ಮನೆ ಕಟ್ಟುವ ಮೊದಲು 3D ಡಿಸೈನ್‌ 


Team Udayavani, Mar 31, 2017, 3:45 AM IST

Mane-sss.jpg

ಜೀವನದಲ್ಲಿ ತನ್ನದೊಂದು ಸ್ವಂತ ಮನೆ ನಿರ್ಮಿಸಬೇಕು, ಅದರಲ್ಲಿ ತನ್ನ ಪುಟ್ಟ ಸಂಸಾರದೊಂದಿಗೆ ನಗುನಗುತಾ ಬಾಳಬೇಕು ಅನ್ನೋದು ಮನುಷ್ಯನ ಸಹಜ ಆಸೆ. ಆದರೆ ಗೃಹ ನಿರ್ಮಾಣ ಅನ್ನೋದು ಸುಲಭದ ಮಾತೆ? ಅಡಿಪಾಯದಿಂದ ಹಿಡಿದು ಗೃಹಪ್ರವೇಶದ ತನಕ ಪ್ರತಿಯೊಂದು ಕೆಲಸವನ್ನೂ ಶ್ರದ್ಧೆ-ಭಕ್ತಿಯಿಂದ ಮಾಡಬೇಕಾಗುತ್ತದೆ. ಪ್ರತೀ ಹಂತದಲ್ಲಿಯೂ ದುಡ್ಡಿನ ಕಂತೆ-ಕಂತೆ ಎಣಿಸಿ ಸುರಿಯಬೇಕಾಗುತ್ತದೆ. ಎಲ್ಲ ಮುಗಿದು ಗೃಹಪ್ರವೇಶದ ಹೊತ್ತಿಗೆ ದುಡ್ಡೆಲ್ಲ ಖಾಲಿಯಾಗಿ “ಉಸ್ಸಪ್ಪ ‘ ಅನ್ನಿಸಿಬಿಡುತ್ತದೆ. ಇನ್ನು ಇಷ್ಟೆಲ್ಲ ಖರ್ಚು ಮಾಡಿಕಟ್ಟಿದ ಮನೆ ಎಷ್ಟೋ ಸಲ ನಾವೆಣಿಸಿದಂತೆ ಬರಲಾರದು. ಹೊರಾಂಗಣ ವಿನ್ಯಾಸ ಸರಿಯಿಲ್ಲ, ಈ ಬಣ್ಣ ಚೆನ್ನಾಗಿಲ್ಲ, ಒಳಾಂಗಣ ವಿನ್ಯಾಸದಲ್ಲಿ ಏನೋ ಕೊರತೆಯಿದೆ ಅಂತೆಲ್ಲ  ಪಟ್ಟಿ ಬೆಳೆಯುತ್ತ ಹೋಗುತ್ತದೆ. 

ಅಂದ ಹಾಗೆ ಇಷ್ಟೊಂದು ಪರಿಶ್ರಮ ಪಟ್ಟು ಕಟ್ಟಿದ ಮನೆ ನಮ್ಮ ಎಣಿಕೆಯಂತೆ ರೂಪುಗೊಳ್ಳದಿರಲು ಮುಖ್ಯಕಾರಣ ಅದರ ವಿನ್ಯಾಸದ ಕೊರತೆ. ಸಾಮಾನ್ಯವಾಗಿ ನಾವು ಮನೆ ಕಟ್ಟಲು ಆರ್ಕಿಟೆಕ್ಟ್ ಬಳಿಯೋ, ಇಂಜಿನಿಯರ್‌ ಬಳಿಯೋ ತೆರಳುತ್ತೇವೆ. ಅವರು ನಮ್ಮ ಅಭಿರುಚಿ, ಖರ್ಚು-ವೆಚ್ಚ , ಬೇಕು-ಬೇಡಗಳ ಪಟ್ಟಿ ಸಿದ್ಧಪಡಿಸಿ ಕೆಲವೊಂದು ನಕ್ಷೆಗಳನ್ನು ಬರೆದುಕೊಡುತ್ತಾರೆ. ಅದರದಲ್ಲಿ ನಮಗೆ ರುಚಿಸಿದ ಯಾವುದಾದರೊಂದು ನಕ್ಷೆ ಆಯ್ದುಕೊಟ್ಟರೆ ಮುಗಿಯಿತು, ಇಂಜಿನಿಯರುಗಳು ಗೃಹ ನಿರ್ಮಾಣಕ್ಕೆ ಮುಂದಡಿಯಿಡುತ್ತಾರೆ. ಆದರೆ, ಕಟ್ಟಡದ ಸ್ಪಷ್ಟಚಿತ್ರಣ ಸಿಗುವುದು ಅದು ಮುಕ್ತಾಯದ ಹಂತಕ್ಕೆ ಬಂದಾಗಲೇ. ಆಗ ನಾವು ಅದು ಸರಿ ಇಲ್ಲ, ಇದು ಹೀಗಾಗಬೇಕಿತ್ತು ಅಂತ ತಗಾದೆ ತೆಗೆಯೋ ಹಾಗಿಲ್ಲ. ಒಂದು ಪಕ್ಷ ಅಂತಿಮಘಟ್ಟದಲ್ಲಿ ಹೊರಾಂಗಣ ವಿನ್ಯಾಸ ಬದಲಿಸಿದಲ್ಲಿ ಕಟ್ಟಡವನ್ನು ಅಲ್ಲಲ್ಲಿ ಒಡೆಯಬೇಕಾದೀತು; ಇದರಿಂದ ಸಮಯ-ದುಡ್ಡು ಎಲ್ಲ ವ್ಯರ್ಥ, ಅಂತೆಯೇ ಕಟ್ಟಡದ ಗುಣಮಟ್ಟಕ್ಕೂ ಕೊಡಲಿಯೇಟು ಕೊಟ್ಟಂತೆ. ಹಾಗಾದರೆ, ಇದಕ್ಕೇನು ಪರಿಹಾರ? ನಮ್ಮ ಕನಸಿನ ಮನೆಯ ಚಿತ್ರಣ ಮೊದಲೇ ಸಿಕ್ಕಿಬಿಟ್ಟರೆ ಎಷ್ಟು ಚೆನ್ನ ಅಲ್ವಾ ? 

3ಡಿ ಡಿಸೈನ್‌ಎಂದರೆ…
ಕಟ್ಟಡ ಯಾವುದೇ ಇರಲಿ, ಅದು ರೂಪುಗೊಳ್ಳುವ ಮೊದಲೇ ಅದರ ಅಂದ-ಚೆಂದವನ್ನು ಕಣ್ತುಂಬಿಕೊಳ್ಳಲು ಇರುವ ಏಕೈಕ ಮಾರ್ಗವೇ 3ಡಿ ಡಿಸೈನ್‌. ಮೊದಲೆಲ್ಲ ಕಟ್ಟಡದ ಹೊರಾಂಗಣ ವಿನ್ಯಾಸವನ್ನು 2ಡಿ (ಎರಡು ಆಯಾಮ) ವಿಧಾನದ ಮೂಲಕ ಚಿತ್ರಿಸುತ್ತಿದ್ದರು. ಇದರಲ್ಲಿ ಕಟ್ಟಡದ ಒಂದು ಪಾರ್ಶ್ವವನ್ನು ಅಂದಾಜಿಸಬಹುದಿತ್ತು, ಆದರೆ, ಕಟ್ಟಡದ ಸ್ಪಷ್ಟಚಿತ್ರಣ ಸಿಗುತ್ತಿರಲಿಲ್ಲ. ಈಗ 3ಡಿ ಡಿಸೈನ್‌ ತಂತ್ರಜ್ಞಾನದಿಂದ ಮೂರು ಆಯಾಮದ ಚಿತ್ರವನ್ನು ಪಡೆಯಬಹುದು. ಹೀಗಾಗಿ, ಕಟ್ಟಡ ನಿರ್ಮಾಣಕ್ಕೂ ಮೊದಲೇ ಅದರ ಚಿತ್ರಪಟ ನಿಮ್ಮ ಮುಂದೆ ರೆಡಿಯಾಗಿರುತ್ತೆ.ಇದರಿಂದ ಕಟ್ಟಡದ ಬಣ್ಣ, ವಿನ್ಯಾಸ, ಕಿಟಕಿ-ಬಾಗಿಲುಗಳ ಸ್ಥಾನ ಎಲ್ಲವನ್ನೂ ಸ್ಪಷ್ಟವಾಗಿ ಕಂಡುಕೊಳ್ಳಬಹುದು.

ಉಪಯೋಗಗಳು
1. ಮೊತ್ತ ಮೊದಲನೆಯದಾಗಿ ಕಟ್ಟಡದ ಸ್ಪಷ್ಟಚಿತ್ರಣ ಸಿಗುವುದರಿಂದ ಅಂತಿಮ ಸ್ಪರ್ಶದ (ಫೈನಲ್‌ ಟಚ್‌) ಬಗ್ಗೆ ಅನಗತ್ಯ ಗೊಂದಲವಿರದು.
2.ಕಿಟಕಿ-ಬಾಗಿಲುಗಳ ವಿನ್ಯಾಸ, ಗೋಡೆಗಳ ಬಣ್ಣದ ಆಯ್ಕೆಗೆ ನೀವು ಸ್ವತಂತ್ರರು.
3.ನಿಮ್ಮ ಅಭಿರುಚಿಗೆ ತಕ್ಕಂತೆ ಹೊರಾಂಗಣ ವಿನ್ಯಾಸ, ಪಾರ್ಕಿಂಗ್‌ ಜಾಗ, ಸ್ವಿಮ್ಮಿಂಗ್‌ ಪೂಲ್‌ ಮುಂತಾದ ಅಗತ್ಯಗಳ ಬಗ್ಗೆ ನಿರ್ಧರಿಸುವ ಆಯ್ಕೆ.
4.ಹೊರಾಂಗಣ ವಿನ್ಯಾಸ ಹಾಗೂ ಒಳಾಂಗಣ ವಿನ್ಯಾಸದ ಖರ್ಚು-ವೆಚ್ಚಗಳ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳಬಹುದು.
5.ಕಟ್ಟಡದ ಸ್ಪಷ್ಟಚಿತ್ರಣವಿರುವುದರಿಂದ ಕಾರ್ಮಿಕರಿಗೆ ಅನಗತ್ಯ ಅನುಮಾನಗಳಿರದೆ ನಿರಾತಂಕವಾಗಿ ಕೆಲಸ ಸಾಗುವುದು.
6.ಮನೆಯ ಒಳಾಂಗಣ ವಿನ್ಯಾಸವನ್ನು ಇದೇ ತಂತ್ರಜ್ಞಾನ ದಿಂದ ರಚಿಸಬಹುದು. ಇದರಿಂದ ಅಗತ್ಯ ವಸ್ತುಗಳನ್ನು ವ್ಯವಸ್ಥಿತ ವಾಗಿ ಜೋಡಿಸಿ ಕೊಠಡಿಗಳ ಜಾಗ ವ್ಯರ್ಥವಾಗುವುದನ್ನು ತಪ್ಪಿಸಬಹುದು.
7.ಗೋಡೆಗಳಿಗೆ ಬಣ್ಣಗಳ ಹೊರತಾಗಿ ವಾಲ್‌ಪೇಪರ್‌, ಟೆಕ್ಷ$cರ್‌, ವಾಲ್‌ಕ್ಲಾಡಿಂಗ್‌ ಇನ್ನಿತರ ಆಧುನಿಕ ವಸ್ತುಗಳ ಮೆರುಗು ನೀಡಬಹುದು.

ತಗಲುವ ವೆಚ್ಚ 
ಇದೊಂದು ತಾಳ್ಮೆ ಬೇಡುವ ಕೆಲಸ, ಹಲವು ಗಂಟೆಗಳ ಕಾಲ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸಮಾಡಬೇಕಾಗುತ್ತದೆ. ಆದ್ದರಿಂದ ಡಿಸೈನ್‌ ಮಾಡಲು ತಗಲುವ ವೆಚ್ಚದ ಬಗ್ಗೆ ನಿಖರವಾಗಿ ಹೇಳಲಾಗದು. ಸುಮಾರು ಐದು ಸಾವಿರ ರೂಪಾಯಿಯಿಂದ ಹಿಡಿದು ಲಕ್ಷಗಟ್ಟಲೆ ತನಕ ಶುಲ್ಕ ವಿಧಿಸಬಹುದು. ಅದು ಕಟ್ಟಡದ ಗಾತ್ರ, ವಿನ್ಯಾಸದ ಮೇಲೆ ಅವಲಂಬಿತವಾಗಿರುತ್ತದೆ. 

– ಏಡಿ

ಟಾಪ್ ನ್ಯೂಸ್

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.