ಸಾವಿರ ರೂ. ಮುಖಬೆಲೆಯ 40 ನೋಟು ಪತ್ತೆ
Team Udayavani, Mar 28, 2017, 3:50 AM IST
ಬಂಟ್ವಾಳ: ಗೋಳ್ತಮಜಲು ಗ್ರಾಮದ ನಿಟಿಲಾಪುರ ಗುಡ್ಡದಲ್ಲಿ ಕರೆಂಡೆಕಾಯಿ ಹೆಕ್ಕುತ್ತಿದ್ದ ಸಂದರ್ಭ ವ್ಯಕ್ತಿಗಳಿಬ್ಬರಿಗೆ ಅಮಾನ್ಯಗೊಂಡಿರುವ ಒಂದು ಸಾವಿರ ರೂ. ಮುಖಬೆಲೆಯ 40 ನೋಟುಗಳು ಲಭ್ಯವಾಗಿದ್ದು, ಅದನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.
ಮಾ. 26ರಂದು ಬೆಳಗ್ಗೆ ಗೋಳ್ತಮಜಲು ಗ್ರಾ.ಪಂ. ಸದಸ್ಯ ಗಿರೀಶ್ ಪಿಲಿಂಜ ಮತ್ತು ಬಾಲಕ ಭರತ್ ಕರೆಂಡೆಕಾಯಿ ಹೆಕ್ಕುತ್ತಿದ್ದಾಗ ಪೊದೆಯಲ್ಲಿ ನೋಟು ಬಿದ್ದಿತ್ತು ಎಂದಿದ್ದಾರೆ. ಇದರಲ್ಲಿ ಎಂಟು ನೋಟುಗಳನ್ನು ಗೆದ್ದಲು ಅಲ್ಪಸ್ವಲ್ಪ ತಿಂದಿತ್ತು.
ನೋಟು ಇಲ್ಲಿಗೆ ತಂದು ಬಿಸಾಡಿದವರು ಯಾರು ಎಂಬುದು ಗೊತ್ತಾಗಿಲ್ಲ. ಇತ್ತೀಚೆಗೆ ಈ ಪರಿಸರದ ದೇವಸ್ಥಾನವೊಂದರಲ್ಲಿ ಕಳವು ನಡೆದಿತ್ತು. ಈ ಸಂದರ್ಭ ಹುಂಡಿಯಲ್ಲಿದ್ದ ಈ ನೋಟುಗಳನ್ನು ಬಿಸಾಡಿರುವ ಸಾಧ್ಯತೆಯೂ ಇದೆ. ನಗರಕ್ಕಿಂತ ಸುಮಾರು ದೂರದಲ್ಲಿರುವ ಈ ಗುಡ್ಡ ಪ್ರದೇಶಕ್ಕೆ ಹೊರಗಿನವರು ತಂದು ಬಿಸಾಡಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ನೋಟನ್ನು ಇಂದು ಠಾಣೆಗೆ ಹಸ್ತಾಂತರಿಸುವ ಸಂದರ್ಭ ಗ್ರಾ.ಪಂ. ಸದಸ್ಯ ಗುರುವಪ್ಪ ಗೌಡ, ವಿನಯ್ ನೆಟ್ಲ ಉಪಸ್ಥಿತರಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.