ದಿಬ್ಬಣ ಹೊರಡ್ಸೌರೆ ಉಮೇಶ್!
Team Udayavani, Mar 31, 2017, 11:24 AM IST
“ಲೆಕ್ಕ ಇಟ್ಟಿಲ್ಲ. ಇದು ನನ್ನ 24ನೇ ಸಿನಿಮಾನೋ, 25ನೇ ಸಿನಿಮಾನೋ ಗೊತ್ತಿಲ್ಲ. “ಅವಳೇ ನನ್ನ ಹೆಂಡ್ತಿ’ಯಿಂದ ಶುರುವಾಗಿ,
ಇಲ್ಲಿಯವರೆಗೂ ಬಂದಿದ್ದೀನಿ …’ ತಮ್ಮನ್ನು ತಾವು ಪರಿಚಯಿಸಿಕೊಂಡೇ ಮಾತಿಗೆ ಕುಳಿತರು ಹಿರಿಯ ನಿರ್ದೇಶಕ ಎಸ್. ಉಮೇಶ್. ಅವರು ಈಗ ಇನ್ನೊಂದು ಹೊಸ ಸಿನಿಮಾ ಶುರು ಮಾಡಿಬಿಟ್ಟಿದ್ದಾರೆ. “ತುಂಬಿದ ಮನೆ’ ಲೆವೆಲ್‌ನ ಸಿನಿಮಾ ಇದು ಎಂಬುದು ಅವರ ನಂಬಿಕೆ.
ತಾರಾಗಣದಲ್ಲದಿದ್ದರೂ, ಕಥೆಯ ವಿಷಯದಲ್ಲಿ ಇದು “ತುಂಬಿದ ಮನೆ’ ರೇಂಜ್‌ಗೆ ಬರುತ್ತದಂತೆ. ಈ ಚಿತ್ರಕ್ಕೆ ಅವರು ಇಟ್ಟಿರುವ
ಹೆಸರು “ಮದುವೆ ದಿಬ್ಬಣ’. ಕಳೆದ ವಾರ ಕನಕಪುರ ರಸ್ತೆಯಲ್ಲಿರುವ ರವಿಕಿರಣ್ ಎಸ್ಟೇಟ್‌ನಲ್ಲಿ ಅವರು ಈ ಚಿತ್ರ ಪ್ರಾರಂಭಿಸಿದ್ದಾರೆ.
ರವಿಕಿರಣ್ ಅವರ ಎಸ್ಟೇಟ್‌ನಲ್ಲಿ ಚಿತ್ರ ಪ್ರಾರಂಭಿಸುವುದಷ್ಟೇ ಅಲ್ಲ, ರವಿಕಿರಣ್ ಅವರಿಗೂ ಒಂದು ಪ್ರಮುಖ ಪಾತ್ರವನ್ನು
ಅವರು ಕೊಟ್ಟಿದ್ದಾರೆ. ಅವರಿಗೆ ಜೊತೆಯಾಗಿ ಚಂದ್ರಕಲಾ ಮೋಹನ್ ಇದ್ದಾರೆ. ಇನ್ನು ಈ ಚಿತ್ರದ ಮೂಲಕ ಅಭಿಷೇಕ್ ಬಣ್ಣ ಹಚ್ಚಿದರೆ, ಸೋನಾಲ್ ಮಂಟೇರಾ ನಾಯಕಿಯಾಗಿದ್ದಾರೆ.
ಚಿತ್ರವನ್ನು ಬಾ.ನಾ. ರವಿ ಎನ್ನುವವರು ನಿರ್ಮಿಸುತ್ತಿದ್ದಾರೆ. ರವಿಕಿರಣ ಮತ್ತು ಚಂದ್ರಕಲಾ ಅಭಿನಯದ ಮೊದಲ ದೃಶ್ಯದ ಚಿತ್ರೀಕರಣ ಮಾಡಿ, ಎಲ್ಲರನ್ನೂ ಪರಿಚಯಿಸಿಕೊಡುತ್ತಾ ಮಾತಿಗೆ ಕುಳಿತರು ಉಮೇಶ್. “ಹೆಸರೇ ಹೇಳುವಂತೆ ಇದು ಮದುವೆಗೆ ಸಂಬಂಧಿಸಿದ
ಸಿನಿಮಾ. ಅದರಲ್ಲೂ ಹಳ್ಳಿ ಮದುವೆಯ ಕುರಿತಾದ ಸಿನಿಮಾ ಇದು. ಹಂಸರಾಜ್ ಅವರು ಚಿತ್ರಕಥೆ ಬರೆದಿದ್ದಾರೆ. 31ರಿಂದ
ಸತತವಾಗಿ ಒಂದು ತಿಂಗಳ ಕಾಲ ಚಿತ್ರೀಕರಣ ಮಾಡಲಿದ್ದೇವೆ. ಇಲ್ಲಿ ಚಂದ್ರಕಲಾ ಮೋಹನ್ ತಾಯಿ ಮತ್ತು ಮಗಳಾಗಿ ದ್ವಿಪಾತ್ರ ಮಾಡುತ್ತಿದ್ದಾರೆ.
ಇನ್ನು ರವಿಕಿರಣ್ ಅವರು ಚಂದ್ರಕಲಾ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ಅಭಿಷೇಕ್ ಮತ್ತು ಸೋನಾಲ್ ಚಿತ್ರದ ನಾಯಕ-ನಾಯಕಿ. ಕೆ.ಆರ್.ಪೇಟೆ ಶಿವರಾಜ್ ಇಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳ ಕಾಲ ಕೂತು
ಕಥೆ ಮಾಡಿದ್ದೇವೆ’ ಎಂದರು ಉಮೇಶ್. ಈ ಪಾತ್ರದಲ್ಲಿ ಅಭಿನಯಕ್ಕೆ ಸ್ಕೋಪ್ ಇರುವ ಕಾರಣಕ್ಕೆ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡರು ರವಿಕಿರಣ್. “ನಾಲ್ಕೈದು ದೃಶ್ಯಗಳಿದ್ದರೂ ಪರವಾಗಿಲ್ಲ. ಅಭಿನಯಕ್ಕೆ ಅವಕಾಶವಿದ್ದರೆ ಮತ್ತು ಜನ ಮೆಚ್ಚಿದರೆ ಅಷ್ಟೇ ಸಾಕು’ ಎಂದರು ರವಿಕಿರಣ್. ಮೊದಲ ಬಾರಿಗೆ ದ್ವಿಪಾತ್ರ ಮಾಡುತ್ತಿರುವ ಬಗ್ಗೆ ಚಂದ್ರಕಲಾ ಬಹಳ ಖುಷಿಯಾದರು. ಇನ್ನು ರವಿಕಿರಣ್, ಚಂದ್ರಕಲಾ, ಉಮೇಶ್‌ರಂಥವರ ಜೊತೆಗೆ ಕೆಲಸ ಮಾಡುತ್ತಿರುವುದು ಅಭಿಷೇಕ್ ಮತ್ತು ಸೋನಾಲ್ ಬಹಳ ಹೆಮ್ಮೆ ವ್ಯಕ್ತಪಡಿಸಿದರು.
ಈ ಚಿತ್ರವನ್ನು ಬಾ.ನಾ. ರವಿ ಎನ್ನುವವರು ನಿರ್ಮಿಸುತ್ತಿದ್ದಾರೆ. ಸಣ್ಣ ಸ್ಟುಡಿಯೋ ಇಟ್ಟುಕೊಂಡಿರುವ ಅವರಿಗೆ ಇದು ಮೊದಲನೆಯ ಚಿತ್ರ. ಚಿತ್ರಕ್ಕೆ ಎ.ಟಿ. ರವೀಶ್ ಅವರ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Madanthyar: ಬಾಲಕಿಯರ ಹಾಸ್ಟೆಲ್ ಕಟ್ಟಡ ಅನಾಥ!
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.