ದಕ್ಷಿಣ ಸುಡಾನ್: ಅಪಹೃತ ಭಾರತೀಯರಿಬ್ಬರ ಬಂಧಮುಕ್ತಿ: ಸುಶ್ಮಾ ಸ್ವರಾಜ್
Team Udayavani, Mar 31, 2017, 11:43 AM IST
ಹೊಸದಿಲ್ಲಿ : ದಕ್ಷಿಣ ಸುಡಾನ್ನಲ್ಲಿ ಅಪಹೃತರಾಗಿದ್ದ ಇಬ್ಬರು ಭಾರತೀಯ ಪೆಟ್ರೋಲಿಯಂ ಇಂಜಿನಿಯರ್ಗಳು ಬಿಡುಗಡೆಗೊಂಡಿರುವುದಾಗಿ ವಿದೇಶ ವ್ಯವಹಾರಗಳ ಸಚಿವ ಸುಶ್ಮಾ ಸ್ವರಾಜ್ ತಿಳಿಸಿದ್ದಾರೆ.
“ಇಬ್ಬರು ಭಾರತೀಯ ಪ್ರಜೆಗಳಾದ ಮಿಥುನ್ ಮತ್ತು ಎಡ್ವರ್ಡ್ ಅವರು ದಕ್ಷಿಣ ಸುಡಾನ್ನಲಿಲ ಅಪಹೃತರಾಗಿದ್ದರು. ಬಂಧಮುಕ್ತರಾದ ಅವರು ಖರ್ತೋಮ್ನಲ್ಲಿನ ಭಾರತೀಯ ದೂತಾವಾಸವನ್ನು ಸುರಕ್ಷಿತವಾಗಿ ತಲುಪಿದ್ದಾರೆ ಎಂದು ತಿಳಿಸಲು ನಾನು ಸಂತಸಪಡುತ್ತೇನೆ.ಇವರ ಬಿಡುಗಡೆಗೆ ಶ್ರಮಿಸಿದ ದಕ್ಷಿಣ ಸುಡಾನ್ನಲ್ಲಿ ಭಾರತೀಯ ರಾಯಭಾರಿ ಶ್ರೀಕುಮಾರ್ ಮೆನನ್ ಅವರನ್ನು ನಾನು ಅಭಿನಂದಿಸುತ್ತೇನೆ’ ಎಂದು ಸುಶ್ವಾ ಸ್ವರಾಜ್ ಈ ಬಗ್ಗೆ ಮಾಡಿರುವ ಸರಣಿ ಟ್ವೀಟ್ನಲ್ಲಿ ಹೇಳಿದ್ದಾರೆ.
ಈ ತಿಂಗಳ ಆದಿಯಲ್ಲಿ ಭಾರತೀಯರಾದ ಮಿಥುನ್ ಗಣೇಶ್ ಮತ್ತು ಎಡ್ವರ್ಡ್ ಎಂಬ್ರೋಸ್ ಅವರನ್ನು ಪಾಕ್ ಪ್ರಜೆ ಅಯಾಜ್ ಹುಸೇನ್ ಜಮಾಲಿ ಅವರೊಂದಿಗೆ ಬಂಡುಕೋರರು ಅವರ ಕಾರ್ಯಸ್ಥಳಕ್ಕೆ ಸಮೀಪದಿಂದ ಅಪಹರಿಸಿ ಒಯ್ದಿದ್ದರು. ಜಮಾಲಿ ಅವರನ್ನು ಕೂಡ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.