ಪೂರಕ ಮಸೂದೆ ಪಾಸ್‌; ಜಿಎಸ್ಟಿ ಜಾರಿಯತ್ತ ಹೆಜ್ಜೆ


Team Udayavani, Mar 31, 2017, 2:57 AM IST

Arun–GST-30-3.jpg

ಹೊಸದಿಲ್ಲಿ: ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜುಲೈ 1ರಿಂದಲೇ ಅನುಷ್ಠಾನ ಮಾಡಬೇಕೆಂಬ ಕೇಂದ್ರ ಸರಕಾರದ ಬಯಕೆ ಈಡೇರುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ, ಜಿಎಸ್‌ಟಿಗೆ ಸಂಬಂಧಿಸಿದ ನಾಲ್ಕು ಪೂರಕ ಮಸೂದೆಗಳಿಗೆ ಬುಧವಾರ ಲೋಕಸಭೆಯ ಒಪ್ಪಿಗೆಯ ಮುದ್ರೆ ಬಿದ್ದಿದೆ. ವಿಪಕ್ಷಗಳು ಸೂಚಿಸಿದ್ದ ತಿದ್ದುಪಡಿಗಳ ಬಳಿಕ ಕೇಂದ್ರ ಜಿಎಸ್‌ಟಿ ಮಸೂದೆ 2017, ಸಮಗ್ರ ಜಿಎಸ್‌ಟಿ ಮಸೂದೆ, ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಎಸ್‌ಟಿ ಮಸೂದೆ ಅಂಗೀಕಾರಗೊಂಡಿದ್ದು, ಇದರ ಫ‌ಲವಾಗಿ ಸರಕುಗಳ ಬೆಲೆ ಅಲ್ಪಮಟ್ಟಿಗೆ ತಗ್ಗಲಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ಇದೇ ವೇಳೆ ಬುಧವಾರ ನಡೆದ ಚರ್ಚೆಯ ಸಂದರ್ಭದಲ್ಲಿ ಆಧಾರ್‌ ಯೋಜನೆ ಯುಪಿಎಯ ಬಲುದೊಡ್ಡ ಕೊಡುಗೆ ಎಂದು ಅರುಣ್‌ ಜೇಟ್ಲಿ ಶ್ಲಾಘಿಸಿದರು.

ಒಂದು ನಿರ್ದಿಷ್ಟ ಸರಕನ್ನು ಜನಸಾಮಾನ್ಯ ಬಳಸುತ್ತಾನಾ ಅಥವಾ ಶ್ರೀಮಂತ ಬಳಸುತ್ತಾನಾ ಎನ್ನುವುದರ ಮೇಲೆ ಜಿಎಸ್‌ಟಿ ದರವನ್ನು ನಿಗದಿಪಡಿಸಲಾಗುವುದು. ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಯಾಗುವ ಕಾರಣ, ವ್ಯಾಪಾರಿಗಳು ಅಧಿಕಾರಿಗಳಿಂದ ಎದುರಿಸುತ್ತಿದ್ದ ಕಿರುಕುಳಗಳೂ ನಿಲ್ಲುತ್ತವೆ ಎಂದಿದ್ದಾರೆ ಜೇಟ್ಲಿ. ಜತೆಗೆ, ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಬೇಕೇ, ಬೇಡವೇ ಎಂಬ ಬಗ್ಗೆ ಒಂದು ವರ್ಷದೊಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

ಜಿಎಸ್‌ಟಿ, ಒಬಿಸಿ ಆಯೋಗಗಳ ಬಗ್ಗೆ ತಪ್ಪು ಮಾಹಿತಿ
ಜಿಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಬಗ್ಗೆ ವಿಪಕ್ಷಗಳು ತಪ್ಪು ಮಾಹಿತಿ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದ ಬಿಜೆಪಿ ಲೋಕಸಭಾ ಸದಸ್ಯರ ಜತೆಗೆ ಗುರುವಾರ ಬೆಳಗ್ಗೆ ಉಪಾಹಾರ ಸಭೆಯಲ್ಲಿ ಮಾತನಾಡುವ ವೇಳೆ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳು ಹೇಳಿಕೊಂಡು ಬರುವ ಮಾತುಗಳನ್ನು ಸುಳ್ಳು ಎಂದು ಸಾಬೀತುಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಬಿಜೆಪಿ ಸಂಸದರು ಜಿಎಸ್‌ಟಿ ಕಾಯ್ದೆ ಮತ್ತು ಇತರ ಹಿಂದುಳಿದ ವರ್ಗಗಳ ಆಯೋಗಕ್ಕೆ ಯಾವ ಕಾರಣಕ್ಕಾಗಿ ನೇಮಕಗಳು ಬಾಕಿ ಉಳಿದಿವೆ ಎಂಬ ವಿಚಾರಗಳನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡಬೇಕೆಂದು ಸೂಚಿಸಿದ್ದಾರೆ.

ತಿದ್ದುಪಡಿಗೆ ನಕಾರ; ಹಣಕಾಸು ಮಸೂದೆಗೆ ‘ಲೋಕ’ ಅಂಗೀಕಾರ
ಹಣಕಾಸು ಮಸೂದೆ 2017ಕ್ಕೆ ರಾಜ್ಯಸಭೆ ತಂದಿದ್ದ ತಿದ್ದುಪಡಿಗಳನ್ನು ತಿರಸ್ಕರಿಸಿದ ಲೋಕಸಭೆಯು ಗುರುವಾರ ಮಸೂದೆಗೆ ಅಂಗೀಕಾರ ನೀಡಿದೆ. ತೆರಿಗೆದಾರನಿಗಿರುವ ಹೆಚ್ಚಿನ ಅಧಿಕಾರ ನೀಡುವುದಕ್ಕೆ ಕಡಿವಾಣ, ರಾಜಕೀಯ ಪಕ್ಷಗಳಿಗೆ ಕಂಪನಿಗಳು ನೀಡುವ ದೇಣಿಗೆಗೆ ಮಿತಿ ನಿಗದಿ ಸೇರಿದಂತೆ ಹಣಕಾಸು ಮಸೂದೆಗೆ ರಾಜ್ಯಸಭೆ ತಂದಿದ್ದ 5 ತಿದ್ದುಪಡಿಗಳನ್ನು ಗುರುವಾರ ಧ್ವನಿಮತ ಮೂಲಕ ತಿರಸ್ಕರಿಸಿ, ಮಸೂದೆಗೆ ಅಂಗೀಕಾರ ಪಡೆಯಿತು. ಈ ವೇಳೆ ಮಾತನಾಡಿದ, ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ, ‘ರಾಜ್ಯಸಭೆ ಮಾಡಿರುವ ತಿದ್ದುಪಡಿ ಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ, ಚುನಾವಣಾ ದೇಣಿಗೆಯನ್ನು ಹೆಚ್ಚು ಸ್ವಚ್ಛ ಮತ್ತು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ವಿಪಕ್ಷಗಳು ಸಲಹೆಗಳನ್ನು ನೀಡಬಹುದು’ ಎಂದರು. ಬುಧವಾರವಷ್ಟೇ ಹಣಕಾಸು ಮಸೂದೆಗೆ ಕಾಂಗ್ರೆಸ್‌ ಮತ್ತು ಸಿಪಿಎಂ ಪ್ರಸಾವಿಸಿದ ತಿದ್ದುಪಡಿಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆಯಲಾಗಿತ್ತು. ಇದು ಕೇಂದ್ರ ಸರಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು.

ಪೂರಕ ಮಸೂದೆಯಂತೆ…
ಭೂಮಿ ಭೋಗ್ಯಕ್ಕೆ ಕೊಡುವುದು, ಕಟ್ಟಡ ಬಾಡಿಗೆಗೆ ಕೊಡುವುದು, ನಿರ್ಮಾಣಹಂತದ ಮನೆ ಖರೀದಿಗೆ ನೀಡಲಾಗುವ ಇಎಂಐಗೂ ತೆರಿಗೆ ಪಾವತಿಸಬೇಕಾಗುತ್ತದೆ ವಾಣಿಜ್ಯ ಉದ್ದೇಶಕ್ಕೆ ಕೈಗಾರಿಕಾ ಅಥವಾ ವಸತಿ ಸಂಕೀರ್ಣವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಲೀಸ್‌ಗೆ ಅಥವಾ ಬಾಡಿಗೆಗೆ ಕೊಟ್ಟರೂ ಅದನ್ನು ಸೇವೆಯೆಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ

ವಿಶೇಷ ಆರ್ಥಿಕ ವಲಯದಲ್ಲಿ ಉತ್ಪಾದಿಸಲಾದ ಉತ್ಪನ್ನಗಳಿಗೆ ತೆರಿಗೆ ಪಾವತಿಸಬೇಕು

ಜಿಎಸ್‌ಟಿಯು ತನ್ನಿಂತಾನೇ ಡಿಜಿಟಲೀಕರಣವನ್ನು ಉತ್ತೇಜಿಸುತ್ತದೆ. ಪಾರದರ್ಶಕತೆ ತರುತ್ತದೆ ಮತ್ತು ಅಗತ್ಯ ಸಾಮಗ್ರಿಗಳ ದರವನ್ನು ಇಳಿಸುತ್ತದೆ. ಅಷ್ಟೇ ಅಲ್ಲ, ಕಪ್ಪುಹಣ ನಿಯಂತ್ರಣಕ್ಕೂ ಇದು ಸಹಕಾರಿಯಾಗಲಿದೆ. ಜಿಎಸ್‌ಟಿ ಎನ್ನುವುದು ಗೇಮ್‌ ಚೇಂಜರ್‌ ಆಗಿ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸಲಿದೆ.
– ಉದಿತ್‌ ರಾಜ್‌, ಬಿಜೆಪಿ ನಾಯಕ

ಯುಪಿಎ ಸರಕಾರದ ಅವಧಿಯಲ್ಲಿ ಜಿಎಸ್‌ಟಿಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿದ ಕಾರಣ, ಅದನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ. ಜಿಎಸ್‌ಟಿ ಜಾರಿಯಲ್ಲಾದ ವಿಳಂಬದಿಂದಾಗಿ ಸರಕಾರದ ಬೊಕ್ಕಸಕ್ಕೆ ಬರೋಬ್ಬರಿ 12 ಲಕ್ಷ ಕೋಟಿ  ರೂ. ನಷ್ಟ ಅನುಭವಿಸಬೇಕಾಯಿತು.
– ಎಂ. ವೀರಪ್ಪ ಮೊಯಿಲಿ, ಕಾಂಗ್ರೆಸ್‌ ನಾಯಕ

ಟಾಪ್ ನ್ಯೂಸ್

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Divorce: A.R. Rahman ends 29 years of marriage

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

PKL 11: defeat for bengaluru bulls against Patna pirates

PKL 11: ಬುಲ್ಸ್‌ ಗೆ 10ನೇ ಸೋಲು

Women’s Asian Champions Trophy Hockey: India advances to final; opponent China

Women’s Asian Champions Trophy Hockey: ಫೈನಲ್‌ಗೆ ಲಗ್ಗೆ ಹಾಕಿದ ಭಾರತ; ಎದುರಾಳಿ ಚೀನ

B. S. Yediyurappa: ಯಾವುದೇ ಕ್ಷಣದಲ್ಲಿ ಸಿಎಂ ರಾಜೀನಾಮೆ

B. S. Yediyurappa: ವಿಜಯೇಂದ್ರ ಬೆಳವಣಿಗೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ

Tanveer Sait: ಜನಸಂಖ್ಯೆ ಅನುಗುಣವಾಗಿ ಮುಸ್ಲಿಂ ಮೀಸಲು ಹೆಚ್ಚಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Divorce: A.R. Rahman ends 29 years of marriage

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

Protect Manipur: Mallikarjun Kharge’s letter to the President

ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ

Madras High Court stays awarding of M.S. Subbulakshmi Award to Krishna

Chennai: ಕೃಷ್ಣಗೆ ಎಂ.ಎಸ್‌.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್‌ ಹೈಕೋರ್ಟ್‌ ತಡೆ

Savarkar defamation case:: Rahul ordered to appear in person on December 2

Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ

ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

Flight: ಭಾರತ, ಚೀನಾ ನಡುವೆ ನೇರ ವಿಮಾನಯಾನ ಸೌಲಭ್ಯ ಪುನಾರಂಭ?

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Court-1

Kasaragod: ಪಟಾಕಿ ದುರಂತ; ಜಾಮೀನು ರದ್ದಿಗೆ ತಡೆಯಾಜ್ಞೆ

Divorce: A.R. Rahman ends 29 years of marriage

Divorce: 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಎ.ಆರ್.ರೆಹಮಾನ್

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

PKL 11: defeat for bengaluru bulls against Patna pirates

PKL 11: ಬುಲ್ಸ್‌ ಗೆ 10ನೇ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.