ಮನ ಸೂರೆಗೊಂಡ ಮೈಮೆದ ಬಬ್ಬುಸ್ವಾಮಿ
Team Udayavani, Mar 31, 2017, 3:50 AM IST
ಸಾಹಿತಿ ಜಾನಕಿ ಬ್ರಹ್ಮಾವರ ಇವರ ಕೃತಿಯನ್ನು ಆಧರಿಸಿ ವಿ| ಕೆ. ಭವಾನಿಶಂಕರ್ ಇವರ ನೃತ್ಯ ನಿರ್ದೇಶನದಲ್ಲಿ ಮೈಮೆದ ಬಬ್ಬುಸ್ವಾಮಿ ಎಂಬ ನೃತ್ಯ ರೂಪಕವನ್ನು ಉಡುಪಿಯ ನೇಜಾರು ಕೆಳಾರ್ಕಳಬೆಟ್ಟು ಇಲ್ಲಿ ಭವ್ಯವಾಗಿ ನಿರ್ಮಿಸಿದ ನವೀಕೃತ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಉದ್ಘಾಟನಾ ಸಮಾರಂಭದ ಸಮಾರೋಪ ವೇದಿಕೆಯಲ್ಲಿ ನಡೆಸಿಕೊಟ್ಟರು.
ಶ್ರೀ ಬಬ್ಬುಸ್ವಾಮಿಯ ಮಹಿಮೆಯನ್ನು ಸಾರುವ ನೃತ್ಯ ರೂಪಕದಲ್ಲಿ ಶ್ರೀ ಬಬ್ಬುಸ್ವಾಮಿ ತಾಯಿ ಕಚ್ಚಾರ ಮಾಲ್ತಿದೇವಿಯ ಪುಣ್ಯ ಗರ್ಭದಲ್ಲಿ ಜನಿಸಿ ತನ್ನ ಹುಟ್ಟಿನಿಂದಲೇ ಕಾರ್ಣಿಕದ ಮಹಿಮೆಯನ್ನು ತೋರುವ ಅತ್ಯಪೂರ್ವ ಚಿತ್ರಣವು ವಿ| ಭವಾನಿಶಂಕರ್ ಅವರ ನೃತ್ಯ ನಿರ್ದೇಶನದಲ್ಲಿ ಅತ್ಯದ್ಭುತವಾಗಿ ಮೂಡಿಬಂತು. ಶಾಸ್ತ್ರೀಯ ಶೈಲಿಯಲ್ಲಿ ಇದು ಒಂದು ವಿನೂತನ ಪ್ರಯೋಗ. ಪುರಾಣ ಪ್ರಸಂಗಗಳನ್ನು ಆಧರಿಸಿ ದೇವಾಧಿದೇವತೆಗಳನ್ನು ಸ್ತುತಿಸಿ ನೃತ್ಯ ರೂಪಕವನ್ನು ಸಾಮಾನ್ಯವಾಗಿ ಎಲ್ಲರೂ ಸಾದರಪಡಿಸುತ್ತಾರೆ. ಆದರೆ ಒಂದು ದೈವದ ಕಾರ್ಣಿಕವನ್ನು ಸಾರುವ ಶಾಸ್ತ್ರೀಯ ನೃತ್ಯ ರೂಪಕ ಸಾದರಪಡಿಸಿರುವುದು ಬಹುಶಃ ಅಪರೂಪದ ಪ್ರಯೋಗ ಎಂದರೂ ಅತಿಶಯೋಕ್ತಿಯಾಗಲಾರದು. ಕಚ್ಚಾರ ಮಾಲ್ತಿ ದೇವಿ ಸತ್ಯದ ಗರ್ಭ ಧರಿಸಿದಾಗ ತನ್ನ ಸತ್ಯಧರ್ಮವನ್ನು ಪತ್ತೇರಿ ಕೂಟದಲ್ಲಿ ಜಗತ್ತಿಗೆ ತೋರ್ಪಡಿಸುವ ರೀತಿ, ತಾಯಿ ಕಚ್ಚಾರ ಮಾಲ್ತಿದೇವಿಯ ಪುಣ್ಯಗರ್ಭದಲ್ಲಿ ಜನಿಸಿದ ಶ್ರೀ ಬಬ್ಬುಸ್ವಾಮಿ ಹುಟ್ಟಿನಿಂದಲೇ ತನ್ನ ಕಲೆ ಕಾರ್ನಿಕವನ್ನು ತೋರಿಸುತ್ತಾ ಸಿರಿಗೊಂಡೆ ದೇವಿ ಹಾಗೂ ಕೊಡಂಗೆ ಬನ್ನಾರರ ಮಮತೆಯ ಮಡಿಲಲ್ಲಿ ಬೆಳೆದು ತನ್ನ ಮಂತ್ರಶಕ್ತಿ, ಬುದ್ಧಿಶಕ್ತಿ ಹಾಗೂ ಶಿಲ್ಪ ವಿದ್ಯೆಯಲ್ಲಿ ಹೆಸರು ಗಳಿಸಿದ ಬಬ್ಬುವಿನ ಅತಿಮಾನುಷ ಶಕ್ತಿಯಿಂದಾಗಿ “”ಅರ್ಕಲ್ಲ ಗುಡ್ಡೆ ಬೋರ್ಕಲ್ಲ ಪದವಿನಲ್ಲಿ” ದನ ಕಾಯುವಾಗ ಮೊಸಳೆ ರೂಪದಲ್ಲಿದ್ದ ಯಕ್ಷನಿಗೆ ಮೋಕ್ಷ ನೀಡಿ ಬಾರಗದ ಮಕ್ಕಳ ಕುತಂತ್ರಕ್ಕೆ ಅವರನ್ನೇ ಬಲಿ ಮಾಡಿ ಅನಂತರ ಅವರನ್ನು ಕ್ಷಮಿಸಿ ಬಬ್ಬು ಬಾರಗ ಎಂದು ಮೆರೆಯುವ ರೀತಿ, ಮುಂದೆ ಕೋಟೆದ ಬಬ್ಬುಸ್ವಾಮಿ, ದೈವರಾಜ ಎಂದೆಲ್ಲ ಹೆಸರು ಪಡೆದ ಶ್ರೀ ಬಬ್ಬುಸ್ವಾಮಿಯ ಮಹಿಮೆಯನ್ನು ಶ್ರೀ ಭಾಮರಿ ನಾಟ್ಯಾಲಯದ ನಾಟ್ಯಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ವಿಹಂಗಮವಾಗಿ
ನಡೆಸಿಕೊಟ್ಟರು.
ಇದಕ್ಕೆ ಕಳಶಪ್ರಾಯ ಎಂಬಂತೆ ಹಿನ್ನಲೆ ಸಂಗೀತದಲ್ಲಿ ಹಾಡುಗಾರಿಕೆ- ನಟುವಾಂಗದಲ್ಲಿ ವಿ| ಕೆ. ಭವಾನಿ ಶಂಕರ್, ಹಾಡು ಗಾರಿಕೆಯಲ್ಲಿ ಉಷಾ ಹೆಬ್ಟಾರ್ ಮಣಿಪಾಲ, ದಿವ್ಯಾ ಮಣಿಪಾಲ ಇವರ ಕಂಠಸಿರಿ ನೃತ್ಯ ರೂಪಕವನ್ನು ಇನ್ನಷ್ಟು ವೈಭವೀಕರಿಸಿತು. ವೈಭವ್ ಮಣಿಪಾಲ ಇವರ ಪಿಟೀಲು ವಾದನ, ಹಿರಣ್ಮಯ ಹಿರಿಯಡ್ಕ ಇವರ ಮೃದಂಗ, ಮೋಹನ್ ಮಲ್ಪೆ ಇವರ ರಿದಂಪ್ಯಾಡ್, ರೋಹಿತ್ ಮಲ್ಪೆ ಇವರ ಕೀಬೋರ್ಡ್ ಇದ್ದ ಹಿಮ್ಮೇಳ ರೂಪಕಕ್ಕೆ ಇನ್ನಷ್ಟು ಮೆರುಗನ್ನು ನೀಡಿದರೆ, ದೀಪಿಕಾ ಮೋಹನ್ ಮಲ್ಪೆ ಇವರ ಸಂಭಾಷಣೆ ಮನೋಜ್ಞವಾಗಿ ಮೂಡಿಬಂತು. ವಿಶ್ವನಾಥ ಅಮ್ಮುಂಜೆ ಹಾಗೂ ಅನಿಲ್ ನೇಜಾರು ಇವರ ಪ್ರಸಾಧನ ರೂಪಕಕ್ಕೆ ದೈವಿಕ ಮಹತ್ವವನ್ನು ನ್ಯಾಯೋಚಿತವಾಗಿ ದೊರಕಿಸಿದರೆ ರಂಗ ವಿನ್ಯಾಸದಲ್ಲಿ ರೂಪಕಕ್ಕೆ ಪೂರಕವಾಗಿ ಬೈಲಕೆರೆ, ಗುತ್ತಿನಮನೆ, ಕೈಲಾಸ, ವೈಕುಂಠ, ಆಸ್ಥಾನ ಮುಂತಾದವುಗಳಲ್ಲಿ ಆಶಿತ್ ನೇಜಾರು ಇವರ ಪರಿಕಲ್ಪನೆಯಲ್ಲಿ ಪ್ರಶಾಂತ್ ಅಮ್ಮುಂಜೆ ಹಾಗೂ ಮಣೀಶ್ ಅಮ್ಮುಂಜೆ ಇವರ ಕೈಚಳಕದಲ್ಲಿ ಅಚ್ಚುಕಟ್ಟಾದ ಮೆರುಗನ್ನು ನೀಡಿತು. ರಂಗವಿನ್ಯಾಸಕ್ಕೆ ತಕ್ಕಂತೆ ಸಂದಭೋìಚಿತ ಬೆಳಕಿನ ವಿನ್ಯಾಸ ವ್ಯವಸ್ಥಿತವಾಗಿ ಮೂಡಿಬಂದು ಜೀವಕಳೆ ತುಂಬುವಲ್ಲಿ ಯಶಸ್ವಿಯಾಯಿತು.
ಒಟ್ಟಾರೆಯಾಗಿ ಶಾಸ್ತ್ರೀಯ ಶೈಲಿಯಲ್ಲಿ ದೈವದ ಕಾರ್ಣಿಕ ಸಾರುವ ವಿನೂತನ ಪ್ರಯೋಗ ರತ್ನಾಕರ್ ನೇಜಾರು ಇವರ ಮಾರ್ಗದರ್ಶನದಲ್ಲಿ ಕೆ. ಭವಾನಿ ಶಂಕರ್ ನೃತ್ಯ ನಿರ್ದೇಶನದಲ್ಲಿ ಸಕಾಲಿಕವಾಗಿ ಮೂಡಿಬಂತು. ಈ ನೃತ್ಯ ರೂಪಕವು ಇನ್ನಷ್ಟು ವೇದಿಕೆಯಲ್ಲಿ ಪ್ರಯೋಗಗಳನ್ನು ನಡೆಸಲು ಯೋಗ್ಯ ರೂಪಕ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸದಾಶಿವ ಕೊಳಲಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.