ಭಾರೀ ಅವ್ಯವಹಾರ ಆರೋಪ; ಮಿಥ್ಯಾರೋಪವೆಂದ ಇಲಾಖೆ
Team Udayavani, Mar 31, 2017, 11:18 AM IST
ಕೊಲ್ಲೂರು: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಜಡ್ಕಲ್ ಗ್ರಾಮದ ಸಳ್ಕೊàಡು ಸಮೀಪದ ಕೊಂಡದಕುರಿ ಹಾಗೂ ನಂದಿಗದ್ದೆಗೆ ಸಾಗುವ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಆರಂಭದ ಮೊದಲೇ ಅದಕ್ಕಾಗಿ ಮೀಸಲಾಗಿಟ್ಟಿದ್ದ ರೂ. 15 ಲಕ್ಷ ಅನುದಾನದ ದುರ್ಬಳಕೆ ಆದ ಬಗ್ಗೆ ಭಾರೀ ಆರೋಪ ಕೇಳಿಬರುತ್ತಿದ್ದು ಇಲಾಖೆ ಹಾಗೂ ಗುತ್ತಿಗೆದಾರ ಇದನ್ನು ಮಿಥ್ಯಾರೋಪವೆಂದು ಸಾರಸಗಟಾಗಿ ತಳ್ಳಿಹಾಕಿದ ವಿದ್ಯಮಾನ ಚರ್ಚೆಗೆ ಗ್ರಾಸವಾಗಿದೆ.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐ.ಟಿ.ಡಿ.ಪಿ) ಇಲಾಖೆಯು ಸರಕಾರಿ ಏಜೆನ್ಸಿಗಳಲ್ಲಿ ಒಂದಾದ ಕರ್ನಾಟಕ ರೂರಲ್ ಇನಾóಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್ (ಕೆ.ಆರ್.ಐ.ಡಿ.ಎಲ್.) ಅವರಿಗೆ ರೂ. 15 ಲಕ್ಷ ಮೊತ್ತವನ್ನು ನಿರ್ಮಿತಿ ಕೇಂದ್ರದಡಿ ಕಾಮಗಾರಿಯ ಅನುಷ್ಠಾನಕ್ಕಾಗಿ ವರ್ಗಾಯಿಸಲಾಗಿತ್ತು. ಈ ಕಾಮಗಾರಿಯ ಜವಾಬ್ದಾರಿಯನ್ನು ಗುತ್ತಿಗೆದಾರ ನಾಗೇಶ್ ಜೋಗಿ ಅವರಿಗೆ ವಹಿಸಿಕೊಡಲಾಗಿತ್ತು.
2015-16ನೇ ಸಾಲಿನಲ್ಲಿ ಪೂರ್ಣಗೊಳ್ಳಬೇಕಾಗಿದ್ದ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಕೈಗೆತ್ತಿಕೊಳ್ಳದೆ, ಗುತ್ತಿಗೆದಾರ ರೂ. 15 ಲಕ್ಷ ಮೊತ್ತವನ್ನು ಕಾಮಗಾರಿ ಹೆಸರಿನಲ್ಲಿ ಮುಂಗಡವಾಗಿ ಪಡೆದಿರುವುದಾಗಿ ಜಡ್ಕಲ್ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ, ಬಿ.ಜೆ.ಪಿ. ಮುಖಂಡ ಬಿ.ಎಂ. ಸುಕುಮಾರ್ ಶೆಟ್ಟಿ,, ದೀಪಕ್ ಕುಮಾರ್ ಶೆಟ್ಟಿ ಮುಂತಾದವರು ಆರೋಪಿಸಿದ್ದು ಇದರಲ್ಲಿ ಲಕ್ಷಾಂತರ ರೂ. ಗೋಲ್‌ಮಾಲ್ ಆಗಿರುವ ಬಗ್ಗೆ ತಮ್ಮಲ್ಲಿ ದಾಖಲೆ ಇದೆ ಎಂದಿರುತ್ತಾರೆ.
ಜಿ.ಪಂ. ಸದಸ್ಯ ಶಂಕರ ಪೂಜಾರಿ ಪ್ರತ್ರಿಕ್ರಿಯಿಸಿದ್ದು, ಈ ಕಾಮಗಾರಿಯಲ್ಲಿ ರೂ. 7.50 ಲಕ್ಷ ಮೊತ್ತವನ್ನು ಗುತ್ತಿಗೆದಾರರಿಗೆ ನೀಡಿರುವುದರ ಬಗ್ಗೆ ದಾಖಲೆಗಳಿವೆ ಕಾಮಗಾರಿಯನ್ನು ಆರಂಭ ಮಾಡದೆ ಹಣ ನೀಡಿರುವುದು ಅವ್ಯವಹಾರದ ಪರಮಾವಧಿಯಾಗಿದೆ. ಇದರ ಸಂಪೂರ್ಣ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.
ಕಾಮಗಾರಿಯ ನಡವಳಿಕೆಯ ಬಗ್ಗೆ ಜಡ್ಕಲ್ ತಾ.ಪಂ.ನ ಗಮನಕ್ಕೆ ತಾರದೆ, ಆ ಬಗ್ಗೆ ಯಾವುದೇ ಮಾಹಿತಿ ನೀಡದಿರು ವುದು ಇಲಾಖೆ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಾಗಿದೆ. ಈ ಒಂದು ಗಿರಿಜನ ಅಭಿವೃದ್ಧಿ ಯೋಜನೆಯ ಪೋಲಾದ ಹಣದ ಸಂಪೂರ್ಣ ಮಾಹಿತಿ ನೀಡಬೇಕೆಂದು ಜಿ.ಪಂ. ಸದಸ್ಯ ಬಾಬು ಹೆಗ್ಡೆ ಆಗ್ರಹಿಸಿದ್ದಾರೆ.
ಹಣ ಪಾವತಿ ಆಗಿಲ್ಲ: ಕಾಮ ಗಾರಿಯ ಗುತ್ತಿಗೆದಾರ ನಾಗೇಶ್ ಜೋಗಿ ಅವರು ಮಾತನಾಡಿ 2015-16ನೇ ಸಾಲಿನ ಐ.ಟಿ.ಡಿ.ಸಿ. ಯೋಜನೆಯ ಮುಖ್ಯ ಏಜೆನ್ಸಿಯಾದ ಕೆ.ಆರ್.ಐ.ಡಿ.ಎಲ್. ಕಾಮಗಾರಿಗಾಗಿ ಇವರೆಗೆ ಹಣ ನೀಡಿಲ್ಲ. ಮಳೆಗಾಲದ ಮೊದಲು ಕಾಮಗಾರಿಯನ್ನು ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಬುಧವಾರ ದಂದು ಕೊಂಡದಕುರಿ, ನಂದಿಗದ್ದೆಯ ರಸ್ತೆಗೆ ಕಾಂಕ್ರೀಟೀಕರಣ ಆರಂಭಿಸಲು ತೆರಳಿದಾಗ ಆಕ್ಷೇಪ ವ್ಯಕ್ತವಾಗಿತ್ತು ಎಂದಿರುತ್ತಾರೆ.
ಐ.ಟಿ.ಡಿ.ಪಿ. ಅಧಿಕಾರಿ ವಿಶ್ವನಾಥ ಅವರು ಮಾತನಾಡಿ ಈ ಯೋಜನೆಯಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಬಿಡುಗಡೆಯಾದ ರೂ. 15 ಲಕ್ಷ ಮೊತ್ತವನ್ನು ಕೆ.ಆರ್. ಐ.ಡಿ.ಎಲ್.ನ ಅಧಿಕಾರಿ ಹೇಮಂತ ಅವರಿಗೆ ನೀಡಲಾಗಿದೆ ಎಂದಿರುತ್ತಾರೆ.
ಕೆ.ಆರ್.ಐ.ಡಿ.ಎಲ್. ಅಧಿಕಾರಿ ಹೇಮಂತ ಅವರು ಪತ್ರಿಕೆಯೊಡನೆ ಮಾತನಾಡಿ ಗುತ್ತಿಗೆದಾರರಿಗೆ ಈವರೆಗೆ ಯಾವುದೇ ರೀತಿಯಲ್ಲಿ ಹಣ ಪಾವತಿ ಆಗಿಲ್ಲ. ಕಾಮಗಾರಿ ಪೂರ್ಣವಾಗದೆ ಹಣ ಪಾವತಿ ಮಾಡುವ ಪದ್ಧತಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಬಹಳಷ್ಟು ಪರ-ವಿರೊಧ ಅಭಿಪ್ರಾಯಗಳ ನಡುವೆ ಗಿರಿಜನ ಅಭಿವೃದ್ಧಿ ಯೋಜನೆಯ ಕಾಮ ಗಾರಿಯು ಅನುಷ್ಠಾನದ ಮೊದಲೇ ಹಣ ವರ್ಗಾವಣೆ ಆದ ಗಂಭೀರ ಆರೋಪವು ಜಡ್ಕಲ್, ಮುದೂರು ಪರಿಸರದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದು ಚರ್ಚಾ ವಿಷಯವಾಗಿ ಮೂಡಿಬಂದಿದೆ.
ಜಡ್ಕಲ್, ಮುದೂರು, ಕೊಲ್ಲೂರು, ಗೋಳಿಹೊಳೆ, ಯಳಜಿತ, ತಗ್ಗರ್ಸೆ, ಬೈಂದೂರು, ಯಡ್ತರೆ, ಹಳ್ಳಿಹೊಳೆ, ಕಾಲೊ¤àಡು ಹಾಗೂ ಹೇರೂರು ಎಂಬಲ್ಲಿ ಗಿರಿಜನ ಅಭಿವೃದ್ಧಿ ಯೋಜನೆಯ ಕಾಮಗಾರಿ ಕಳಪೆಯಾಗಿದ್ದು ಭಾರೀ ಅವ್ಯವಹಾರ ನಡೆದಿದೆ.
-ದೀಪಕ್ ಕುಮಾರ್ ಶೆಟ್ಟಿ, ಕುಂದಾಪುರ ತಾ| ರೈತ ಸಂಘ ಅಧ್ಯಕ್ಷ
ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಸಮಗ್ರ ತನಿಖೆ ನಡೆಯಬೇಕು.
-ಬಿ. ಎಂ. ಸುಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.