ವಿಲಿಯಮ್ಸನ್ ಅಜೇಯ ಶತಕ: ದೊಡ್ಡ ಮುನ್ನಡೆಗೆ ಕಿವೀಸ್ ಯೋಜನೆ
Team Udayavani, Mar 28, 2017, 3:50 AM IST
ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ಕಪ್ತಾನ ಕೇನ್ ವಿಲಿಯ ಮ್ಸನ್ “ಸೆಡ್ಡನ್ ಪಾರ್ಕ್’ನಲ್ಲಿ ದಕ್ಷಿಣ ಆಫ್ರಿಕಾ ದಾಳಿಗೆ ಸಡ್ಡು ಹೊಡೆದು ನಿಂತಿದ್ದಾರೆ. ಅನೇಕ ದಾಖಲೆಗಳ ಸಂಭ್ರಮದೊಂದಿಗೆ ತಂಡಕ್ಕೆ ಭಾರೀ ಮುನ್ನಡೆಯ ಸೂಚನೆಯಿತ್ತಿದ್ದಾರೆ.
ದಕ್ಷಿಣ ಆಫ್ರಿಕಾದ 314 ರನ್ನುಗಳ ಮೊದಲ ಇನ್ನಿಂಗ್ಸಿಗೆ ದಿಟ್ಟ ಜವಾಬು ನೀಡತೊಡಗಿದ ನ್ಯೂಜಿಲ್ಯಾಂಡ್ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 321 ರನ್ ಪೇರಿಸಿದೆ. ಕೇನ್ ವಿಲಿಯಮ್ಸನ್ 148ರಲ್ಲಿ ಅಜೇಯರಾಗಿದ್ದಾರೆ. ಇದು ಅವರ 17ನೇ ಶತಕ. ಇದರೊಂದಿಗೆ ನ್ಯೂಜಿಲ್ಯಾಂಡ್ ಪರ ಸರ್ವಾಧಿಕ ಶತಕ ಬಾರಿ ಸಿದ ಮಾರ್ಟಿನ್ ಕ್ರೋವ್ ದಾಖಲೆ ಯನ್ನು ಅವರು ಸರಿಗಟ್ಟಿದರು.
110 ಇನ್ನಿಂಗ್ಸ್, 5 ಸಾವಿರ ರನ್
ಈ ಸಾಧನೆಯ ವೇಳೆ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಿದರು. ಇದಕ್ಕಾಗಿ ಅವರು ಕೇವಲ 110 ಇನ್ನಿಂಗ್ಸ್ ತೆಗೆದುಕೊಂಡರು. ಇದು ಕೂಡ ನ್ಯೂಜಿಲ್ಯಾಂಡ್ ದಾಖಲೆಯಾಗಿದೆ. ಇಲ್ಲಿಯೂ ಮಾರ್ಟಿನ್ ಕ್ರೋವ್ ದಾಖಲೆಗೆ ಗಂಡಾಂತರ ಬಂದೆರಗಿತು. ಅವರು 117 ಇನ್ನಿಂಗ್ಸ್‌ಗಳಿಂದ 5 ಸಾವಿರ ರನ್ ಗಳಿಸಿದ್ದು ಈವರೆಗಿನ ನ್ಯೂಜಿಲ್ಯಾಂಡ್ ದಾಖಲೆಯಾಗಿತ್ತು. ವಿಲಿಯಮ್ಸನ್ 216 ಎಸೆತಗಳನ್ನು ಯಶಸ್ವಿಯಾಗಿ ಎದುರಿಸಿದ್ದು, 14 ಬೌಂಡರಿ, 3 ಸಿಕ್ಸರ್ ಬಾರಿಸಿದ್ದಾರೆ.
ಕಿವೀಸ್ ಬೃಹತ್ ಮೊತ್ತಕ್ಕೆ ಆರಂಭಿಕರಾದ ಜೀತ್ ರಾವಲ್ ಮತ್ತು ಟಾಮ್ ಲ್ಯಾಥಂ ಕೊಡುಗೆಯೂ ಮಹತ್ವದ್ದಾಗಿತ್ತು. ರಾವಲ್ ಜೀವನಶ್ರೇಷ್ಠ 88 ರನ್ ಹೊಡೆದರೆ (254 ಎಸೆತ, 10 ಬೌಂಡರಿ), ಲ್ಯಾಥಂ ಭರ್ತಿ 50 ರನ್ ಬಾರಿಸಿದರು (103 ಎಸೆತ, 10 ಬೌಂಡರಿ). ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 83 ರನ್, ರಾವಲ್-ವಿಲಿಯಮ್ಸನ್ ಅವರ ದ್ವಿತೀಯ ವಿಕೆಟ್ ಜತೆಯಾಟದಲ್ಲಿ 190 ರನ್ ಒಟ್ಟುಗೂಡಿತು.
ಮಾರ್ಕೆಲ್ 250 ವಿಕೆಟ್
ಒಂದು ಹಂತದಲ್ಲಿ ನ್ಯೂಜಿಲ್ಯಾಂಡ್ ಒಂದೇ ವಿಕೆಟಿಗೆ 273 ರನ್ ಪೇರಿಸಿ ಮುನ್ನುಗ್ಗುತ್ತಿತ್ತು. ಆದರೆ ಮಾರ್ನೆ ಮಾರ್ಕೆಲ್ ಮತ್ತು ಕ್ಯಾಗಿಸೊ ರಬಾಡ 20 ರನ್ ಅಂತರದಲ್ಲಿ 3 ವಿಕೆಟ್ ಕಿತ್ತು ತಂಡವನ್ನು ಉಸಿರಾಡುವಂತೆ ಮಾಡಿದರು. ಬ್ರೂಮ್ ಕೇವಲ 12 ರನ್ ಮಾಡಿ ನಿರ್ಗಮಿಸಿದರೆ, ನಿಕೋಲ್ಸ್ ಮೊದಲ ಎಸೆತಕ್ಕೇ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ಮಾರ್ಕೆಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಕಿತ್ತ ಸಾಧನೆಗೈದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ-314. ನ್ಯೂಜಿ ಲ್ಯಾಂಡ್-4 ವಿಕೆಟಿಗೆ 321 (ವಿಲಿ ಯಮ್ಸನ್ ಬ್ಯಾಟಿಂಗ್ 148, ರಾವಲ್ 88, ಲ್ಯಾಥಂ 50, ಮಾರ್ಕೆಲ್ 74ಕ್ಕೆ 2, ರಬಾಡ 83ಕ್ಕೆ 2).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.