ನೀರಿನಿಂದ ಹಿಡಿದು ಶ್ಮಶಾನದವರೆಗೆ ದೂರೋ ದೂರು!
Team Udayavani, Mar 28, 2017, 10:06 AM IST
ಉಡುಪಿ: ಕುಡಿಯುವ ನೀರು, ಕಂದಾಯ ಇಲಾಖೆ ಸಮಸ್ಯೆ, ಶ್ಮಶಾನ ಭೂಮಿ, ಅಕ್ರಮ ಮರಳು ಗಾರಿಕೆ, ಕ್ರಷರ್ ಸಮಸ್ಯೆ, ಬಿಎಸ್‌ಎನ್ ಎಲ್ ದೂರವಾಣಿ ಸಮಸ್ಯೆ, ಬೈಂದೂರು ವ್ಯಾಪ್ತಿಯಲ್ಲಿ ಧೂಳಿನಿಂದ ಆರೋಗ್ಯ ಹದಗೆಡುತ್ತಿರುವುದು, ಬೈಂದೂರಿನ ಉಪ್ಪುಂದದಲ್ಲಿ ಉಪಯೋಗಕ್ಕಿಲ್ಲದ ಹೊಳೆಗೆ ಕಟ್ಟಿದ ಅಣೆಕಟ್ಟು, ದೇವಾಲಯದ ತಸ್ತೀಕ್ ಬಟವಾಡೆಯಾಗದಿ ರುವುದು, ಕಟಪಾಡಿಯಲ್ಲಿ ಬೋರ್‌ವೆಲ್ ಕೊರೆದು ಶಾಲೆಗಳಲ್ಲಿ ನೀರು ಬತ್ತಿ ಸಮಸ್ಯೆ.
ಹೀಗೆ ಒಂದೆರಡಲ್ಲ, ಬರೋಬ್ಬರಿ 44 ದೂರುಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 10ರಿಂದ 11 ಗಂಟೆ ವರೆಗೆ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ವೀಕರಿಸಿದರು. ಕುಂದಾಪುರದ ಗ್ರಾಮಾಂತರ ವ್ಯಾಪ್ತಿಯಲ್ಲಿ ಹಳೆ ಬಸ್ ಓಡಿಸುವ ಬಗ್ಗೆ, ಮಠದಕೆರೆಯ ಹೂಳೆತ್ತಲು, ಅಕ್ರಮ ಮರಳುಗಾರಿಕೆ ಸಮಸ್ಯೆ ಇಲ್ಲೂ ಪ್ರತಿಧ್ವನಿಸಿತು. ಉಪ್ಪುಂದದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರೊಬ್ಬರಿಗೆ ಮನೆ ಬೇಕೆಂದು ಕೇಳಿದರು. ಹಕ್ಕುಪತ್ರಕ್ಕೆ ಸಂಬಂಧಿ ಸಿದ ದೂರಿಗೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸೂಚಿಸ ಲಾಯಿತು. ಕ್ರಷರ್ ಸಮಸ್ಯೆ ಇರು ವಲ್ಲಿ ಸ್ಥಳ ತನಿಖೆ ನಡೆಸಿ ಎಫ್ಐಆರ್ ದಾಖಲಿಸಿರುವುದನ್ನು ತಿಳಿಸಲಾಯಿತು. ಟೈಲರ್ ಒಬ್ಬರು ದೇವರಾಜ ಅರಸು ನಿಗಮದಿಂದ ಟೈಲರಿಂಗ್ ನಡೆಸಲು ಸಬ್ಸಿಡಿ ಬೇಕೆಂದಾಗ ಅದಕ್ಕೆ ಅಗತ್ಯದ ದಾಖಲೆ ಕೊಡಲು ಅಧಿಕಾರಿಗಳು ತಿಳಿಸಿದರು. ಅವಂತಿ ಗ್ರಾಮಸ್ಥರು ರಸ್ತೆ ಬೇಕೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.