ಆದಾಯಕ್ಕೂ, ಆರೋಗ್ಯಕ್ಕೂ ಪಪ್ಪಾಯಿ
Team Udayavani, Mar 27, 2017, 12:28 PM IST
ನೋಡಿದ ಕೂಡಲೇ ಮುಖ ಸಿಂಡರಿಸಿಕೊಂಡರೂ ರುಚಿ ನೋಡಿದ ಮೇಲೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹುಟ್ಟಿಸುವ “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಔಷಧೀಯ ಗುಣವನ್ನು ಕೂಡ ಹೊಂದಿರುವ ಪಪ್ಪಾಯಿ ಹಲವು ಖಾಯಿಲೆಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿದೆ. ಹೃದಯ ಹಾಗೂ ನರಗಳ ದೌರ್ಬಲ್ಯ ಸಮಸ್ಯೆ ಇರುವವರಿಗೆ ನವಚೈತನ್ಯ ನೀಡುವ, ಅಜೀರ್ಣ ಮತ್ತು ಮಲಬದ್ಧತೆ ನಿವಾರಿಸಿ, ದೇಹದ ಕೊಬ್ಬು, ಕೊಲೆಸ್ಟ್ರಾಲ್ ಹಾಗೂ ಬೊಜ್ಜಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಕೆಲಸ ಮಾಡುವ ಪಪ್ಪಾಯಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಉತ್ತಮ.
ಆರೋಗ್ಯ ವೃದ್ಧಿಸುವ ಪಪ್ಪಾಯಿ ಹಣ್ಣಿನ ಬೆಳೆ ಹೇಳಿಕೇಳಿ ಸುಲಭ ಅಂತ ಅನ್ನಿಸಿದರೂ ಒಂದಿಷ್ಟು ಶ್ರಮ ಬೇಕೇ ಬೇಕು. ಬಡ ರೈತನ ಕೈತುಂಬ ರುಪಾಯಿ ನೀಡುವ ಪಪ್ಪಾಯಿ ಬೆಳೆ ಇಂದಿನ ದಿನಮಾನದಲ್ಲಿ ಲಾಭದಾಯಕ ಬೆಳೆಯಾಗಿದೆ. ಸಾಕಷ್ಟು ನೀರಾವರಿ ಅನುಕೂಲವಿರುವ ರೈತರು ವಿವಿಧ ತಳಿಯ ಪಪ್ಪಾಯಿ ಬೆಳೆಗಳನ್ನು ಬೆಳೆದು ಕೈ ತುಂಬಾ ರುಪಾಯಿಗಳಿಸುವ ಮೂಲಕ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ.
ದರ್ಣಪ್ಪ ಗೌಡ, ತರಕಾರಿ ಕೃಷಿಯಲ್ಲಿ ಈ ಹೆಸರು ಕೇಳದವರ ಬಹುಶ ತಾಲೂಕಿನಲ್ಲಿ ಯಾರೂ ಇಲ್ಲವೆಂದೇ ಹೇಳಬಹುದು. ಕೃಷಿಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಧರ್ಣಪ್ಪ ಗೌಡರವರು ಮೂಲತಃ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಕುಂಟಿಯಾನದವರು. ಚಾರ್ವಕ, ಮಾಡಾವು, ಸಂಪ್ಯ ಮತ್ತು ಕುಂಟಿಯಾನ ಇತ್ಯಾದಿ ಕಡೆಗಳಲ್ಲಿ ಇವರು ಸುಮಾರು 30 ಎಕರೆಗೂ ಅಧಿಕ ಭೂಮಿಯಲ್ಲಿ ವಿವಿಧ ಕೃಷಿಗಳನ್ನು ಮಾಡುತ್ತಿದ್ದಾರೆ. ಪ್ರಮುಖವಾಗಿ ಅಡಿಕೆ, ತೆಂಗಿನಂತಹ ವಾಣಿಜ್ಯ ಬೆಳೆಗಳ ಜೊತೆಯಲ್ಲಿ ಹಣ್ಣು ಮತ್ತು ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅಡಿಕೆ ಕೃಷಿಗೆ ಪರ್ಯಾಯ ಬೆಳೆಯಾಗಿ ವಿವಿಧ ತರಕಾರಿಗಳನ್ನು ಇವರು ಬೆಳೆಸುತ್ತಿದ್ದಾರೆ. ಬಸಳೆ ಕೃಷಿ ಇವರ ನೆಚ್ಚಿನ ಕೃಷಿಯಾಗಿದೆ. ಇದರೊಂದಿಗೆ ಇತರ ಬಹಳಷ್ಟು ತರಕಾರಿಗಳನ್ನು ಬೆಳೆಸುತ್ತಿದ್ದಾರೆ.
ಸಾವಯವ ಗೊಬ್ಬರದಿಂದ ಬೆಳೆದ ಪಪ್ಪಾಯಿ ರುಚಿಯಾಗಿರುತ್ತೆ. ಧರ್ಣಪ್ಪ ಗೌಡರವರು ಸಸಿಗಳಿಗೆ ರಾಸಾಯನಿಕ ಗೊಬ್ಬರದ ಬದಲಾಗಿ ಹೆಚ್ಚಾಗಿ ಸಗಣಿ ಗೊಬ್ಬರ,ಸಾವಯವ ಗೊಬ್ಬರಗಳನ್ನು ಬಳಕೆ ಮಾಡುತ್ತಿದ್ದಾರೆ. ಸಾವಯವ ಗೊಬ್ಬರಗಳನ್ನು ಬಳಕೆ ಮಾಡುವುದರಿಂದ ಹಣ್ಣುಗಳು ರುಚಿಕರವಾಗಿದ್ದು, ಆರೋಗ್ಯಕ್ಕೂ ಹಾನಿಯಾಗುವುದಿಲ್ಲ. ಅಲ್ಲದೆ ಪಪ್ಪಾಯಿ ಮರಗಳಿಗೂ ಯಾವುದೇ ರೋಗ ಬರುವುದಿಲ್ಲ ಎನ್ನುತ್ತಾರೆ. ಪಪ್ಪಾಯಿ ಬೆಳೆ ಮಾಡುವವರು ಮೊದಲಿಗೆ ಉತ್ತಮ ಜಾತಿಯ ಕಂಪೆನಿ ಜೀಜಗಳನ್ನು ಖರೀದಿ ಮಾಡಬೇಕಾಗುತ್ತದೆ. ಜನವರಿ ತಿಂಗಳಿನಲ್ಲಿ ಬಿತ್ತನೆ ಮಾಡಬೇಕು. ಸಸಿಯಾದ ಬಳಿಕ ಒಳ್ಳೆಯ ಫಲವತ್ತಾದ ಮರಳು ಮಿಶ್ರಿತ ಮಣ್ಣಿನಲ್ಲಿ ನಾಟಿ ಮಾಡಬೇಕು. ನಮ್ಮ ಈ ಪ್ರದೇಶದ ಗುಡ್ಡದ ಮಣ್ಣು ಪಪ್ಪಾಯಿ ಬೆಳೆಗೆ ಉತ್ತವಾಗಿದೆ ಎನ್ನುತ್ತಾರೆ ಧರ್ಣಪ್ಪ ಗೌಡರು. ಸಸಿಗಳನ್ನು ನೆಟ್ಟ 3 ತಿಂಗಳಿನಲ್ಲಿ ಹೂ ಬಿಡುತ್ತದೆ. ಸುಮಾರು 65 ದಿನಗಳಲ್ಲಿ ಪಪ್ಪಾಯಿ ಹಣ್ಣುಗಳು ಕೊಯ್ಲಿಗೆ ಬರುತ್ತದೆ. ಜೇಡಿ ಮಣ್ಣಿನಲ್ಲಿ ಪಪಾು³ ಬೆಳೆ ಚೆನ್ನಾಗಿ ಬರುವುದಿಲ್ಲ ಎನ್ನುತ್ತಾರೆ.
ಪಪ್ಪಾಯಿ ಹಣ್ಣಿನ ಕಟಾವು
ಪಪ್ಪಾಯಿ ಹಣ್ಣುಗಳನ್ನು ಪೂರ್ತಿ ಹಣ್ಣಾದ ಮೇಲೆ ಕಟಾವು ಮಾಡಬಾರದು. ಸ್ವಲ್ಪ ಕಾಯಿ ಇದ್ದಾಗಲೇ ಕಟಾವು ಮಾಡಬೇಕು. ಏಕೆಂದರೆ ಪಪ್ಪಾಯಿ ಹಣ್ಣುಗಳು ತುಂಬಾ ಮೃದುವಾಗಿರುತ್ತದೆ. ಹೆಚ್ಚು ಹಣ್ಣಾದ ಕಾಯಿಯನ್ನು ಕಟಾವು ಮಾಡಿದರೆ ಅದನ್ನು ರಾಶಿ ಹಾಕಲು ತುಂಬಾ ಕಷ್ಟವಾಗುತ್ತದೆ.ಯಾವುದೇ ರೀತಿಯಲ್ಲಿ ಪೆಟ್ಟಾದ ಹಣ್ಣನ್ನು ಗುಂಪು ಹಣ್ಣಿನಲ್ಲಿ ಸೇರಿಸಿ ಕಟಾವು ಮಾಡಬಾರದು. ಹೀಗೆ ಮಾಡುವುದರಿಂದ ಹಣ್ಣುಗಳು ಹಾಳಾಗುತ್ತವೆ.
ಆರೋಗ್ಯ ವೃದ್ಧಿಸುವ ಪಪ್ಪಾಯಿ ಹಣ್ಣಿನ ಬೆಳೆಯನ್ನು ಯಾರೂ ಬೇಕಾದರೂ ಮಾಡಬಹುದು. ನಮ್ಮೂರಿನ ಮಣ್ಣು ಪಪ್ಪಾಯಿ ಬೆಳೆಗೆ ಉತ್ತಮವಾಗಿದೆ. ಸಸಿ ನೆಟ್ಟು 3 ತಿಂಗಳಲ್ಲಿ ಹೂ ಬಿಡುತ್ತದೆ. ಬಳಿಕ 65 ದಿನಗಳಲ್ಲಿ ಕಾಯಿಗಳನ್ನು ಕಟಾವು ಮಾಡಬಹುದು. ಸಾವಯವ ಗೊಬ್ಬರಗಳನ್ನು ಬಳಸಿ ಬೆಳೆದ ಪಪ್ಪಾಯಿ ಮರಗಳಿಗೆ ರೋಗ ಬರುವುದು ಕಮ್ಮಿ. ಸುಲಭ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು ಎನ್ನುತ್ತಾರೆ ಧರ್ಣಪ್ಪ ಗೌಡ.
ಮಾಹಿತಿಗೆ -9481973387
– ಸಿಶೇ ಕಜೆಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.