ಸೇನೆ ಸಂಸದಗೆ ಮತ್ತೆ ಹಾರಾಟ ಭಾಗ್ಯ?


Team Udayavani, Mar 28, 2017, 11:32 AM IST

Ravindra-Gaikwad-600.jpg

ಹೊಸದಿಲ್ಲಿ: ಏರ್‌ ಇಂಡಿಯಾ ಸಿಬಂದಿಗೆ ಚಪ್ಪಲಿಯಲ್ಲಿ ಹೊಡೆದ ವಿವಾದಲ್ಲಿ ಸಿಲುಕಿ, ವಿಮಾನ ಹಾರಾಟ ನಿಷೇಧಕ್ಕೊಳಗಾಗಿರುವ ಸಂಸದ ರವೀಂದ್ರ ಗಾಯಕ್ವಾಡ್‌ಗೆ ಮತ್ತೆ ಹಾರಾಟದ ಅವಕಾಶ ಲಭ್ಯವಾಗುವ ಲಕ್ಷಣವಿದೆ. ಜೊತೆಗೆ ಈ ವಿಚಾರದಲ್ಲಿ ಕಾನೂನು ಬದಲಾವಣೆಗೂ ಕೇಂದ್ರ ಸರಕಾರ ಚಿಂತಿಸಿದೆ. ಮೂಲಗಳ ಪ್ರಕಾರ, ಪ್ರಕರಣ ಕುರಿತಂತೆ ಕೇಂದ್ರ ವಿಮಾನಯಾನ ಸಚಿವ ಅಶೋಕ್‌ ಗಜಪತಿ ರಾಜು, ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರನ್ನು ಗಾಯಕ್‌ವಾಡ್‌ ಅವರು ಭೇಟಿಯಾಗಿದ್ದು, 45 ನಿಮಿಷ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರ ಸರಕಾರ ವಿಮಾನ ಯಾನ ಸಂಸ್ಥೆಗಳ ಹಾರಾಟ ನಿಷಿದ್ಧ ಕ್ರಮವನ್ನು ಹಿಂತೆಗೆಯಲಿದೆ. ಕೇಂದ್ರ ಸರಕಾರ ನಾಗರಿಕ ವಿಮಾನಯಾನ ನಿಯಮಗಳನ್ನು ಬದಲಿಸಲಿದ್ದು, ಸೇವೆ ಮತ್ತು ಸುರಕ್ಷತಾ ಮಾನದಂಡಗಳನ್ನು ಸಮದೂಗಿಸುವ ನಿಯಮ ತರಲಿದೆ. ಜೊತೆಗೆ ಪ್ರಯಾಣ ನಿಷೇಧ ತೀರ್ಮಾನ ವಿಮಾನಯಾನ ಕಂಪನಿಗಳಾಗಿದ್ದರೂ, ಅಂತಿಮ ಹಂತದಲ್ಲಿ ನಿರ್ಧಾರ ಸರಕಾರದ ವಿವೇಚನೆಯದ್ದಾಗಿರುವಂತೆ ಮಾಡಲಾಗುತ್ತದೆ ಎನ್ನಲಾಗಿದೆ. ಪ್ರಕರಣ ಬಳಿಕ ಅವರು  ಮುಂಬೈಗೆ ರೈಲಿನಲ್ಲಿ ತೆರಳುವಂತಾಗಿತ್ತು. 

ಸಂಸತ್ತಿನಲ್ಲಿ ಗದ್ದಲ: ರವೀಂದ್ರ ಗಾಯಕ್ವಾಡ್‌ ಪ್ರಕರಣ ಸಂಸತ್ತಿನ ಎರಡೂ ಮನೆಗಳಲ್ಲಿ ಸೋಮವಾರ ಪ್ರಸ್ತಾಪವಾಗಿದ್ದು, ಸಂಸದರ ಪರ ದನಿ ಕೇಳಿಬಂದಿದೆ. ಜೊತೆಗೆ ವಿವಾದಕ್ಕೆ ಸೌಹಾರ್ದಯುತ ಅಂತ್ಯ ಹಾಡುವ ಬಗ್ಗೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ. ಜೊತೆಗೆ ನಿಷೇಧದಿಂದ ಸಂಸದೀಯ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಪ್ರತಿ ಬಾರಿ ಅವರು ರೈಲಿನಲ್ಲಿ ಸಂಚರಿಸುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟರು. ಚರ್ಚೆ ವೇಳೆ ಮಾತನಾಡಿದ ಶಿವಸೇನಾ ಸಂಸದ ಅರವಿಂದ ಸಾವಂತ್‌ ಹಾರಾಟ ನಿಷೇಧ ಮೂಲಭೂತ ಸ್ವಾತಂತ್ರ್ಯವನ್ನು ನಿರಾಕರಿಸಿದಂತೆ ಎಂದರು. ಶಿವಸೇನಾ ಸಂಸದ ಆನಂದರಾವ್‌ ಅದುÕಲ್‌ ಮಾತನಾಡಿ, ಈ ಹಿಂದೆ ವಿಮಾನದಲ್ಲಿ ಗಲಾಟೆ ಮಾಡಿದ ನಟ ಕಪಿಲ್‌ ಶರ್ಮಾ ಅವರನ್ನು ನಿಷೇಧಿಸಿಲ್ಲ. ಆದರೆ ಗಾಯಕ್‌ವಾಡ್‌ ಅವರನ್ನು ನಿಷೇಧಿಸಿದ್ದು ಸರಿಯೇ ಎಂದು ಕೇಳಿದ್ದಾರೆ. ಅತ್ತ ರಾಜ್ಯಸಭೆಯಲ್ಲೂ ಸಮಾಜವಾದಿ ಸಂಸದರು ಗಾಯಕ್‌ವಾಡ್‌ ಪರ ಮಾತನಾಡಿದ್ದು ಸಂಸದನಾಗಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತೆ ಎಂದಿದ್ದಾರೆ. ಪ್ರಕರಣ ಬಗ್ಗೆ ಮಾತನಾಡಿದ ಸಚಿವ ಗಜಪತಿ ರಾಜು, ವಿಮಾನದಲ್ಲಿ ಇಂತಹ ವರ್ತನೆಗಳು ತಪ್ಪು. ಇಂತಹ ವಿವಾದಗಳಿಂದ ಸಂಸದರಾದವರು ದೂರ ಇರಬೇಕಾಗಿದೆ ಎಂದರು. 

ಒಸ್ಮಾನಾಬಾದ್‌ ಬಂದ್‌: ಗಾಯಕ್‌ವಾಡ್‌ಗೆ ವಿಮಾನ ಹಾರಾಟ ನಿಷೇಧ ವಿರುದ್ಧ ಮತ್ತು ತಮ್ಮ ಸಂಸದರನ್ನು ಹೀಗಳೆಯಲಾಗಿದೆ ಎಂದು ಆರೋಪಿಸಿ, ಸೋಮವಾರ ಗಾಯಕ್ವಾಡ್‌ ಕ್ಷೇತ್ರ ಒಸ್ಮಾನಾಬಾದ್‌ನಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.