ಮಂಡೆ ಬಿಸಿ ಬೇಡ! ಸೆಖೆ ತಡೆಯುವ ಸ್ಕಾರ್ಫ್ಗಳು


Team Udayavani, Mar 29, 2017, 3:45 AM IST

scarf.jpg

ಈ ಸೆಖೆಯಲ್ಲಿ ತಲೆ ಕೂದಲು ಬಿಡುವುದೆಂದರೆ ದೊಡ್ಡ ಕಿರಿಕಿರಿ. ಹಾಗೆಂದು ಹೇರ್‌ಕಟ್ ಮಾಡಿಸಿ ಬಿಟ್ಟರೆ ಬೇಸಿಗೆ ಮುಗಿದ ನಂತರ ತಲೆ ಕೂದಲು ಕೂಡಲೇ ಉದ್ದ ಬೆಳೆಯುದಿಲ್ಲವಲ್ಲ! ಅದಕ್ಕಾಗಿ ಈಗ ಬೇರೆ ಬೇರೆ ತರಹದ ಬನ್‌ ಹೇರ್‌ಸ್ಟೈಲ್ (ತುರುಬು, ಸೂಡಿ) ಟ್ರೈ ಮಾಡೋಕೆ ಉತ್ತಮ ಅವಕಾಶ. ಇದರ ಜೊತೆ ಬೋರಿಂಗ್‌ ಬನ್‌ ಇಂಟೆರೆಸ್ಟಿಂಗ್‌ ಆಗಲು ಹೆಡ್‌ ಸ್ಕಾರ್ಫ್ ಕೂಡ ಬಳಸಬಹುದು. ವಿಭಿನ್ನ ತರಹದ ಹೆಡ್‌ ಸ್ಕಾರ್ಫ್ ಹೇಗೆ ಬಳಸೋದು ಅನ್ನುವ ಬಗ್ಗೆ ಇಲ್ಲಿವೆ ಕೆಲವು ಕೂಲ್ ಟಿಪ್ಸ್

ಹೆಡ್‌ ಸ್ಕಾರ್ಫ್ ಅಂದಾಗ ತಲೆಗೆ ಪ್ರತ್ಯೇಕವಾಗಿ ಸ್ಕಾರ್ಫ್ ಖರೀದಿಸಬೇಕಾಗಿಲ್ಲ. ಕತ್ತಿನ ಸುತ್ತ ಕಟ್ಟಿಕೊಳ್ಳೋ ಸಮ್ಮರ್‌ ಸ್ಕಾರ್ಫ್ನ್ನೇ ತಲೆಗೆ ಕಟ್ಟಿಕೊಂಡರಾಯಿತು. ಬೆವರು ಹೀರುವಂಥ ಬಟ್ಟೆ ಅಂದರೆ ಹತ್ತಿಯ ಬಟ್ಟೆಯ ಸ್ಕಾರ್ಫ್ ಬೇಸಿಗೆಗೆ ಉತ್ತಮ. ಹಾಗೆಂದು ದೊಡ್ಡ ಬೆಡ್‌ಶೀಟ…ನಂಥ ಬಟ್ಟೆಯನ್ನು ಮುಂಡಾಸಿನಂತೆ ಕಟ್ಟಿಕೊಂಡರೆ ಸೆಖೆ ಇನ್ನೂ ಹೆಚ್ಚಾಗುತ್ತದೆ. ಚೌಕ/ ಕರವಸ್ತ್ರ (ಹ್ಯಾಂಡ್‌ ಕಚೀìಫ್) ಕ್ಕಿಂತ ದೊಡ್ಡದಾದ ಮತ್ತು ಶಾಲಿಗಿಂತ ಚಿಕ್ಕದಾದ ಬಟ್ಟೆಯನ್ನು ಸ್ಕಾರ್ಫ್ ಆಗಿ ಬಳಸಬಹುದು. 

ಚೌಕ ಅಥವಾ ಆಯತ (ರಕ್ಟ್ಯಾಂಗಲ್ ) ಆಕಾರದಲ್ಲೇ ಸ್ಕಾರ್ಫ್ ಇರಬೇಕೆಂದು ಏನಿಲ್ಲ. ತ್ರಿಕೋನ ಮತ್ತು ವೃತ್ತಾಕಾರದಲ್ಲೂ ಸ್ಕಾರ್ಫ್ ಲಭ್ಯವಿವೆ! ಇದನ್ನು ಕಟ್ಟಿಕೊಳ್ಳುವುದೂ ಬ್ರಹ್ಮವಿದ್ಯೆ ಅಲ್ಲ. ಚಿಕ್ಕವರಿ¨ªಾಗ ಯಾವ ರೀತಿ ತಲೆಗೆ ರಿಬ್ಬನ್‌ ಸುತ್ತಿ ಕಟ್ಟುತ್ತಿದ್ದೆವೋ ಅದೇ ತರಹ ಸ್ಕಾಫ‌ìನ್ನೂ ಕಟ್ಟಿಕೊಂಡರಾಯಿತು. ನೀವೇ ಕೆಲವು ಪ್ರಯೋಗವನ್ನೂ ಮಾಡಿ ನೋಡಬಹುದು. 

ನೆನಪಿರಲಿ, ತಲೆಗಿಂತ ತುಂಬ ದೊಡ್ಡದಾಗಿ ಕಾಣಬಾರದು ನೀವು ಕಟ್ಟಿಕೊಂಡ ಸ್ಕಾಫ್ì. ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳೋದರಿಂದ ಹಣೆ ಮತ್ತು ಕಣ್ಣ ಮೇಲೆ ಆಗಾಗ ಕೂದಲು ಬೀಳ್ಳೋದನ್ನ ತಡೀಬಹುದು. ಮತ್ತು ತಲೆಯಿಂದ ಮುಖದ ಮೇಲೆ ಬೆವರೂ ಇಳಿಯದಂತೆ ತಡೆಗಟ್ಟಬಹುದು. ಎಲ್ಲಕ್ಕಿಂತ ದೊಡ್ಡ ಲಾಭ ಏನೆಂದರೆ ಟ್ರೆಂಡಿ ಮತ್ತು ಸ್ಟೈಲಿಶ್‌ ಆಗಿ ಕಾಣಬಹುದು!

ಸ್ಕಾರ್ಫ್ ಬಳಸೋದರಿಂದ ಮಾಮೂಲಿ ಜಡೆ, ಜುಟ್ಟು, ತುರುಬು ಎಲ್ಲದಕ್ಕೂ ಹೊಸ ಮೆರಗು ಸಿಗುತ್ತದೆ. ಅಲ್ಲದೆ ತಲೆ ಬಾಚಿಕೊಳ್ಳಲು ಪುರುಸೊತ್ತು ಇಲ್ಲದಿದ್ದರೆ ಅಥವಾ ಮನಸ್ಸಿಲ್ಲದಿದ್ದರೆ ಸ್ಕಾರ್ಫ್ ಉಟ್ಟು ತಲೆ ಕೂದಲನ್ನು ಮುಚ್ಚಬಹುದು. ಫಾರ್ಮಲ್ಸ್ ಜೊತೆ ನೆಕ್‌ ಸ್ಕಾರ್ಫ್ ಉಡಬಹುದು ಆದರೆ ಹೆಡ್‌ ಸ್ಕಾರ್ಫ್ ತೊಡಬಾರದು. ಇದು ಕೇವಲ ಕ್ಯಾಶುವಲ್ಸ್ ಜೊತೆ ಉಡತಕ್ಕದ್ದು. ಪಲಾಝೊà, ಹ್ಯಾರಂ, ಬೆಲ್ ಬಾಟಮ್, ಜೀನ್ಸ್,  ಬೂಟ್ ಕಟ್, ಥ್ರಿ ಫೋರ್ತ್‌, ಮುಂತಾದ ಪ್ಯಾಂಟ್‌ಗಳ ಜೊತೆ, ಲಂಗ, ಮಿಡಿ, ಶಾರ್ಟ್ಸ್ ಮತ್ತು ಡ್ರೆಸ್‌ಗಳ ಜೊತೆ ಹೆಡ್‌ ಸ್ಕಾರ್ಫ್ ತೊಡಬಹುದು. 

ಇನ್ನು ಚೂಡಿದಾರ್‌ ಅಥವಾ ಸಲ್ವಾರ್‌ ಕಮೀಜ್ ಜೊತೆ ತೊಡುವುದಾದರೆ ರೆಟ್ರೋ ಸ್ಟೈಲ್ನಂತೆ ಕಾಣುತ್ತದೆ! ಹಾಗಾಗಿ ಥೀಮ್ಪಾರ್ಟಿ, ಫ್ಯಾನ್ಸಿ ಡ್ರೆಸ್‌ ಅಥವಾ ಫ್ಯಾಷನ್‌ ಶೋನಲ್ಲಿ ಈ ರೀತಿ ಕಾಂಬಿನೇಶನ್‌ ಮಾಡಲು ಸಾಧ್ಯ. ಒಂದು ವೇಳೆ ಚೂಡಿದಾರ್‌ ಅಥವಾ ಸಲ್ವಾರ್‌ ಕಮೀಜ್ ಜೊತೆ ಸ್ಕಾರ್ಫ್ ತೊಡಲೇಬೇಕೆಂದಿದ್ದರೆ ದುಪ್ಪಟ್ಟ ಹಾಕಿಕೊಳ್ಳದಿರಿ. ಇಲ್ಲವೇ, ದುಪಟ್ಟಾವನ್ನೇ ಸ್ಕಾರ್ಫ್ನಂತೆ ಕಟ್ಟಿಕೊಳ್ಳಿ.

ಅನಿಮಲ್ ಪ್ರಿಂಟ್‌ನ ಸ್ಕಾರ್ಫ್ಗಳು ಈಗ ಫ್ಯಾಷನ್‌ನಲ್ಲಿ ಇಲ್ಲ. ಹಾಗಾಗಿ ಅಂತ ಸ್ಕಾರ್ಫ್ಗಳನ್ನೂ ತೊಡಬೇಡಿ. ಬದಲಿಗೆ ಫ್ಲೋರಲ್‌ ಪ್ರಿಂಟ್‌, ಇಂಡಿಯನ್‌ ಡಿಸೈನ್‌ ಮತ್ತು ಪೋಲ್ಕಾ ಡಾಟ್ಸ… ನ ಸ್ಕಾರ್ಫ್ ತೊಟ್ಟು ನೋಡಿ. ಸ್ಕಾರ್ಫ್ ಪ್ಲೇನ್ ಬಣ್ಣ¨ªಾಗಿದ್ದರೆ ಬರೀ ಬೋರಿಂಗ್‌ ಅಷ್ಟೇ ಅಲ್ಲ, ಬದಲಿಗೆ ಬ್ಯಾಂಡೇಜ… ನಂತೆಯೂ ಕಾಣುತ್ತದೆ. ಆದ್ದರಿಂದ ಪ್ಲೇನ್ ಸ್ಕಾರ್ಫ್ ಬದಲು ಬಣ್ಣ-ಬಣ್ಣದ ಚಿತ್ತಾರವಿರೋ ಸ್ಕಾರ್ಫ್ ಗಳನ್ನೇ ಆಯ್ಕೆ ಮಾಡಿ. ಎಲ್ಲರ ತಲೆಯೂ ನಿಮ್ಮ ತಲೆಯತ್ತಲೇ ತಿರುಗಿ ನೋಡಲಿ!

– ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.