ಹೇರಳ ನಿಧಿಯಿಂದ  ಕೈಗೊಂಡ ಹಲವು ಯೋಜನೆಗಳು ವ್ಯರ್ಥವಾಗಿವೆ.ಇದರಿಂದ ಸರಕಾರದ ರಾಷ್ಟ್ರೀಯ ನಿಧಿ ಪೋಲಾಗಿದೆ. ಕೆಲವು ಯೋಜನೆ ಸಕಾಲದಲ್ಲಿ ಅನುಷ್ಠಾನಗೊಳ್ಳದೆ ಜನಾಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರಕಾರದ ನೀರು ಸರಬರಾಜು ಇಲಾಖೆ ಮತ್ತು ಸ್ಥಳೀಯಾಡಳಿತೆಗಳು ಕೈಗೊಂಡ ಅದೆಷ್ಟೋ ಕುಡಿಯುವ ನೀರಿನ ಯೋಜನೆಗಳಲ್ಲಿ ನೀರು ಫಲಾನುಭವಿಗಳಿಗೆ ಲಭಿಸುತ್ತಿಲ್ಲ.

ಜಲನಿಧಿ ಯೋಜನೆ
ಕುಡಿಯುವ ಶುದ್ಧ ಜಲ ಪೂರೈಕೆಗಾಗಿ ಕಳೆದ 4 ವರ್ಷಗಳ ಹಿಂದೆ ಕೆಲವು ಗ್ರಾಮ ಪಂಚಾಯತ್‌ಗಳು ಆತುರದಿಂದ ಅನುಷ್ಠಾನಕ್ಕೆ ತರಲುದ್ದೇಶಿಸಿದ ಜಲನಿಧಿ ಕುಡಿಯುವ ನೀರು ಯೋಜನೆ ಹಲವು ವರ್ಷಗಳುರುಳಿದರೂ ಇನ್ನೂ ಪೂರ್ತಿಯಾಗದೆ ಅರ್ಧದಲ್ಲೇ ಮೊಟಕುಗೊಂಡಿರುವುದು ವ್ಯಾಪಕ ಆರೋಪಕ್ಕೆ ಎಡೆಮಾಡಿದೆ.

ಜಲನಿಧಿ ಯೋಜನೆಯಲ್ಲಿ ಪ್ರಥಮವಾಗಿ ಪುತ್ತಿಗೆ ಗ್ರಾಮ ಪಂಚಾಯತಿನಲ್ಲಿ ವರ್ಷಗಳ ಹಿಂದೆ ಕೈಗೊಂಡ ಹೆಚ್ಚಿನ ಘಟಕಗಳು ವಿಫಲವಾಗಿವೆ. ಬಳಿಕ  ಪೈವಳಿಕೆ ಗ್ರಾ.ಪಂ.ನಲ್ಲಿ  12 ಕಡೆಗಳಲ್ಲಿ ಸುಮಾರು 10 ಕೋಟಿ 77ಲಕ್ಷ ನಿಧಿಯ ಮೂಲಕ ಕಾಮಗಾರಿ ಕೈಗೊಳ್ಳಲಾಗಿದೆ. 

ವಿವಿಧೆಡೆ 2,372 ಕುಟುಂಬಗಳಿಗೆ ನೀರುಣಿಸುವ ಯೋಜನೆಯನ್ನು ಕಳೆದ 3 ವರ್ಷಗಳ ಹಿಂದೆ ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆದರೆ ಈ ಯೋಜನೆಯಲ್ಲಿ ಕೆಲವು ಮಾತ್ರ ಅರೆಬರೆಯಾಗಿ ಪೂರ್ತಿ ಆಗಿವೆ. ಪೈವಳಿಕೆ, ಕಯ್ನಾರು, ಕುರುಡಪದವು ಮೊದಲಾದೆಡೆಗಳಲ್ಲಿ ಇನ್ನೂ ಕಾಮಗಾರಿ ಪೂರ್ತಿಗೊಂಡಿಲ್ಲ. ಹೊಳೆ ಮತ್ತು ಕೊಳವೆ ಬಾವಿಗಳ ನೀರನ್ನು ಬಳಸಿ ಜಲನಿಧಿ ಯೋಜನೆಗಳಿಗೆ ಸ್ಥಳೀಯಾಡಳಿತೆ ಚಾಲನೆ ನೀಡಿದ್ದರೂ, ಹಿಂದಿನ ಮತ್ತು ಇಂದಿನ ಆಡಳಿತದ ಅನಾಸ್ಥೆ ಮತ್ತು ಕಳಪೆ ಕಾಮಗಾರಿಯ ಕಾರಣ ಸಮರ್ಪಕವಾಗಿ ಯೋಜನೆ ಪೂರ್ಣವಾಗಿ ಸಾಕಾರಗೊಂಡಿಲ್ಲ. ವಿಜಿಲೆನ್ಸ್‌ ಸಹಿತ ಉನ್ನತ ಅಧಿಕಾರಿಗಳಿಗೆ ಫಲಾನುಭವಿಗಳು ದೂರು ನೀಡಿದರೂ ಸಮಗ್ರ ತನಿಖೆ ನಡೆಸಿಲ್ಲವೆಂಬ ಆರೋಪ ಬಲವಾಗಿದೆ.

ಫಲಾನುಭವಿಗಳಿಂದ ಹೇರಳ ನಿಧಿ ಸೀÌಕರಿಸಿ ಬಳಸಿದ ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಅನ್ಯಾಯವಾಗಿದೆ.ಸಮರ್ಪಕವಾಗಿ ನೀರು ಪೂರೈಸದೆ ಮನಬಂದಂತೆ ಶುಲ್ಕ ವಸೂಲು ಮಾಡಲಾಗುತ್ತಿದೆ. ಕಳಪೆ ಕಾಮಗಾರಿಯಿಂದ ನೀರು ಸದಾ ಮೊಟಕುಗೊಳ್ಳುತ್ತಿದೆ. ಪೆರ್ಮುದೆ ಕುಡಿಯುವ ನೀರಿನ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ. ಇಲ್ಲಿ ಕಳಪೆ ಕಾಮಗಾರಿಯಿಂದಲಾಗಿ ಆರಂಭದಿಂದಲೇ ನೀರು ಹರಿಯುವ ಪೈಪ್‌ ಒಡೆಯಲಾರಂಭಿಸಿದೆ. ಇದೀಗ ವಾರದಿಂದ ನೀರು ಪೂರ್ಣ ಮೊಟಕುಗೊಂಡಿದೆ. 

ಒಂದು ದಿನ ನೀರು ಬಂದಲ್ಲಿ ಬಳಿಕ ಕೆಲವು ದಿನ ನೀರು ಮೊಟಕುಗೊಳ್ಳುತ್ತಿದೆ. ಇಲ್ಲಿ  ಫಲಾನುಭವಿ ಸಮಿತಿ ಸಭೆ ಕರೆಯದೆ ಮನಬಂದಂತೆ ಹಣ ವಸೂಲು ಮಾಡುತ್ತಿರುವ ಆರೋಪವಿದೆ.

ಡಿಸೆಂಬರ್‌ ಅಂತ್ಯದ ತನಕ ಸಾಮಾನ್ಯ ಹರಿವಿದ್ದ ಹೊಳೆಗಳಲ್ಲಿ ಜನವರಿಯಾಗುತ್ತಲೇ ಇತ್ತೀಚೆಗಿನ ವರ್ಷದಲ್ಲಿ ಬತ್ತಿ ಹೋಗುತ್ತಿದೆ.ಹೊಳೆಯ ಇಕ್ಕೆಲಗಳ ಕೃಷಿ ಭೂಮಿ ಇದೀಗ ತೀವ್ರ ನೀರಿನ ಕ್ಷಾಮ ಎದುರಿಸುತ್ತಿದೆ. ಪಾರಂಪರಿಕ ನೀರ ಕಟ್ಟಗಳು, ಕಿರು ಅಣೆಕಟ್ಟುಗಳ ಸಮರ್ಪಕ ನಿರ್ವಹಣೆಯಿಲ್ಲದೆ ನೀರು ಬತ್ತಿ ಹೋಗುತ್ತಿದೆ.ದೀರ್ಘ‌ ದೃಷ್ಟಿಯ ಯೋಜನೆಯ ಕೊರತೆ ಮತ್ತು ಅನುಷ್ಠಾನದ ಹಿನ್ನಡೆಯಿಂದ ಮುಂದಿನ ದಿನಗಳಲ್ಲಿ ವ್ಯಾಪಕ ಜಲ ಕೊರತೆ ಎದುರಾಗಲಿದೆ. ಮುಂದಿನ ಯುದ್ಧ ನೀರಿಗಾಗಿ ಎಂಬುದು ದಿಟವಾಗಲಿದೆ.
 

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

ACT

Manjeshwar: ಬಂಧಿತರ ಪೈಕಿ ಓರ್ವ 15 ಪ್ರಕರಣಗಳಲ್ಲಿ ಆರೋಪಿ

POlice

Kumbla: ಪ್ರಾಣ ಲೆಕ್ಕಿಸದೆ ಹೊಳೆಗೆ ಹಾರಿ ಆರೋಪಿಯನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.