ಹೊಸತರ ಅನ್ವೇಷಣೆ
Team Udayavani, Mar 31, 2017, 3:50 AM IST
ಸೃಜನಶೀಲ ಮನಸ್ಸು ಗಳು ಸದಾ ಹೊಸತರ ಅನ್ವೇಷಣೆ ಯಲ್ಲಿ ತೊಡಗಿರುತ್ತವೆ. ಹಾಗಾಗಿ ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿಗಳಲ್ಲೆಲ್ಲ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ, ಸಮಕಾಲೀನತೆಗೆ ಹತ್ತಿರವಾಗಿ ಹೊಸತರ ಹುಡುಕಾಟ ನಡೆಯುವುದನ್ನು ಕಾಣಬಹುದು.
ಮಂಗಳೂರಿನ ಮಹಾಲಸ ಚಿತ್ರಕಲಾ ಶಾಲೆಯ 19 ವಿದ್ಯಾರ್ಥಿಗಳು ಅನ್ವೇಷಣೆ ಎನ್ನುವ ಶೀರ್ಷಿಕೆಯೊಂದಿಗೆ ಹೊಸತನದ ಹುಡುಕಾಟದಲ್ಲಿ ತೊಡಗಿ, ರಚಿಸಿದ 32 ಕಲಾಕೃತಿಗಳ ಪ್ರದರ್ಶನ ಉಡುಪಿಯ ಜಂಗಮ ಮಠದ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ವಿಭೂತಿ ಆರ್ಟ್‌ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿತು. ಮೊಹೆಂಜೊದಾರೊ, ಹರಪ್ಪಾ ಸಂಸ್ಕೃತಿಯ ಕಲೆ, ಸಿಂಧೂ ನಾಗರಿಕತೆಯ ಕಾಲದ ಕಲೆ, ತಾಳೆಗರಿಯಲ್ಲಿ ಚಿತ್ರಿಸಿದ ಪೌರಾಣಿಕ ಕಥಾಚಿತ್ರ, ಮಧುಬನಿ, ತೊಗಲುಗೊಂಬೆ ಶೈಲಿ, ಜನಪದ ಸಂಸ್ಕೃತಿ ಮುಂತಾದವುಗಳ ಅಧ್ಯಯನಪೂರ್ವಕ ಅನುಕರಣೆಯೊಂದಿಗೆ ಹಳೆ ನೆನಪು, ಜೂಜಾಟ, ನವಿರಾದ ಸ್ಪರ್ಶ, ಚಿಂತೆ, ಬೀದಿ ಮಕ್ಕಳ ಬದುಕು ಹೀಗೆ ಸಮಕಾಲೀನ ಚಿಂತನೆಗಳನ್ನು ಸಮೀಕರಿಸಿದ ಕಲಾಕೃತಿಗಳು ಸೊಗಸಾಗಿದ್ದವು. ಬಹಳ ಸೊಗಸಾದ ರೇಖಾ ವಿನ್ಯಾಸ, ಹಿನ್ನೆಲೆ ಮೈವಳಿಕೆ ಮತ್ತು ವರ್ಣ ಸಂಯೋಜನೆಗಳೊಂದಿಗೆ ಉತ್ತಮ ಅಭಿವ್ಯಕ್ತಿ ಇಲ್ಲಿತ್ತು. ಉಡುಪಿಯ ಕಲಾಪ್ರಿಯರಿಗೆ ಹೊಸತನದ ಕಲಾಕೃತಿಗಳನ್ನು ಪರಿಚಯಿಸಿದ ಕಲಾಶಾಲೆಯ ಕಾರ್ಯದರ್ಶಿ ಡಾ| ಯು.ಸಿ. ನಿರಂಜನ್, ಎರಡೂ ಕಲಾಶಾಲೆಗಳ ಪ್ರಾಂಶುಪಾಲರಾದ ರಾಜೇಂದ್ರ ತ್ರಾಸಿ ಮತ್ತು ಕೆ. ಪುರುಷೋತ್ತಮ್ ನಾಯಕ್ ಹಾಗೂ ಕಲಾವಿಭಾಗದ ಮುಖ್ಯಸ್ಥ ಖ್ಯಾತ ಕಲಾವಿದ ಎನ್.ಎಸ್. ಪತ್ತಾರ್ ಅಭಿನಂದನಾರ್ಹರು.
ಕೆ. ದಿನಮಣಿ ಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ
Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ
B. Y. Vijayendra: ನನ್ನನ್ನು ಟಾರ್ಗೆಟ್ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.