ಪುನೀತರಾದವರ ಅಪ್ಪುಗೆ ಡ್ಯಾನ್ಸ್ ಬೇಬಿ ಡ್ಯಾನ್
Team Udayavani, Mar 31, 2017, 11:02 AM IST
ಈಗ ಇಲ್ಲಿ ಹೇಳಹೊರಟಿರುವ ವಿಷಯ, ಚಂದ್ರಶೇಖರ್ ಅವರದ್ದು. ಯಾವ ಚಂದ್ರಶೇಖರ್ ಅಂದರೆ, ಚಿತ್ರೀಕರಣಕ್ಕೆ ಕಾರುಗಳನ್ನು ಸರಬರಾಜು ಮಾಡುತ್ತಿರುವ ಚಂದ್ರಶೇಖರ್. ಅವರಿಗೆ ಸಿನಿಮಾ ರಂಗ ಗೊತ್ತು. ಆದರೆ, ನಿರ್ಮಾಣ ಗೊತ್ತಿಲ್ಲ. ಇದು ಅವರ ಮೊದಲ ಪ್ರಯತ್ನ. ಅಂದಹಾಗೆ, ಇವರ ನಿರ್ಮಾಣದ ಚಿತ್ರಕ್ಕೆ “ಅಪ್ಪುಗೆ’ ಎಂದು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು.
ಹೆಸರೇ ಸೂಚಿಸುವಂತೆ ಇದು ಮಕ್ಕಳ ಚಿತ್ರ. ಕಿಶೋರ್‌ಶೆಟ್ಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. “ಇದೊಂದು “ಡ್ಯಾನ್ಸ್’ ಕುರಿತ ಕಥೆ. ಇದರೊಂದಿಗೆ ಮಕ್ಕಳು ತಪ್ಪು ದಾರಿ ಹಿಡಿದರೆ, ಎಂಥೆಂಥಾ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನಿಲ್ಲಿ ಹೇಳಲಾಗಿದೆ. ಮಕ್ಕಳು ಮತ್ತು ಪೋಷಕರು ನೋಡಬೇಕಾದ ಸಿನಿಮಾವಿದು. ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರೀಕರಣ ಸಮಯದಲ್ಲಿ ಸುಮಾರು 1500 ಚಿಣ್ಣರು ಭಾಗವಹಿಸಿದ್ದು ಚಿತ್ರದ ಮತ್ತೂಂದು ವಿಶೇಷ
ಎನ್ನುವ ನಿರ್ದೇಶಕರು, “ಚಿತ್ರದಲ್ಲಿ 11 ಹಾಡುಗಳಿವೆ. ಆ ಪೈಕಿ ಸ್ವತ್ಛತೆ, ಪೌರಕಾರ್ಮಿಕರು, ಆಂಜನೇಯ, ರೈತ, ಯೋಧರಿಗೆ ಸಂಬಂಧಿಸಿದ ಗೀತೆಗಳಿವೆ’ ಎನ್ನುತ್ತಾರೆ ಕಿಶೋರ್‌ಶೆಟ್ಟಿ.
“ಚಿತ್ರದಲ್ಲಿ ತಂದೆ, ತಾಯಿ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು. ತಮಗೆ ಗಂಡು ಮಗು ಆಗುತ್ತೆ ಎಂದು ಆಸೆ ಪಟ್ಟಿರುತ್ತಾರೆ. ಆದರೆ, ಅವರಿಗೆ ಹೆಣ್ಣು ಮಗು ಹುಟ್ಟುತ್ತದೆ. ಆ ಮಗುವಿಗೆ ಅಪ್ಪುಗೆ ಎಂದು ನಾಮಕರಣ ಮಾಡುತ್ತಾರೆ. ಆ ಹುಡುಗಿ ಏನೆಲ್ಲಾ ಸಾಧನೆ ಮಾಡುತ್ತೆ ಎಂಬುದರ ಸುತ್ತ ಸಿನಿಮಾ ಸಾಗಲಿದೆ’ ಎನ್ನುವ ನಿರ್ದೇಶಕರು.ಕ್ಲೈಮ್ಯಾಕ್ಸ್‌ನಲ್ಲಿ ಬಾಲನಟಿ ಬೇಬಿ ಲಕ್ಷ್ಮೀಶ್ರೀಯನ್ನು ಅಪ್ಪಿಕೊಳ್ಳುವ ದೃಶ್ಯವಿದೆ. ಅದನ್ನು ಪುನೀತ್ ರಾಜ್‌ಕುಮಾರ್ ಅವರಿಂದ ಮಾಡಿಸಬೇಕೆಂಬ ಬಯಕೆ ಚಿತ್ರತಂಡದ್ದು.
ಅದೇ ಆಶಾಭಾವನೆಯಲ್ಲಿದೆ ಚಿತ್ರತಂಡ. ಬೇಬಿ ಲಕ್ಷೀಶ್ರೀ, ಮಾಸ್ಟರ್ ಸದ್ವಿನ್ ಶೆಟ್ಟಿ ಮುಖ್ಯ ಪಾತ್ರಧಾರಿಗಳು. ಕಿಂಗ್ ಮೋಹನ್, ಕಿಶೋರ್ ವಸಿಷ್ಠ ಇತರರು ನಟಿಸಿದ್ದಾರೆ. ಚಂದನ್‌ಶೆಟ್ಟಿ ಸಂಗೀತವಿದೆ. ಆಡಿಯೋ ಸಿಡಿ ಬಿಡುಗಡೆ ವೇಳೆ ನಟ ಶ್ರೀನಗರ ಕಿಟ್ಟಿ,
ಸಿಂಧುಲೋಕನಾಥ್, ಬಿ.ಕೆ.ಶ್ರೀನಿವಾಸ್ ಇತರರು ಆಗಮಿಸಿ ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.