ನಾನು ಅಹಿಂದ; ಸರಕಾರವಲ್ಲ: ಸಿಎಂ
Team Udayavani, Mar 29, 2017, 2:22 AM IST
ಬೆಂಗಳೂರು: ‘ಅಹಿಂದ’ ಪರ ಎಂದು ಹೇಳಿಕೊಳ್ಳಲು ನನಗೆ ಮುಜುಗರವಿಲ್ಲ. ಆದರೆ, ನಮ್ಮ ಸರಕಾರ ಅಹಿಂದಾಗೆ ಮಾತ್ರ ಸೀಮಿತವೂ ಅಲ್ಲ. ಸಾಮಾಜಿಕ ನ್ಯಾಯ ನಮ್ಮ ಬದ್ಧತೆ, ಎಲ್ಲ ಜಾತಿ ಸಮುದಾಯದವರನ್ನು ಒಳಗೊಂಡ ಸಮಗ್ರ ಅಭಿವೃದ್ಧಿ ನಮ್ಮ ನಂಬಿಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಅಹಿಂದ ಪರ ಹಾಗೂ ಚುನಾವಣಾ ದೃಷ್ಟಿಯ ಬಜೆಟ್, ಸಾಲದ ಭಾರ ಹೊರಿಸಿದ ಸರಕಾರ ಎಂಬ ಟೀಕೆಗಳಿಗೆ ತನ್ನದೇ ಆದ ಧಾಟಿಯಲ್ಲಿ ತಿರುಗೇಟು ನೀಡಿ, ಶೇ. 24.1 ರಷ್ಟಿರುವ ದಲಿತರು, ಶೇ. 15ರಷ್ಟಿರುವ ಅಲ್ಪಸಂಖ್ಯಾಕರು, ಶೇ. 27.5 ರಷ್ಟಿರುವ ಹಿಂದುಳಿದ ವರ್ಗದವರನ್ನು ಬಿಟ್ಟು ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯ? ಹಾಗೆಂದು ಬೇರೆ ವರ್ಗದವರನ್ನೂ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ವಿದ್ಯಾಸಿರಿ ಯೋಜನೆಯಡಿ 3 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 15 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗಿದೆ. ಇದು ಕೇವಲ ಒಂದು ವರ್ಗಕ್ಕೆ ಮಾತ್ರ ಸೇರುತ್ತಾ. ವಿಪಕ್ಷ ಬಿಜೆಪಿ ನಮ್ಮ ಬಜೆಟ್ ಅನ್ನು ಜಾತಿ, ಧರ್ಮ ಆಧಾರದ ‘ಕನ್ನಡಕ’ ಅಥವಾ ದುರ್ಬೀನು ಹಾಕಿಕೊಂಡು ನೋಡುತ್ತಿದೆಯಷ್ಟೇ ಎಂದರು.
ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ರಿಯಾಯಿತಿ ದರದಲ್ಲಿ ಊಟ, ತಿಂಡಿ ಪೂರೈಸಲು ಉದ್ದೇಶಿಸಿರುವ ನಮ್ಮ ಕ್ಯಾಂಟೀನ್‌ಗೆ ‘ಇಂದಿರಾ’ ಕ್ಯಾಂಟೀನ್ ಎಂದು ನಾಮಕರಣ ಮಾಡುವುದಾಗಿ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಈಗಲೂ ನಾವು ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ, ಕೇಂದ್ರ ಸರಕಾರ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದ ಶೇ. 50ರಷ್ಟು ಸಾಲವನ್ನು ಮನ್ನಾ ಮಾಡಿದರೆ ನಾವೂ ಸಹಕಾರ ಸಂಘಗಳಲ್ಲಿ ಮಾಡಿರುವ ಶೇ. 50ರಷ್ಟು ಸಾಲ ಮನ್ನಾ ಮಾಡಲು ಸಿದ್ಧ ಎಂದು ಸಿದ್ದರಾಮಯ್ಯತಿಳಿಸಿದರು.
ಬಿಜೆಪಿಯವರು ಹಿಂದೆ ಗುಜರಾತ್ ಮಾದರಿ ಎನ್ನುತ್ತಿದ್ದರು. ಆದರೆ, ಈಗ ಯಾಕೋ ಉತ್ತರಪ್ರದೇಶ ಮಾದರಿ ಅಂತಿದ್ದಾರೆ. ಆದರೆ, ನಮಗೆ ಸಮಗ್ರ ಕರ್ನಾಟಕ ಅಭಿವೃದ್ಧಿಯೇ ಮಾದರಿ. ಬಿಜೆಪಿ ಏನೇ ಹೇಳಿದರೂ ಅದರ ಹಿಂದೆ ಆರೆಸ್ಸೆಸ್ ಇರುತ್ತದೆ. ಆರೆಸ್ಸೆಸ್ ಬಿಟ್ಟು ಬಿಜೆಪಿಯಿಲ್ಲ, ಬಿಜೆಪಿ ಬಿಟ್ಟು ಆರೆಸ್ಸೆಸ್ ಇಲ್ಲ. ಆರೆಸ್ಸೆಸ್‌ನ ರಾಜಕೀಯ ಮುಖವಾಡ ಅಥವಾ ಆಕಾರವೇ ಬಿಜೆಪಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.