ನ್ಯಾಯ ಬೆಲೆ ಅಂಗಡಿಗೆ ಬಾಗಿಲು ಹಾಕಿದ ಗ್ರಾಮಸ್ಥರು
Team Udayavani, Mar 26, 2017, 12:10 PM IST
ಬೆಳ್ಮಣ್: ಕೂಪನ್ ಪಡೆದು ಪಡಿತರ ಪಡೆಯಲು ಜನರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ಬೆಳ್ಮಣ್ ಗ್ರಾಮಸ್ಥರು ಹಾಗೂ ಬೆಳ್ಮಣ್ ಭಾಗದ ಬಿಜೆಪಿ ಕಾರ್ಯಕರ್ತರು ನ್ಯಾಯ ಬೆಲೆ ಅಂಗಡಿಗೆ ಬಾಗಿಲು ಹಾಕಿದ್ದಾರೆ.
ಪಡಿತರ ಪಡೆಯಲು ಇಲಾಖೆ ಕೂಪನ್ ಕಡ್ಡಾಯಗೊಳಿಸಿದ್ದು, ಕಾರ್ಕಳದ ಅಜೆಕಾರು ಹಾಗೂ ಬೆಳ್ಮಣ್‌ನಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ಕಳೆದ 3 ದಿನದಿಂದ ಈ ಕೂಪನ್ ವಿತರಣೆ ನಡೆಯುತ್ತಿತ್ತು.
ಬೆಳಗ್ಗಿನಿಂದಲೇ ಪಡಿತರ ಪಡೆಯಲು ಗ್ರಾಮಸ್ಥರು ಸಾಲುಗಟ್ಟಿ ಕೂಪನ್ ಪಡೆಯುತ್ತಿದ್ದರು. ಆದರೆ ಈ ಕೂಪನ್ ವ್ಯವಸ್ಥೆಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಬೆಳ್ಮಣ್ ಭಾಗದ ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರನ್ನು ಸಂಘಟಿಸಿ ನ್ಯಾಯಬೆಲೆ ಅಂಗಡಿಗೆ ತೆರಳಿ ಕೂಪನ್ ಇಲ್ಲದೆ ಪಡಿತರ ವಿತರಿಸಬೇಕು ಎಂದು ನ್ಯಾಯ ಬೆಲೆ ಅಂಗಡಿಯ ಬಾಗಿಲು ಮುಚ್ಚಿದರು.
ಕೂಪನ್ ಕೊಡುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಕೂಪನ್ ನೀಡುವುದನ್ನು ಸ್ಥಗಿತಗೊಳಿಸಲಾಯಿತು. ಒಂದಿಷ್ಟು ಕಾಲ ಗೊಂದಲ ಉಂಟಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂದು ಗದ್ದಲ ತಿಳಿಗೊಳಿಸಿದರು. ಕೂಪನ್ ನೀಡುವಲ್ಲಿಯೂ ಜನ ರಾದ್ಧಾಂತ ನಡೆಸಿದರು.
ಕೂಪನ್ ಕಡ್ಡಾಯ
ಗದ್ದಲ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳು ಕೂಪನ್ ಇಲ್ಲದೆ ಪಡಿತರ ನೀಡಲು ಅವಕಾಶವಿಲ್ಲ. ಸರಕಾರದ ಕಂದಾಯ ಇಲಾಖೆ ಆದೇಶದಂತೆ ಈ ಕೂಪನ್ ವಿತರಣೆ ಕಾರ್ಯ ನಡೆಯುತ್ತಿದೆ.
ಇದೀಗ ಪ್ರಾಯೋಗಿಕವಾಗಿ ಅಜೆಕಾರು ಹಾಗೂ ಬೆಳ್ಮಣ್ ಹೋಬಳಿಯಲ್ಲಿ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಕೂಪನ್ ಪಡೆದೆ ಪಡಿತರ ಪಡೆಯಬೇಕಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.