ನೇಮಕ ಗದ್ದಲಕ್ಕೆ ಕಲಾಪ ಬಲಿ
Team Udayavani, Mar 29, 2017, 3:45 AM IST
ನವದೆಹಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಆಯೋಗಗಳ ಹುದ್ದೆಗಳ ಭರ್ತಿಯಲ್ಲಾಗಿರುವ ವಿಳಂಬವು ಮಂಗಳ ವಾರ ರಾಜ್ಯಸಭೆಯ ಕಲಾಪವನ್ನು ಕೊಚ್ಚಿ ಹೋಗುವಂತೆ ಮಾಡಿತು.
ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸರ್ಕಾರ ಹೇಳಿದರೂ, ಸುಮ್ಮನಾಗದ ಪ್ರತಿಪಕ್ಷಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿದವು. ಕಾಂಗ್ರೆಸ್, ಎಸ್ಪಿ, ಜೆಡಿಯು, ಬಿಎಸ್ಪಿ ಮತ್ತಿತರ ಪಕ್ಷಗಳು ವಾರದೊಳಗೆ ಹುದ್ದೆ ಭರ್ತಿ ಮಾಡುವುದಾಗಿ ಭರವಸೆ ನೀಡುವಂತೆ ಆಗ್ರಹಿಸಿ ಗದ್ದಲವೆಬ್ಬಿಸಿದ ಕಾರಣ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ನೇಮಕ ಕುರಿತು ಸ್ಪಷ್ಟನೆ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹೊÉàಟ್, “ಪಂಚರಾಜ್ಯಗಳ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ, ನೇಮಕದಲ್ಲಿ ವಿಳಂಬವಾಯಿತು. ಈಗ ಪ್ರಕ್ರಿಯೆ ಆರಂಭವಾಗಿದೆ. ಎಸ್‌ಸಿ ಮತ್ತು ಸಫಾಯಿ ಕರ್ಮಚಾರಿ ಆಯೋಗದ ಮುಖ್ಯ ಸ್ಥರನ್ನು ನೇಮಕ ಮಾಡಲಾಗಿದೆ,’ ಎಂದರು. ಜತೆಗೆ, ಹಿಂದಿನ ಸರ್ಕಾರಗಳಿದ್ದ ಸಂದರ್ಭದಲ್ಲೂ ಈ ರೀತಿ ವಿಳಂಬವಾಗಿತ್ತು ಎಂದರು.
ಸದನದ ಬಾವಿಗಿಳಿದ ಸದಸ್ಯರು: ಸಚಿವರಿಗೆ ಮಾತನಾಡಲು ಅವಕಾಶ ನೀಡದ ಪ್ರತಿಪಕ್ಷ ಸದಸ್ಯರು, ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದರು. ಭಾರೀ ಗದ್ದಲ ಸೃಷ್ಟಿಯಾದ ಕಾರಣ, ಊಟದ ವಿರಾಮಕ್ಕೆ ಮುಂಚೆ ಮೂರು ಬಾರಿ ಕಲಾಪವನ್ನು ಮುಂದೂಡಬೇಕಾಯಿತು. ವಿರಾಮದ ಬಳಿಕ 2 ಬಾರಿ ಮುಂದೂಡಲ್ಪಟ್ಟು, ಕೊನೆಗೆ ಪರಿಸ್ಥಿತಿ ತಹಬದಿಗೆ ಬರದ ಹಿನ್ನೆಲೆಯಲ್ಲಿ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು.
ವಶಕ್ಕೆ ಪಡೆದಿದ್ದು 600 ಕೋಟಿ
ನೋಟುಗಳ ಅಮಾನ್ಯದ ಬಳಿಕ ಆದಾಯ ತೆರಿಗೆ ಇಲಾಖೆಯು ಸುಮಾರು 600 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ, ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖೀತ ಉತ್ತರ ನೀಡುತ್ತಾ ಅವರು ಈ ಮಾಹಿತಿ ನೀಡಿದ್ದಾರೆ. 1,100 ಪ್ರಕರಣಗಳಿಗೆ ಸಂಬಂ ಧಿಸಿ ಐಟಿ ಇಲಾಖೆ ಶೋಧ ಕಾರ್ಯ ಮತ್ತು ದಾಳಿ ನಡೆಸಿತ್ತು. ಜತೆಗೆ, ಅನುಮಾನಾಸ್ಪ ದವಾಗಿ ಹೆಚ್ಚಿನ ಮೊತ್ತ ಠೇವಣಿಯಿಟ್ಟಂಥ 5,100 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದಿದ್ದಾರೆ ಜೇಟ್ಲಿ.
ನಕಲಿ ನೋಟು ಪತ್ತೆಯಾಗಿಲ್ಲ
ನೋಟುಗಳ ಅಮಾನ್ಯದ ಬಳಿಕ ಉತ್ತಮ ಗುಣಮಟ್ಟದ ಹೊಸ ನಕಲಿ ನೋಟುಗಳು ಪತ್ತೆಯಾಗಿಲ್ಲ. ಆದರೆ, ಕೆಲವು ಸ್ಕ್ಯಾನ್ ಮಾಡ ಲಾದ ಮತ್ತು ಫೋಟೋಕಾಪಿ ಮಾಡಲಾದ ನೋಟುಗಳನ್ನು ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಮತ್ತು ಎನ್‌ಐಎ ವಶಪಡಿಸಿ ಕೊಂಡಿವೆ. ನಕಲಿ ನೋಟುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಶೇಷ ಘಟಕ ರಚನೆ ಸೇರಿ ಹಲವು ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿತ್ತ ಖಾತೆ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಅಪನಗ ದೀಕರಣ ಘೋಷಣೆ ಬಳಿಕ ಸರ್ಕಾರದ ಸೂಚನೆಯನ್ವ ಯ ಭಾರತೀಯ ವಾಯು ಪಡೆಯು ಒಟ್ಟು 604 ಟನ್ ಕರೆನ್ಸಿ ನೋಟುಗಳನ್ನು ದೇಶಾದ್ಯಂತ ಸಾಗಿಸಿದೆ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಶ್ ಭಾಮ್ರೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.