ಆಡಳಿತದಲ್ಲಿ ಪಾರದರ್ಶಕತೆ; ಪೌರವಾಹಿನಿ ಹೊಸ ಸೇರ್ಪಡೆ
Team Udayavani, Mar 26, 2017, 11:54 AM IST
ಬೆಂಗಳೂರು: ಪಾಲಿಕೆಯ 2017-18ನೇ ಸಾಲಿನ ಬಜೆಟ್‌ನಲ್ಲಿ ಆಡಳಿತ ಸುಧಾರಣೆಗೆ ಒತ್ತು ನೀಡಲಾಗಿದೆ. ಅದರಂತೆ, ಪಾಲಿಕೆಗೆಂದೇ ಪ್ರತ್ಯೇಕ ಕಾಯ್ದೆ, ಆಯವ್ಯಯದಲ್ಲಿನ ಘೋಷಣೆಗಳ ತ್ತೈಮಾಸಿಕ ಪ್ರಗತಿ ಪರಿಶೀಲನೆಗೆ “ಪೌರವಾಹಿನಿ’ ತಂಡ, ಕಾಗದರಹಿತ ಮತ್ತು ಪಾರದರ್ಶಕತೆಗೆ “ಡಿಜಿಟಲ್ ಮಂತ್ರ’ದ ರೀತಿಯ ಆಡಳಿತ ಸುಧಾರಣೆ ಕ್ರಮಗಳಿಗೆ ಒತ್ತು ನೀಡಲಾಗಿದೆ.
ಬಿಬಿಎಂಪಿ ಕಾಯ್ದೆ- ಪಾಲಿಕೆಗೆ ಶೀಘ್ರವೇ ಸಕಲ ಸೌಲಭ್ಯ ಕಲ್ಪಿಸಿ, ನಗರದ ಸಮಸ್ಯೆಗಳನ್ನು ಪರಿಧಿಹರಿಸುವ ನಿಟ್ಟಿನಲ್ಲಿ ದೇಶದ ಇತರ ಮಹಾನಗರಗಳಲ್ಲಿರುವಂತೆ ಬಿಬಿಎಂಪಿಗೂ ಪ್ರತ್ಯೇಕ ಕಾಯ್ದೆ ರೂಪಿಸಲು ನಗರಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಲು ಸರ್ಕಾರಕ್ಕೆ ಮನವಿ.
ಪೌರವಾಹಿನಿ ತಂಡ ರಚನೆ- ಪಾಲಿಕೆ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳ ಜಾರಿ, ತಿರಸ್ಕೃತ ನಿರ್ಣಯಗಳ ಕ್ರೋಡೀಕರಣಕ್ಕೆ ಪೌರವಾಹಿನಿ ತಂಡ ರಚಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಪಾಲಿಕೆ ಬಜೆಟ್ ಘೋಷಣೆಗಳ ಜಾರಿಗೆ ಕೈಗೊಂಡ ಕ್ರಮ ಮತ್ತು ಪ್ರಗತಿ ಬಗ್ಗೆ ವಿವರ ಸಂಗ್ರಹಿಸುವ ಪೌರವಾಹಿನಿ ತಂಡ, 3 ತಿಂಗಳಿಗೊಮ್ಮೆ ಪಾಲಿಕೆ ಸಭೆಯಲ್ಲಿ ವರದಿ ಮಂಡಿಸಲಿದೆ.
ಇ-ಖಾತಾ ನೋಂದಣಿ- ಜನ ಸ್ನೇಹಿ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಖಾತಾ ನೋಂದಣಿ ಮತ್ತು ಸಮಸ್ಯೆಗಳನ್ನು ಕಂಪ್ಯೂಟರೀಕರಿಸುವ ಪದ್ಧತಿ ಅನುಷ್ಠಾನ. ದೃಢೀಕರಣಗೊಂಡ ಮಾಹಿತಿಯನ್ನು ನೋಂದಾಧಿಯಿತ ಕಚೇರಿಗಳಲ್ಲಿ ವಿನಿಮಯ ಮಾಡಿಧಿಕೊಳ್ಳಲು ಉದ್ದೇಶಿಸಲಾಗಿದೆ.
ಆಡಳಿತ ಸುಧಾರಣೆಗಾಗಿ ಕೈಗೊಂಡ ಕ್ರಮಗಳಿವು
ಬಯೋಮೆಟ್ರಿಕ್ ಹಾಜರಿ: ಪೌರ ಕಾರ್ಮಿಕರ ಹಾಜರಾತಿ ದಾಖಲೆಗಾಗಿ ಬಯೋಮೆಟ್ರಿಕ್ ಆಧಾರಿತ ವ್ಯವಸ್ಥೆ ಜಾರಿ.
ರುದ್ರಭೂಮಿಗೆ ಸ್ಥಳ: ಮುಂಬರುವ ಮಾಸ್ಟರ್‌ಪ್ಲಾನ್‌ನಲ್ಲಿ ರುದ್ರಭೂಮಿ ಮತ್ತು ಚಿತಾಗಾರಗಳಿಗೆ ಸ್ಥಳಾವಕಾಶ ಕಾಯ್ದಿರಿಸುವಂತೆ ಸರ್ಕಾರಕ್ಕೆ ಮನವಿ.
ಆರೋಗ್ಯ ನಿರ್ವಹಣೆ ವ್ಯವಸ್ಥೆ: ಜಿಐಎಸ್ ಆಧಾರಿತ ಸಾರ್ವಜನಿಕ ಆರೋಗ್ಯ ನಿರ್ವಹಣೆ ವ್ಯವಸ್ಥೆ ಜಾರಿಗೆ ಯೋಜನೆ ರೂಪಿಸಿದ್ದು, ಈ ವ್ಯವಸ್ಥೆಯಲ್ಲಿ ವಾರ್ಡ್ ಮಟ್ಟದ ಆರೋಗ್ಯ ಅಧಿಕಾರಿಗಳು ಟ್ಯಾಬ್ಲೆಟ್‌ಗಳನ್ನು ಬಳಸಿ, ಸ್ಥಳ ಪರಿಶೀಲನಾ ವರದಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬಹುಮಹಡಿ ಪಾರ್ಕಿಂಗ್: ಪಾಳುಬಿದ್ದಿರುವ ಮಾರುಕಟ್ಟೆ ಪ್ರದೇಶಗಳನ್ನು ಕೆಡವಿ, ಜನಸಾಮಾನ್ಯರ ಅನುಕೂಲಕ್ಕಾಗಿ ಅಲ್ಲಿ ಬಹು ಅಂತಸ್ತಿನ ವಾಹನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಇದರಿಂದ ಪಾಲಿಕೆಗೆ ವರಮಾನವೂ ಬರಲಿದೆ.
ಟೋಟಲ್ ಸ್ಟೇಷನ್ ಸರ್ವೇ: ನಗರದಲ್ಲಿರುವ ಎಲ್ಲ ಟೆಕ್ ಪಾರ್ಕ್‌ಗಳು, ಮಾಲ್‌ಗಳು, ಬೃಹತ್ ಕೈಗಾರಿಕೆ ಕಟ್ಟಡಗಳ ಡಿಜಿಟಲ್ ಸಮೀಕ್ಷೆ. ಇದು ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಅಡಿ ತಪ್ಪಾಗಿ ಅಥವಾ ಕಡಿಮೆ ವಿಸ್ತೀರ್ಣ ಘೋಷಿಸಿಕೊಂಡಿರುವ ಬಗ್ಗೆ ನಡೆಸುವ ಸಮೀಕ್ಷೆಯಾಗಿದೆ.
ಖಾಸಗಿ ವಾಹನ ನಿಲ್ದಾಣ: ಖಾಸಗಿ ಮಾಲಿಕರು ವಾಹನ ನಿಲ್ದಾಣ ನಿರ್ಮಾಣಕ್ಕೆ ಮುಂದೆಬಂದರೆ, ಅಂತಹ ಪ್ರಸ್ತಾವನೆಗೆ ವಿಶೇಷ ರಿಯಾಯಿತಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ.
ಜಾಹೀರಾತು ಬೈಲಾ ತಿದ್ದುಪಡಿ: ಪಾಲಿಕೆ ವರಮಾನ ಹೆಚ್ಚಿಸಲು ಮತ್ತು ನಗರದ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಹೊಸ ಜಾಹೀರಾತು ನೀತಿ ಜಾರಿಧಿಗೊಳಿಸುವ ಚಿಂತನೆಯಿದೆ. ಇದಕ್ಕೆ ಅನುಧಿಗುಣವಾಗಿ ಜಾಹೀರಾತು ಬೈಲಾದಲ್ಲಿ ತಿದ್ದುಪಡಿಯಾಗಲಿದೆ.
ರಸ್ತೆ ಅಗೆಯುಕೆಗೆ ಶುಲ್ಕ: ಅನಧಿಕೃತವಾಗಿ ರಸ್ತೆ ಗೆಯುವ ಪ್ರಕರಣಗಳಲ್ಲಿ ಮನೆಗಳಿಗೆ 10 ಲಕ್ಷ ರೂ. ದಂಡ ಹಾಗೂ ಸಂಸ್ಥೆಗಳಿಗೆ 25 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ, ಖಾಸಗಿ ಏಜೆನ್ಸಿಗಳ ನಿರ್ವಹಣೆಯಲ್ಲಿ ರಸ್ತೆಗಳನ್ನು ವ್ಯವಸ್ಥಿತವಾಗಿ ಅಗೆಯುವ ಪದ್ಧತಿ ಬರಲಿದೆ.
ಕಟ್ಟಡ ಬೈಲಾ ತಿದ್ದುಪಡಿ: ಪರವಾನಗಿ ಉಲ್ಲಂಘನೆಯಾದ ಪ್ರಕರಣಗಳಲ್ಲಿ ನೋಂದಣಿ ಜಾಗವನ್ನು ಪಾಲಿಕೆ ಮುಟ್ಟುಗೋಲು ಹಾಕಿಕೊಳ್ಳಲಿದೆ. ಈ ದಿಸೆಯಲ್ಲಿ ಕಟ್ಟಡಗಳ ಬೈಲಾಗಳಿಗೆ ಸೂಕ್ತ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆ.
ಕಾನೂನು ವಿದ್ಯಾರ್ಥಿಗಳ ನೇಮಕ: ಇಂಟರ್ನ್ಶಿಪ್ ನೀತಿ ಜಾರಿಗೊಳಿಸಿ, ಕಾನೂನು ವಿದ್ಯಾರ್ಥಿಗಳನ್ನು ನೇಮಿಸಿಕೊಂಡು, ಕಾನೂನು ಕೋಶ ಸದೃಢಗೊಳಿಸಯವ ಪ್ರಯತ್ನ.
ಟೈಲರಿಂಗ್‌ಗೆ ಸ್ವಂತ ಕಟ್ಟಡ: ಪಾಲಿಕೆಯಿಂದ ಟೈಲರಿಂಗ್, ನಿಟ್ಟಿಂಗ್, ಎಂಬ್ರಾಯಿಡರಿ ಶಾಲೆಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದು, ಸದರಿ ತರಬೇತಿಗೆ ಪಾಲಿಕೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ 4 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.