ಬ್ರಹ್ಮರಕೂಟ್ಲು , ಸುರತ್ಕಲ್‌ ಟೋಲ್‌ ಮತ್ತೆ ಏರಿಕೆ

Team Udayavani, Mar 31, 2017, 9:21 AM IST

31-REPORTER-8.jpg

ಮಂಗಳೂರು: ನಗರದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ (ಹಿಂದಿನ ರಾ.ಹೆ. 48)ಬಿ. ಮೂಡ ಗ್ರಾಮದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ ಹಾಗೂ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ (ಹಳೆಯ ರಾ.ಹೆ 17) ಸುರತ್ಕಲ್‌ ಎನ್‌ಐಟಿಕೆ ಬಳಿಯ ಟೋಲ್‌ ದರ ಎ. 1ರಿಂದ ಮತ್ತೆ ಏರಿಕೆಯಾಗಲಿದೆ. ಎರಡೂ ಟೋಲ್‌ಗ‌ಳು ರದ್ದುಗೊಳ್ಳಲಿವೆ ಎಂಬ ನಿರೀಕ್ಷೆ ಇರುವಾಗಲೇ ದರ ಏರಿಕೆಯು ಪ್ರಯಾಣಿಕರಿಗೆ ಶಾಕ್‌ ನೀಡಿದಂತಾಗಿದೆ.

ಸುರತ್ಕಲ್‌ ಎನ್‌ಐಟಿಕೆ ಟೋಲ್‌ ದರ : ಕಾರು, ಜೀಪು, ವ್ಯಾನ್‌ ಅಥವಾ ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 50 ರೂ. (ಪ್ರಸ್ತುತ ದರ 45 ರೂ.) ಆಗಲಿದ್ದು, ಅದೇ ದಿನ ಮರಳಿ ಬರುವುದಾದರೆ ಆಗುವ 70 ರೂ. ದರದಲ್ಲಿ ಬದಲಾವಣೆ ಇಲ್ಲ. 1 ತಿಂಗಳಲ್ಲಿ 50 ಬಾರಿ ಬಂದರೆ ಮಾಸಿಕ ಶುಲ್ಕ 1,600 ರೂ. (1,535 ರೂ.)ಆಗಲಿದೆ. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ ಅಥವಾ ಮಿನಿ ಬಸ್‌ ಏಕಮುಖ ಸಂಚಾರಕ್ಕೆ 80 ರೂ. (75), ಮರಳಿ ಬಂದರೆ 115 ರೂ. (110)ಗೆ ಏರಲಿದೆ. ಮಾಸಿಕ ಪಾಸ್‌ 2585 ರೂ. (2,435 ರೂ.) ಹಾಗೂ ಜಿಲ್ಲೆಯ ಒಳಗೆ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 40 ರೂ. ನಿಗದಿ ಮಾಡಲಾಗಿದೆ. ಬಸ್‌ ಅಥವಾ ಟ್ರಕ್‌ (2 ಆ್ಯಕ್ಸೆಲ್‌) ಏಕಮುಖ ಸಂಚಾರಕ್ಕೆ 165 ರೂ, (155), ಅದೇ ದಿನ ವಾಪಸ್‌ ಬಂದರೆ 245 ರೂ. (235), 50 ಬಾರಿಗೆ ಮಾಸಿಕ ಪಾಸ್‌ಗೆ 5,420 ರೂ. (5105), ಮೂರು-ಆ್ಯಕ್ಸೆಲ್‌ ವಾಣಿಜ್ಯ ವಾಹನಗಳ ಏಕಮುಖ ಸಂಚಾರಕ್ಕೆ 175 ರೂ. (170), ಅದೇ ದಿನ ಮರಳಿ ಬಂದರೆ 265 ರೂ (255), ಮಾಸಿಕ ಪಾಸ್‌ 5,915 ರೂ. (5,670) ನಿಗದಿ ಮಾಡಲಾಗಿದೆ.

ಭಾರೀ ನಿರ್ಮಾಣ ಯಂತ್ರಗಳು (ಎಚ್‌ಸಿಎಂ) ಅಥವಾ ಭೂ ಅಗೆತದ ಸಾಧನಗಳು (ಇಎಂಇ) ಅಥವಾ ಬಹು ಆ್ಯಕ್ಸೆಲ್‌ ವಾಹನ (ಎಂಎವಿ) (ನಾಲ್ಕರಿಂದ ಆರು ಆ್ಯಕ್ಸೆಲ್‌ಗ‌ಳದ್ದು) ಏಕಮುಖ ಸಂಚಾರಕ್ಕೆ 255 ರೂ. (240), ಮರಳಿ ಬಂದರೆ 385 ರೂ., (360), ಮಾಸಿಕ ಪಾಸ್‌ 8500 ರೂ. (8150) ರೂ.ಗೆ ಏರಲಿದೆ. ಮಿತಿ ಮೀರಿದ ಅಳತೆಯ ವಾಹನಗಳು (ಏಳು ಅಥವಾ ಅದಕ್ಕೂ ಹೆಚ್ಚು ಆ್ಯಕ್ಸೆಲ್‌ಗ‌ಳದ್ದು) ಏಕಮುಖ ಸಂಚಾರಕ್ಕೆ 310 ರೂ. (300), ಮರಳಿ ಬಂದರೆ 465 ರೂ (445 ರೂ), ಮಾಸಿಕ ಪಾಸ್‌ 10350 ರೂ. (9925) ನಿಗದಿಪಡಿಸಲಾಗಿದೆ.

 ಬ್ರಹ್ಮರಕೂಟ್ಲು ಟೋಲ್‌
ಕಾರು, ಜೀಪು, ವ್ಯಾನ್‌ ಅಥವಾ ಲಘು ಮೋಟಾರ್‌ ವಾಹನಗಳಿಗೆ ಏಕಮುಖ ಸಂಚಾರದಲ್ಲೂ ಏರಿಕೆಯಾಗಿದೆ. 20 ರೂ. ನಿಗದಿಯಾ
ಗಿದ್ದ ಮುಂದೆ 25 ರೂ.ಗೆ ಏರಲಿದೆ. ಮರಳಿ ಬಂದರೆ ಪ್ರಸ್ತುತ ಇರುವ 35 ರೂ. ಅನ್ನೇ ಮುಂದುವರಿಸಲಾಗಿದೆ. 1 ತಿಂಗಳಿಗೆ (50 ಬಾರಿ ಯಂತೆ) ಮಾಸಿಕ ಪಾಸ್‌ 770 ರೂ. (ಪ್ರಸ್ತುತ ದರ 735) ಮಾಡಲಾಗಿದ್ದು, ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ ಅಥವಾ ಮಿನಿ ಬಸ್‌ಗಳ – ಏಕಮುಖ ಸಂಚಾರಕ್ಕೆ ಚಾಲ್ತಿ ಯಲ್ಲಿರುವ 35 ರೂ. ಹಾಗೂ ಆದೇ ದಿನ ಮರಳಿದರೆ 50 ರೂ. ಅನ್ನು ಬದಲಾಯಿಸಲಿಲ್ಲ. ಮಾಸಿಕ ಪಾಸ್‌ 1240 ರೂ (1190) ನಿಗದಿ ಪಡಿಸಲಾಗಿದೆ.

ಬಸ್‌ ಅಥವಾ ಟ್ರಕ್‌ (ಎರಡು ಆ್ಯಕ್ಸೆಲ್‌ಗ‌ಳದ್ದು ) ಏಕಮುಖ ಸಂಚಾರಕ್ಕೆ 80 ರೂ. (75), ಮರಳಿ ಬಂದರೆ 55 ರೂ., ಮಾಸಿಕ ಶುಲ್ಕ 2600 ರೂ. (2495), 3 ಆ್ಯಕ್ಸೆಲ್‌ ವಾಣಿಜ್ಯ ವಾಹನಕ್ಕೆ ಏಕಮುಖ ಸಂಚಾರಕ್ಕೆ 85 ರೂ. (80), ಮರಳಿ ಬಂದರೆ 130 ರೂ., ಮಾಸಿಕ ಪಾಸ್‌ 2,840 ರೂ. (2,720)ಗೆ ಏರಿಕೆ ಮಾಡಲಾಗಿದೆ. ಭಾರೀ ನಿರ್ಮಾಣ ಯಂತ್ರಗಳು ಅಥವಾ ಭೂಅಗೆತದ ಸಾಧನಗಳು ಅಥವಾ ಬಹು ಆ್ಯಕ್ಸಲ್‌ ವಾಹನ ಗಳಿಗೆ (4ರಿಂದ 6 ಆ್ಯಕ್ಸೆಲ್‌) ಏಕಮುಖ ಸಂಚಾರಕ್ಕೆ 120 ರೂ. (115), ಮರಳಿ ಬಂದರೆ 185 ರೂ. (175), ಮಾಸಿಕ ಪಾಸ್‌ 4,080 ರೂ. (3,915) ಆಗಲಿದೆ. ಮಿತಿಮೀರಿದ ಅಳತೆ ವಾಹನಗಳು (7 ಅಥವಾ ಅದಕ್ಕಿಂತಲೂ ಹೆಚ್ಚು ಆ್ಯಕ್ಸೆಲ್‌ಗ‌ಳದ್ದು) ಏಕಮುಖ ಸಂಚಾರಕ್ಕೆ 150 ರೂ. (145), ಮರಳಿ ಬಂದರೆ 225 ರೂ (215), ಮಾಸಿಕ ಪಾಸ್‌ 4,970 ರೂ. (4,765)ಗೆ ಏರಿಕೆಯಾಗಲಿದೆ.

ವೆಚ್ಚ 363 ಕೋ.ರೂ.; ಸಂಗ್ರಹ 31 ಕೋ.ರೂ..!
ಸುರತ್ಕಲ್‌ನಿಂದ ಬಿ.ಸಿ ರೋಡ್‌ ವರೆಗಿನ ಹೆದ್ದಾರಿಯು ಒಂದೇ ಯೋಜನೆಯಲ್ಲಿ ನಡೆದಿದ್ದು, ಇದಕ್ಕೆ ಒಟ್ಟು ಬಂಡವಾಳ ವೆಚ್ಚ 363 ಕೋ.ರೂ. ಆಗಿದೆ. ಅದರಲ್ಲಿ 31 ಕೋ.ರೂ. (ಕಳೆದ ವರ್ಷ 22 ಕೋ.ರೂ) ಮರಳಿ ಪಡೆಯಲಾಗಿದೆ. ಹೀಗಾಗಿ ಬಂಡವಾಳ ವೆಚ್ಚ ಪೂರ್ಣ ವಸೂಲಾದ ಅನಂತರ ಬಳಕೆ ಶುಲ್ಕ ದರ (ಟೋಲ್‌)ವನ್ನು ಶೇ. 40ರಷ್ಟು ಕಡಿಮೆ ಮಾಡಲಾಗುತ್ತದೆ. ಪ್ರಸ್ತುತ ಈ ಎರಡೂ ಟೋಲ್‌ಫ್ಲಾಝಾದಿಂದ 20 ಕಿ.ಮೀ. ವಿಸ್ತೀರ್ಣದೊಳಗೆ ವಾಸಿಸುವ ಎಲ್ಲ ವಾಣಿಜ್ಯೇತರ ವಾಹನಗಳಿಗೆ 245 ರೂ. (ಪ್ರಸ್ತುತ 235 ರೂ.) ತಿಂಗಳ ಪಾಸ್‌ ಲಭ್ಯವಿದೆ. ಟೋಲ್‌ಫ್ಲಾಜಾ ಜಿಲ್ಲೆಯಲ್ಲಿ ನೋಂದಾಯಿತಗೊಂಡ ವಾಣಿಜ್ಯ ವಾಹನ (ರಾಷ್ಟ್ರೀಯ ಪರವಾನಿಗೆ ಅಡಿಯಲ್ಲಿ ಚಲಿಸುವ ವಾಹನಗಳನ್ನು ಹೊರತುಪಡಿಸಿ) ಶೇ. 50 ರಿಯಾಯಿತಿ ದೊರೆಯಲಿದೆ ಎಂದು ಭಾರತೀಯ ರಾ.ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

2 ಟೋಲ್‌ ರದ್ದು;  1 ವರ್ಷ ಬೇಕು!
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್‌ ವಿಜಯ್‌ ಕುಮಾರ್‌ ಅವರು ಹೇಳುವ ಪ್ರಕಾರ, ದೇಶದಲ್ಲಿ ಸರಕಾರಿ ಟೋಲ್‌ಗ‌ಳನ್ನು ರದ್ದುಗೊಳಿಸಬೇಕು ಎಂಬ ಕೇಂದ್ರ ಸರಕಾರದ ನಿಯಮದಂತೆ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್‌ ಟೋಲ್‌ ಕೂಡ ರದ್ದುಗೊಳ್ಳುವ ಸಾಧ್ಯತೆ ಇದೆ. ಆದರೆ ಕೆಲವೇ ತಿಂಗಳಿನಲ್ಲಿ ಇದು ನಡೆಯುವುದು ಕಷ್ಟ. ಈ ಬಗ್ಗೆ ಪೂರಕ ಪ್ರಕ್ರಿಯೆಗಳು ಮೊದಲು ನಡೆಯಬೇಕಿದೆ. ಅದು ಪೂರ್ಣಗೊಳ್ಳಲು ಹೆಚ್ಚಾ-ಕಡಿಮೆ 1 ವರ್ಷ ಆಗಬಹುದು. ಆ ಬಳಿಕ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬಹುದು. ಅಲ್ಲಿಯವರೆಗೆ ಟೋಲ್‌ ದರ ಪಡೆಯಲಾಗುತ್ತದೆ.

ದಿನೇಶ್‌ ಇರಾ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ

ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಗೆ ನೈಸರ್ಗಿಕ ಅನಿಲ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.