ಆಶ್ರಯ ಯೋಜನೆ: ಆರ್‌ಟಿಸಿ ವಿಳಂಬ ನೀಡಿಕೆಯಿಂದ ಸಮಸ್ಯೆ
Team Udayavani, Mar 31, 2017, 10:11 AM IST
ಬಡಗನ್ನೂರು: ಆಶ್ರಯ ಯೋಜನೆಯಡಿ ಬಡ ಫಲಾನುಭವಿಗಳಿಗೆ ವಸತಿ ನಿರ್ಮಾಣದ ದೃಷ್ಟಿಯಿಂದ 31ಬಡ ಕುಟುಂಬದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಆದರೆ ಆ ಫಲಾನುಭವಿಗಳಿಗೆ ಆರ್.ಟಿ.ಸಿ. ನೀಡದೆ ವಿಳಂಬವಾಗಿದೆ. ಇದರಿಂದಾಗಿ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ತೊಂದರೆಯಾಗಿದೆ ಎಂದು ಮಾಜಿ ಗ್ರಾ.ಪಂ. ಅಧ್ಯಕ್ಷ ರಾಮ ಮೇನಾಲ ವಿಷಯ ಪ್ರಸ್ತಾಪ ಮಾಡಿದರು. ಅವರೊಂದಿಗೆ ಅಬ್ದುಲ್ ಕಂಞ್ಞ ಧ್ವನಿ ಗೊಡಿಸಿದರು.
ಗ್ರಾ.ಪಂ. ಅಧ್ಯಕ್ಷೆ ಶಂಕರಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೆಟ್ಟಣಿಗೆಮುಟ್ನೂರು ಗ್ರಾಮ ಸಭೆಯಲ್ಲಿ ಮಾತನಾಡುತ್ತಿದ್ದರು.
ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಮಾತನಾಡಿ, ಈ ಮೂದಲು ತಹಸೀಲ್ದಾರ್ ಮುಖಾಂತರ ತಂಬ್ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಸರ್ಕಾರದ ನಿಯಮ ಬದಲಾವಣೆಯಿಂದ ಪೈಲ್ ಬೆಂಗಳೂರಿಗೆ ಕಳುಹಿಸಿ ಎಸಿ ತಂಬ್ ನೀಡಬೇಕಾಗುವುದರಿಂದ ವಿಳಂಬ ಆಗಿದೆ. ಈ ಬಗ್ಗೆ ಎಸಿಯವರಲ್ಲಿ ಮಾತನಾಡಿದ್ದೇನೆ. ತತ್‌ಕ್ಷಣ ಆರ್.ಟಿ.ಸಿ. ನೀಡುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಆನೆಕಂದಕಕ್ಕೆ ಒತ್ತಾಯ
ಕೊಟ್ಯಾಡಿಯವರೆಗೆ ಬರುವ ಸರ್ಕಾರಿ ಬಸ್ಸು ಗಾಳಿಮುಖದವರೆಗೆ ಬರಲಿಎಂದು ಗ್ರಾಮಸ್ಥರು ಒತ್ತಾಯಿಸಿದರು. ಜೊತೆಗೆ ಕಾಡುಕೋಣ ಹಾವಳಿ ನಿಯಂತ್ರಿಸಲು ಆನೆಕಂದಕ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ಪಂಚಾಯತ್ ಕುಡಿಯುವ ನೀರನ್ನು ಕೃಷಿಗೆ ಉಪಯೋಗಿಸುತ್ತಿದ್ದಾರೆ ಅಂಥವರ ಮೇಲೆ ಕ್ರಮ ಕೈಗೊಳ್ಳಲುವಂತೆ ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಮಾತನಾಡಿ, ಕುಡಿಯುವ ನೀರನ್ನು ಕೃಷಿಗೆ ಉಪಯೋಗಿಸಲು ಅವಕಾಶ ಇಲ್ಲ. ನೀರು ಎಲ್ಲರಿಗೂ ಸರಿಯಾಗಿ ಸಿಗಬೇಕು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಗ್ರಾಮಸ್ತ ಸುರೇಶ ಆಳ್ವ ಸಾಂತ್ಯ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯ ಹೆಚ್ಚಿನ ಕಡೆ ನೀರಿನ ಸಮಸ್ಯೆಇದೆ. ಇದನ್ನು ಗಂಬೀರವಾಗಿ ಪರಿಗಣಿಸಬೇಕು ಎಂದರು.
ಕರ್ನೂರು ಗಾಳಿಮುಖ ವ್ಯಾಪ್ತಿಯಲ್ಲಿ 2 ತಿಂಗಳಾದರೂ ವಿದ್ಯುತ್ ಬಿಲ್ ನೀಡದೆ ಲೈನ್ ಕಡಿತಗೂಳಿಸಲು ಬಂದ ಬಗ್ಗೆ ಗ್ರಾಮಸ್ಥರೊಬ್ಬರು ಪ್ರಶ್ನಿಸಿದರು. ಈ ಬಗ್ಗೆ ಗಮನಹರಿಸುದಾಗಿ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಭರವಸೆ ನೀಡಿದರು. ಮಕ್ಕಳಿಗೆ ಪರೀಕ್ಷೆ ನಡೆಯುವ ಈ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸಬಾರದು ಎಂದು ಇಲಾಖೆಯವರಲ್ಲಿ ಕೇಳಿಕೊಳ್ಳಲಾಯಿತು.
ಸುರುಳಿಮೂಲೆ ಪ್ರದೇಶದಲ್ಲಿ ಕಾಲೇಜು ಆರಂಭಿಸುವಂತೆ ಗ್ರಾಮಸ್ತ ಸುರೇಶ್ ಆಳ್ವ ಒತ್ತಾಯಿಸಿದರು.
ಬೀದಿ ನಾಯಿ ನಿಯಂತ್ರಿಸಿ
ಈಶ್ವರಮಂಗಲ ಪರಿಸರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಿದ್ದು ಶಾಲಾ ಮಕ್ಕಳಿಗೆ ಹಾಗೂ ನಡೆದಾಡುವ ನಾಗರಿ ಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರೋರ್ವರು ಗಮನ ಸೆಳದರು.
ಮೂಟ್ನೂರು ಗ್ರಾಮವನ್ನು ಮದ್ಯಮುಕ್ತ ಗ್ರಾಮವಾಗಿ ಮಾಡಲು ಯಾವುದೇ ಮದ್ಯದಂಗಡಿಗೆ ಗ್ರಾ.ಪಂ.ನಿಂದ ಪರವಾನಿಗೆ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು. ಬಳಿಕ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಗ್ರಾ.ಪಂ. ವ್ಯಾಪ್ತಿಯ ಈಶ್ವರಮಂಗಲ ಹಾಗೂ ಮತ್ತಿತರ ಪ್ರದೇಶದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದ್ದು ಇದನ್ನು ಪೊಲೀಸ್ ಇಲಾಖೆ ಸಮರ್ಥವಾಗಿ ಭೇದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮಾಜಿ ಸದಸ್ಯ ಅಬ್ದುಲ್ ಕುಂಞ್ಞ ಮಾತನಾಡಿ, ಈಶ್ವರಮಂಗಲ ಪೇಟೆಯಲ್ಲಿ ಮತ್ತು ಆಸುಪಾಸುನಲ್ಲಿ ತ್ಯಾಜ್ಯ ಎಸೆದಿದ್ದು ಸ್ವತ್ಛತೆ ಇಲ್ಲದಾಗಿದೆ. ಈ ಬಗ್ಗೆಯು ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಎಂದರು. ಇದಕ್ಕೆ ಈಶ್ವರಮಂಗಲ ಹೊರ ಠಾಣಾ ಎ.ಎಸ್.ಐ. ಸಿ. ಟಿ ಸುರೇಶ್ ಉತ್ತರಿಸಿ, ಪೂರಕವಾಗಿ ಕ್ರಮ ಕೈಗೊಳ್ಳಲುವ ಭರವಸೆ ನೀಡಿದರು.
ಪ್ರಸಕ್ತ ಸನ್ನಿವೇಶದಲ್ಲಿ ನೀರಿಗೆ ಅದ್ಯತೆ ನೀಡಿಬೇಕು ಎಂದು ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಗ್ರಾ.ಪಂ.ಗೆ ಸೂಚನೆ ನೀಡಿದರು.
ನೊಡೇಲ್ ಅಧಿಕಾರಿಯಾಗಿ ಪುತ್ತೂರು ತಾ.ಪಂ. ಯೋಜನಾಧಿಕಾರಿ ಗಣಪತಿ ಭಟ್ ಭಾಗವಹಿಸಿದರು. ತಾ.ಪಂ. ಸದಸ್ಯೆ ಫೌಝಿಯಾ ಇಬ್ರಾಹಿಮ್, ಗ್ರಾ.ಪಂ. ಸದಸ್ಯರಾದ ರಮೇಶ್ ರೈ ಸಾಂತ್ಯ, ಸಂಶುದ್ದೀನ್, ಇಬ್ರಾಹಿಮ್ ಕೆ., ಇಂದಿರಾ, ಅಬ್ದಲ್ ಖಾದರ್, ಅಯಿಷಾ ಡಿ.ಎಂ., ಇಬ್ರಾಹಿಮ್ ಎಂ.ಬಿ., ಅಬ್ದಲ್ಲ ಕೆ., ಅಸ್ಮ ಕೊಟ್ಯಾಡಿ, ವಿಜಯ, ವತ್ಸಲ, ಮಾಧವಿ, ಸುಶೀಲಾ, ಮಹಮ್ಮದ್ ಕುಂಞ್ಞ ಕೆ., ಉಷಾ, ಸುರೇಶ್ ನಾಯ್ಕ, ಲಲಿತಾ, ಲೀಲಾವತಿ,ಬಾಬು ಎನ್., ಪುಷ್ಪಾವತಿ, ನಾರಾಯಾಣ ರೈ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀಲ್ ಸ್ವಾಗತಿಸಿದರು. ಕಾರ್ಯದರ್ಶಿ ವಂದಿಸಿದರು. ಸಿಬಂದಿ ಶಿನಪ್ಪ ನಾಯ್ಕ, ಮಲ್ಲ, ಸಹಕಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.