ಕಲ್ಲು ನೆಲದಲ್ಲಿ ಹಸಿರು ಝಲಕ್‌, ಇದು ವೈದ್ಯರ ಕೈಚಳಕ್‌


Team Udayavani, Mar 27, 2017, 12:39 PM IST

pai.jpg

ತರಕಾರಿ ಮತ್ತು ಹಣ್ಣಿನ ಗಿಡಮರಗಳನ್ನು ಬೆಳೆಸಲಿಕ್ಕೆ ನಿಮಗೆ ಮುಖ್ಯವಾಗಿ ಬೇಕಾಗುವುದು ನೀರು ಮತ್ತು ಗೊಬ್ಬರ. ನೀವು ಅಡುಗೆಮನೆಯ ಕಸ ಮತ್ತು ತರಗೆಲೆಗಳಿಂದ ಒಳ್ಳೆಯ ಗೊಬ್ಬರ ಅಂದರೆ ಕಾಂಪೋಸ್ಟ… ಮಾಡಿಕೊಳ್ಳಬಹುದು. ಆದರೆ ಅದಕ್ಕೆ ದನದ ಸೆಗಣಿ ಮತ್ತು ಮೂತ್ರ ಬೇಕೇ ಬೇಕು. ಹತ್ತು ಸೆಂಟ್ಸ್‌ ಜಾಗದಲ್ಲಿ ತರಕಾರಿ ಮತ್ತು ಹಣ್ಣಿನ ಗಿಡಮರಗಳಿಗೆ ಬೇಕಾದ ಕಂಪೋಸ್ಟ್‌ ಮಾಡಲಿಕ್ಕೆ ತಿಂಗಳಿಗೆ ಒಂದು ಕಿಲೋ ಸೆಗಣಿ ಇದ್ದರೆ ಸಾಕು. ಹಾಗೆಯೇ 2 3 ಲೀಟರ್‌ ಗೋಮೂತ್ರ ಬೇಕು ಇಡೀ ವರುಷಕ್ಕೆ ಅಷ್ಟೇ ಸಾಕು.

ಮಣಿಪಾಲದಿಂದ ಪರ್ಕಳ ರಸ್ತೆಯಲ್ಲಿ ಒಂದೂವರೆ ಕಿಮೀ ಸಾಗಿ, ಬಲಕ್ಕೆ ತಿರುಗಿದರೆ ಸಿಗುವ ಈಶ್ವರನಗರ ಬಡಾವಣೆಯಲ್ಲಿದೆ ಮಣಿಪಾಲ ಹಾಲಿನ ಡೈರಿ. ಅದನ್ನು ದಾಟಿ ಮುಂದಕ್ಕೆ ಹೋಗಿ, ಕೊನೆಯ ಅಡ್ಡರಸ್ತೆಗೆ ತಿರುಗಿ ಗುಡ್ಡವೇರಿದರೆ ಡಾ.ಕೆ. ಎನ್‌. ಪೈ ಅವರ ಮನೆ ತಟಕ್ಕನೆ ಕಣ್ಸೆಳೆಯುತ್ತದೆ. ಮನೆಯ ಸುತ್ತಲು ಇರುವ ಹಸಿರು ಮರಗಳಿಂದಾಗಿ. ಹದಿನೈದು ಸೆಂಟ್ಸ್‌ ಜಾಗದ ಆ ನಿವೇಶನದಲ್ಲಿರುವ ಕೈತೋಟ ನೋಡಲು ಸಂಜೆ 5 ಗಂಟೆಗೆ ಬನ್ನಿ ಎಂಬ ಡಾ. ಪೈ ಅವರ ಆಹ್ವಾನಕ್ಕೆ ಸ್ಪಂದಿಸಿ ನಾವು ಮಂಗಳೂರಿನಿಂದ ಹೋಗಿ¨ªೆವು.

“ನಾನು ಶಿವಮೊಗ್ಗ ಜಿÇÉೆಯ ಸಾಗರದಲ್ಲಿ ಡಾಕ್ಟರಾಗಿ¨ªೆ. ಹದಿನೇಳು ವರುಷದ ಮುಂಚೆ ಡಾಕ್ಟರ್‌ ವೃತ್ತಿಯಿಂದ ನಿವೃತ್ತನಾದೆ. ಅನಂತರ ಇÇÉೇ ಹತ್ತಿರ ಒಂದು ಫ್ಲಾಟಿನಲ್ಲಿ ಕೆಲವು ವರುಷ ಇ¨ªೆ. ಅಲ್ಲಿ ದಿನವಿಡೀ ಬೇಜಾರು ಅನ್ನಿಸ್ಲಿಕ್ಕೆ ಶುರುವಾಯ್ತು. ಆ ಮೇಲೆ ಈ ಸೈಟ್‌ ತಗೊಂಡು ಮನೆ ಕಟ್ಟಿದೆ. ಮನೆಯ ಸುತ್ತಲಿನ ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲಿಕ್ಕೆ ಶುರು ಮಾಡಿದೆ. ಅದಾದ ಮೇಲೆ ನನಗೆ ಬೇಜಾರೇ ಇಲ್ಲ. ಆಗ ನೆಟ್ಟ ಸಸಿಗಳೆಲ್ಲ ಈಗ ಮರಗಳಾಗಿವೆ. ನೀವೇ ನೋಡಿ. ಮಾವು, ಗೇರು, ಹಲಸು, ಪೇರಳೆ, ಚಿಕ್ಕು, ಸ್ಟಾರ್‌ ಆಪಲ…, ಬೆಟ್ಟದ ನೆಲ್ಲಿ, ನುಗ್ಗೆ ಮರಗಳು ಇಲ್ಲಿವೆ. ಅನಾನಸು, ಬಾಳೆ, ಹರಿವೆ, ಬದನೆ, ಬೆಂಡೆ, ಬೀನ್ಸ್‌ ತರಕಾರಿ ಗಿಡಬಳ್ಳಿಗಳು, ಹೂವಿನ ಗಿಡಗಳು ಎಲ್ಲ ಇವೆ. ಎಲ್ಲದರಲ್ಲೂ ಫ‌ಲ ಬಿಟ್ಟಿದೆ. ನೀವೂ ಹೀಗೆ ಗಿಡ ಬೆಳೆಸಬಹುದು. ಹೆಚ್ಚೇನೂ ಖರ್ಚಿಲ್ಲ’ ಎಂದು ಆಹ್ವಾನಿತರೊಡನೆ ಮಾತಿಗೆ ಶುರುವಿಟ್ಟರು ಡಾ. ಪೈ.

ಮನೆಯೆದುರಿನ ಪೇರಳೆ ಮರದ ಆರಡಿ ಉದ್ದಗಲದ ಕಟ್ಟೆಯ ಮಣ್ಣನ್ನು ಕೈಯಲ್ಲಿ ತೆಗೆದು ತೋರಿಸುತ್ತಾ ಅವರು ಮಣ್ಣಿನೊಳಗಿನ ಸೂಕ್ಷ್ಮ ಜಗತ್ತನ್ನು ತೆರೆದಿಟ್ಟ ಪರಿ ಹೀಗಿದೆ: ಯಾವುದೇ ಜಾಗದಲ್ಲಿ ಮೇಲಿನ ಮೂರಿಂಚಿನ ಮಣ್ಣಿನÇÉೇ ಹ್ಯೂಮಸ್‌ ಇರುವುದು. ಅದಿದ್ದರೆ ಮಾತ್ರ ಗಿಡಮರಗಳು ಚೆನ್ನಾಗಿ ಬೆಳೆಯುತ್ತವೆ. ಹ್ಯೂಮಸ್‌ ತಯಾರು ಮಾಡುವುದು ಮಣ್ಣಿನಲ್ಲಿರುವ ಎರೆಹುಳಗಳು ಮತ್ತು ಸೂಕ್ಷ್ಮಜೀವಿಗಳು. ನಾನು ಈ ಸೈಟಿಗೆ ಎರೆಹುಳಗಳನ್ನು ಎಲ್ಲಿಂದ ತರುವುದು ಅಂತ ಯೋಚನೆ ಮಾಡ್ತಿ¨ªೆ. ಒಂದಿವಸ ಮನೆಯೆದುರಿನ ಚಪ್ಪಡಿ ಕಲ್ಲನ್ನು ಬದಿಗೆ ಸರಿಸಿದಾಗ, ಅದರ ಅಡಿಯಲ್ಲಿದ್ದವು ನೂರಾರು ಎರೆಹುಳಗಳು. ಹೀಗೆ ಎಲ್ಲ ಜಮೀನಿನಲ್ಲಿಯೂ ಎರೆಹುಳಗಳು ಇರುತ್ತವೆ. ನಾವು ಎರೆಹುಳಗಳಿಗೆ ಆಹಾರ ಒದಗಿಸಿದರೆ ಸಾಕು. ಅವು ಮೊಟ್ಟೆ ಇಟ್ಟು ಮರಿಮಾಡಿ ಸಾವಿರಸಾವಿರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ.’

ಗಿಡಮರಗಳು ಪೌಷ್ಠಿಕಾಂಶ ಪಡೆಯುವ ರೀತಿಯನ್ನು ಡಾ. ಪೈ ಸರಳವಾಗಿ ವಿವರಿಸಿದ್ದು ಹೀಗೆ: ನಾವು ತಿಂದದ್ದು ನಮ್ಮ ಹೊಟ್ಟೆಯಲ್ಲಿ ಜೀರ್ಣ ಆಗುತ್ತದೆ. ಆದರೆ ಗಿಡಮರಗಳ ಹೊಟ್ಟೆ ಅವುಗಳ ಒಳಗಿಲ್ಲ; ಅದು ಹೊರಗಿದೆ ಮಣ್ಣಿನಲ್ಲಿ. ಅಂದರೆ ಎರೆಹುಳಗಳು ಮತ್ತು ಸೂಕ್ಷ್ಮಜೀವಿಗಳೇ ಗಿಡಮರಗಳ ಹೊಟ್ಟೆ ಇದ್ದ ಹಾಗೆ. ನಾವು ಕೊಟ್ಟ ಗೊಬ್ಬರವನ್ನು ಇವು ತಿಂದು, ಪೋಷಕಾಂಶವಾಗಿ ಬದಲಾಯಿಸಿ, ಗಿಡಮರಗಳಿಗೆ ಕೊಡ್ತವೆ. 

ತರಕಾರಿ ಮತ್ತು ಹಣ್ಣಿನ ಗಿಡಮರಗಳನ್ನು ಬೆಳೆಸಲಿಕ್ಕೆ ನಿಮಗೆ ಮುಖ್ಯವಾಗಿ ಬೇಕಾಗುವುದು ನೀರು ಮತ್ತು ಗೊಬ್ಬರ. ನೀವು ಅಡುಗೆಮನೆಯ ಕಸ ಮತ್ತು ತರಗೆಲೆಗಳಿಂದ ಒಳ್ಳೆಯ ಗೊಬ್ಬರ ಅಂದರೆ ಕಾಂಪೋಸ್ಟ… ಮಾಡಿಕೊಳ್ಳಬಹುದು. ಆದರೆ ಅದಕ್ಕೆ ದನದ ಸೆಗಣಿ ಮತ್ತು ಮೂತ್ರ ಬೇಕೇ ಬೇಕು. ಹತ್ತು ಸೆಂಟ್ಸ್‌ ಜಾಗದಲ್ಲಿ ತರಕಾರಿ ಮತ್ತು ಹಣ್ಣಿನ ಗಿಡಮರಗಳಿಗೆ ಬೇಕಾದ ಕಂಪೋಸ್ಟ್‌ ಮಾಡಲಿಕ್ಕೆ ತಿಂಗಳಿಗೆ ಒಂದು ಕಿಲೋ ಸೆಗಣಿ ಇದ್ದರೆ ಸಾಕು. ಹಾಗೆಯೇ 2 3 ಲೀಟರ್‌ ಗೋಮೂತ್ರ ಬೇಕು ಇಡೀ ವರುಷಕ್ಕೆ ಅಷ್ಟೇ ಸಾಕು. ದನಸಾಕುವವರಿಂದ ಸೆಗಣಿ ಮತ್ತು ಗೋಮೂತ್ರ ಪಡೆಯುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ವಿವರಿಸುತ್ತಾ ಕಂಪೋಸ್ಟ್‌ ಕೋಣೆಗೆ ನಮ್ಮನ್ನು ಕರೆದೊಯ್ದು, ಅಲ್ಲಿದ್ದ ಕಂಪೋಸ್ಟನ್ನು ಕೈಯಲ್ಲಿ ತೆಗೆದು ತೋರಿಸಿದರು ಡಾ. ಪೈ. ನಾನು ಡಾಕ್ಟರ್‌ ವೃತ್ತಿ ಮಾಡುತ್ತಿ¨ªಾಗ ಇದನ್ನೆಲ್ಲ ಮುಟ್ಟುತ್ತಿರಲಿಲ್ಲ ;ಈಗ ಇದನ್ನು ಮುಟ್ಟದ ದಿನವೇ ಇಲ್ಲ ಎಂದು ಹೇಳಲು ಅವರು ಮರೆಯಲ್ಲಿಲ್ಲ.

ಜೀವಾಮೃತ ಹಾಕಿದರೆ ತರಕಾರಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ; ಅರ್ಧ ಲೀಟರ್‌ ಜೀವಾಮೃತಕ್ಕೆ ಹತ್ತು ಲೀಟರ್‌ ನೀರು ಬೆರೆಸಿ ಸಿಂಪಡಿಸಿದರೆ ಸಾಕು. ಅವುಗಳಿಗೆ ಯಾವುದೇ ರೋಗ ಬರುವುದಿಲ್ಲ ಎಂಬ ಮಾತಿಗೆ ಪೂರಕವಾಗಿ ಅವರು ಹೇಳಿದ್ದು: ಇಲ್ಲಿದೆ ನೋಡಿ ಪಡುವಲದ ಬಳ್ಳಿ. ಮುಂಚೆ ಒಂದು ಬಳ್ಳಿಯಿಂದ ಐದಾರು ಪಡುವಲಕಾಯಿ ಸಿಗ್ತಾ ಇತ್ತು. ಕಳೆದ ವರುಷ ಜೀವಾಮೃತ ಹಾಕಿದಾಗ ಒಂದೇ ಬಳ್ಳಿಯಿಂದ ಸಿಕ್ಕಿದ್ದು 125 ಪಡುವಲಕಾಯಿ.. 

ಕಂಪೋಸ್ಟಿಗೆ ಬೇವಿನಹಿಂಡಿ ಬೆರೆಸಿದರೆ ಗಿಡಗಳ ಬೆಳವಣಿಗೆಗೆ ಒಳ್ಳೆಯದು. ಬದನೆ ಮತ್ತು ಬೆಂಡೆ ಸಸಿಗಳನ್ನು ಮಣ್ಣಿನಲ್ಲಿ ಅಥವಾ ಮಣ್ಣು ತುಂಬಿಸಿದ ಗೋಣಿಚೀಲಗಳಲ್ಲಿ ಬೆಳೆಸಬಹುದು. ಗಿಡಮರಗಳ ಬುಡದಲ್ಲಿ ತರಗೆಲೆಗಳ ಹೊದಿಕೆ ಇರಲೇ ಬೇಕು (ಮಲಿcಂಗ್‌) ಅದು ಮಗುವಿಗೆ ತಾಯಿಯ ಸೆರಗು ಇದ್ದ ಹಾಗೆ; ಮಣ್ಣಿನಲ್ಲಿ ತೇವಾಂಶ ಉಳಿಸುತ್ತದೆ. ನೀರನ್ನು ಗಿಡಮರಗಳ ಬುಡಕ್ಕೆ ಸುರಿಯಬಾರದು. ಗಿಡಮರಗಳ ಎತ್ತರ ನೋಡಿಕೊಂಡು, ಬುಡದಿಂದ ಒಂದರಿಂದ ಮೂರಡಿ ದೂರದಲ್ಲಿ ನೀರು ಹಾಕಬೇಕು. ಆಗ ನೀರು ಹುಡುಕಿಕೊಂಡು ಬೇರುಗಳು ಬೆಳೆಯುತ್ತವೆ; ಇದರಿಂದಾಗಿ ಬೇರುಗಳ ಮತ್ತು ಗಿಡಮರಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಎಂದು ಪೂರಕ ಮಾಹಿತಿ ನೀಡಿದರು ಡಾ. ಪೈ.

ಅವರ ಮನೆಸೈಟ್‌ ಮಣಿಪಾಲದ ಗುಡ್ಡೆಯ ಜಂಬಿಟ್ಟಿಗೆಯ ಜಮೀನು. ಆ ಕಲ್ಲುನೆಲದಲ್ಲಿ ಗಿಡಮರಗಳನ್ನು ಬೆಳೆಸುವ ಕಾಯಕಕ್ಕೆ ಧಾರೆ ಎರೆಯಬೇಕು ಅಪಾರ ಸಮಯ ಮತ್ತು ಶ್ರದ್ಧೆ. ತಮ್ಮ ಇಳಿವಯಸ್ಸಿನಲ್ಲಿಯೂ ಪ್ರತಿ ದಿನ ಆರೇಳು ತಾಸು ಆ ಕಾಯಕದಲ್ಲಿ ತೊಡಗಿಸಿಕೊಂಡು ಮೈಮನಗಳಲ್ಲಿ ಉತ್ಸಾಹ ತುಂಬಿಕೊಳ್ಳುತ್ತಾರೆ ಡಾ. ಪೈ. ಅಂದು ಅಲ್ಲಿ ನೆರೆದಿದ್ದ ಅರವತ್ತು ಆಸಕ್ತರೊಂದಿಗೆ ಒಂದು ತಾಸಿನ ಅವಧಿ ತನ್ಮಯತೆಯಿಂದ ಉತ್ಸಾಹದಿಂದ ತಮ್ಮ ಕಾಯಕದ ಮಾಹಿತಿ ಹಂಚಿಕೊಂಡಿದ್ದರು ಡಾ. ಕೊಚ್ಚಿಕಾರ್‌ ನರೇಂದ್ರನಾಥ್‌ ಪೈ. ಗಿಡಮರಗಳನ್ನು ಬೆಳೆಸುವುದು ನನಗಂತೂ ಆತ್ಮಾನಂದದ ಕೆಲಸ ಎನ್ನುತ್ತಾ ಅವರು ಮಾತು ಮುಗಿಸಿದಾಗ, ಅಲ್ಲಿ ನೆರೆದಿದ್ದವರಿಗೆಲ್ಲ ಕಾಣಿಸಿತ್ತು ಅದರ ಝಲಕ… ಡಾ. ಪೈಯವರ ನಗುಮುಖದಲ್ಲಿ ಮತ್ತು ಅಲ್ಲಿದ್ದ ಗಿಡಮರಬಳ್ಳಿಗಳ ಎಲೆಎಲೆಯಲ್ಲಿ.

– ಅಡ್ಕೂರು ಕೃಷ್ಣರಾವ್‌

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.