Reliance Jio Prime Membership ಡೆಡ್ಲೈನ್ 1 ತಿಂಗಳು ಮುಂದಕ್ಕೆ
Team Udayavani, Mar 27, 2017, 3:36 PM IST
ಹೊಸದಿಲ್ಲಿ : ಮಾರ್ಚ್ 31ರಂದು ಕೊನೆಗೊಳ್ಳುವ ಗಡುವಿನ ರಿಲಯನ್ಸ್ ಜಿಯೋ ಪ್ರೈಮ್ ಮೆಂಬರ್ಶಿಪ್ಪನ್ನು ನೀವಿನ್ನೂ ಪಡೆದುಕೊಂಡಿಲ್ಲವಾದರೆ ಅದಕ್ಕಾಗಿ ನೀವೀಗ ನಿರಾಶರಾಗಬೇಕಿಲ್ಲ. ರಿಲಯನ್ಸ್ ಜಿಯೋ ಮೆಂಬರ್ಶಿಪ್ ಪಡೆಯಲು ಇರುವ ಗಡುವನ್ನು ಕಂಪೆನಿಯು ಒಂದು ತಿಂಗಳ ಮಟ್ಟಿಗೆ ವಿಸ್ತರಿಸಲಿದೆ ಎಂಬುದಾಗಿ ಗ್ಯಾಜೆಟ್ 360 ಡಿಗ್ರಿ ವರದಿಮಾಡಿದೆ
ಕಳೆದ ಫೆಬ್ರವರಿ ತಿಂಗಳಲ್ಲೇ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು “ಎಪ್ರಿಲ್ 1ರಿಂದ ಜಿಯೋಗೆ ಬರುವ ಗ್ರಾಹಕರಿಗೆ ಉಳಿದೆಲ್ಲ ಸಂಸ್ಥೆಗಳಿಂತ ಶೇ.20ರಷ್ಟು ಹೆಚ್ಚು ಡಾಟಾವನ್ನು ಕೊಡಲಾಗುವುದು ಎಂದು ಪ್ರಕಟಿಸಿದ್ದರು.
ಜಿಯೋ ಪ್ರೈಮ್ ಮೆಂಬರ್ಶಿಪಕ್ ಪ್ಲಾನ್ ನಡಿ ಗ್ರಾಹಕರು ಒಂದು ಬಾರಿಯ ಸದಸ್ಯ ಶುಲ್ಕವಾಗಿರುವ 99 ರೂ.ಗಳನ್ನು ಪಾವತಿಸಿ ಜಿಯೋದ ಈಗಿರುವ ಎಲ್ಲ ಲಾಭಗಳನ್ನು ಪಡೆಯಬಹುದಾಗಿದೆ.
ಈಗಿನ ಪ್ರಕಾರ ಮಾರ್ಚ್ 1ರಿಂದ ಆರಂಭಗೊಂಡಿರುವ ಜಿಯೋ ಪ್ರೈಮ್ ಮೆಂಬರ್ಶಿಪ್ ನೋಂದಾವಣೆಯು ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ.
ತಿಂಗಳ ಶುಲ್ಕವನ್ನು ಪಾವಿತಸುವ ಮೂಲಕ ಜಿಯೋ ಗ್ರಾಹಕರು ಮುಂದಿನ 12 ತಿಂಗಳ ಕಾಲ ಈಗಿರುವ ಹ್ಯಾಪಿ ನ್ಯೂಇಯರ್ ಯೋಜನೆಯ ಎಲ್ಲ ಲಾಭಗಳನ್ನು ಪಡೆಯಬಹುದಾಗಿದೆ.
ಜಿಯೋ ಪ್ರೈಮ್ ಮೆಂಬರ್ಶಿಪ್ ಪಡೆಯದವರು ವಾಯ್ಸ ಕಾಲ್ಗಳನ್ನು ಉಚಿತವಾಗಿ ಪಡೆಯುವರಲ್ಲದೆ ಅವರಿಗೆ ರೋಮಿಂಗ್ಚಾರ್ಜ್ ಕೂಡ ಇರುವುದಿಲ್ಲ.
ಜಿಯೋ ಮನಿ ಆ್ಯಪ್ ಮೂಲಕ ಪ್ರೈಮ್ ಮೆಂಬರ್ಶಿಪ್ ಶುಲ್ಕ ಪಾವತಿಸುವಾಗ 50 ರೂ. ಕ್ಯಾಶ್ ಬ್ಯಾಕ್ ಹಾಗೂ ತಿಂಗಳ ಶುಲ್ಕ 303 ರೂ ಪಾವತಿಸುವಾಗ 50 ರೂ. ಕ್ಯಾಶ್ ಬ್ಯಾಕ್ ಸೇರಿದಂತೆ ಹೊಸ ಗ್ರಾಹಕರು ಒಟ್ಟು 100 ರೂ. (50 +50 ರೂ.) ಕ್ಯಾಶ್ ಬ್ಯಾಕ್ ಪಡೆಯುವ ಮೂಲಕ 99 ರೂ.ಗಳ ಪ್ರೈಮ್ ಮೆಂಬರ್ಶಿಪ್ ಶುಲ್ಕವನ್ನು ಉಚಿತ ಮಾಡಿಕೊಳ್ಳಬಹುದಾಗಿದೆ ಎಂದು ಈಚೆಗಷ್ಟೇ ಜಿಯೋ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.