​​​​​​​ಇಂದಿನಿಂದ ಸಿದ್ದರಾಮಯ್ಯ ಪ್ರಚಾರ


Team Udayavani, Mar 31, 2017, 12:37 PM IST

mys7.jpg

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರಕ್ಕೆ ಇಳಿಯುವುದರಿಂದ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣ ಶುಕ್ರವಾರದಿಂದ ಮತ್ತಷ್ಟು ರಂಗೇರಲಿದೆ. ಈಗಾಗಲೇ ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪಕ್ಷೇತ್ರದಲ್ಲಿ ಚುನಾವಣಾ ಕಾವು ಏರಿಸಿದ್ದರೆ, ಬಿರು ಬಿಸಿಲನ್ನೂ ಲೆಕ್ಕಿಸದೆ ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಾ ಓಲೈಸುವ ಪ್ರಯತ್ನದಲ್ಲಿ ಎರಡೂ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಾದ ಸವೆಸುತ್ತಿದ್ದಾರೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರದ ಸಲುವಾಗಿಯೇ ಎಂಟು ದಿನಗಳ ಕಾಲ ಮೈಸೂರಿನ ತಮ್ಮ ಮನೆಯಲ್ಲಿ ಠಿಕಾಣಿ ಹೂಡಲಿರುವ ಸಿದ್ದರಾಮಯ್ಯ, ನಾಲ್ಕು ದಿನಗಳ ಕಾಲ ನಂಜನಗೂಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಳಲೆ ಎನ್‌.ಕೇಶವಮೂರ್ತಿ ಪರ ಮತಯಾಚನೆ ಮಾಡಲಿದ್ದಾರೆ.

ಮಾ. 31ರಂದು ಬೆಳಗ್ಗೆ 9 ಗಂಟೆಯಿಂದಲೇ ಪ್ರಚಾರ ಕಾರ್ಯ ಆರಂಭಿಸಲಿದ್ದು, ಗೋಳೂರು, ಚಿನ್ನದಗುಡಿ ಹುಂಡಿ, ವೀರೇದೇವನಪುರ, ಬದನ ವಾಳು, ದೇವನೂರು, ಚಿಕ್ಕ ಕವಲಂದೆ, ನೇರಳೆ, ಹೆಡತಲೆ,ಹೆಮ್ಮರಗಾಲ, ಬಡಗಯ್ಯನಹುಂಡಿ, ಮಲ್ಲಹಳ್ಳಿ, ತರದಲೆ-ಕೂಡ್ಲಾಪುರ, ಹುಣಸನಾಳು, ಕುರಹಟ್ಟಿ, ಸಿಂಧುವಳ್ಳಿ, ಉಪ್ಪಿನಹಳ್ಳಿ, ದೇವರನಸನಹಳ್ಳಿ, ಹೊರಳವಾಡಿ ಗ್ರಾಮಗಳಲ್ಲಿ ಮತಯಾಚನೆ ಮಾಡಲಿದ್ದು, ದೊಡ್ಡ ಕವಲಂದೆ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ.

ಏ. 2ರಂದು ಬೆಳಗ್ಗೆ ಕಳಲೆ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಲಿದ್ದು, ನಂತರ ಮುದ್ದಹಳ್ಳಿ, ನವಿಲೂರು, ಸೂರಹಳ್ಳಿ, ಕಸುವಿನ ಹಳ್ಳಿ, ಹಲ್ಲೆರೆ, ಅಂಬಳೆ, ಹಂಗನವಾಳು, ಮಾದಾಪುರ, ಮಲ್ಕುಂಡಿ, ಹಾಡ್ಯ, ಹಾಡ್ಯದ ಹುಂಡಿ, ಮಡುವಿನ ಹಳ್ಳಿ, ಈರೇಗೌಡನ ಹುಂಡಿ ಗ್ರಾಮಗಳಲ್ಲಿ ಮತಯಾಚನೆ ಮಾಡಲಿದ್ದು, ಹುರ ಮತ್ತು ಹೆಡಿಯಾಲ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ.

ಏ.4ರಂದು ದೇಬೂರು, ಹೆಗ್ಗಡಹಳ್ಳಿ, ಬೆಳೆಲೆ, ಶಿರಮಳ್ಳಿ, ಕುರಿಹುಂಡಿ, ತರಗನಹಳ್ಳಿ, ಕಪ್ಪ ಸೋಗೆ, ನೆಲ್ಲಿತಾಳಪುರ, ಬಸಾಪುರ, ಕಾಟೂರು, ಇಟಾjಲಾ, ಹರದನಹಳ್ಳಿ, ಕಣ್ಣೇನೂರು ಗ್ರಾಮಗಳಲ್ಲಿ ಮತಯಾಚನೆ, ಹುಲ್ಲಹಳ್ಳಿಯಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಏ.6ರಂದು ಇಡೀ ದಿನ ನಂಜನಗೂಡು ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ.

ಶ್ರೀನಿವಾಸಪ್ರಸಾದ್‌ ರಾಜೀನಾಮೆ ನೀಡಿದ ನಂತರ ಉಪ ಚುನಾವಣೆ ಹಿನ್ನೆಲೆ ಈಗಾಗಲೇ ನಂಜನಗೂಡಿಗೆ ಮೂರು ಬಾರಿ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡು ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಸಿ ಉತ್ಸಾಹ ತುಂಬುವ ಕೆಲಸ ಮಾಡಿದ್ದರೆ, ತಾಲೂಕಿನ ಹುರ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಶಂಕುಸ್ಥಾಪನೆ ಹೆಸರಲ್ಲಿ ನಡೆದ ಸಭೆಯಲ್ಲೂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿದ್ದು, ಉಪ ಚುನಾವಣೆಯ ವಿಷಯ ವನ್ನೇ.

ಇದೀಗ ಪ್ರಚಾರದ ಸಲುವಾಗಿಯೇ ಎಂಟು ದಿನಗಳ ಕಾಲ ಮೈಸೂರಿನಲ್ಲಿ ಠಿಕಾಣಿ ಹೂಡುತ್ತಿರುವ ಸಿದ್ದರಾಮಯ್ಯ ತಲಾ ನಾಲ್ಕುದಿನಗಳ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ. ಜತೆಗೆ ಜಿಪಂ ಕ್ಷೇತ್ರ ವ್ಯಾಪ್ತಿಗೆ ಪಕ್ಷದ ವತಿಯಿಂದ ನಿಯೋಜಿಸಿರುವ ಮಂತ್ರಿಗಳು, ಸಂಸದರು, ಶಾಸಕರು ಹಾಗೂ ಪಕ್ಷದ ಮುಖಂಡರೂ ಸಹ ಪ್ರಚಾರ ಕಾರ್ಯಕ್ಕೆ ಶುಕ್ರವಾರ ದಿಂದ ಪೂರ್ಣ ಪ್ರಮಾಣದಲ್ಲಿ ಇಳಿಯಲಿದ್ದಾರೆ.

ಇತ್ತ ಬಿಜೆಪಿ ಕೂಡ ಶತಾಯ-ಗತಾಯ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲೇಬೇಕು ಎಂಬ ಛಲದೊಂದಿಗೆ ಮುನ್ನಗ್ಗುತ್ತಿದ್ದು, ಪಕ್ಷದ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪಕಳೆದ ಒಂದು ವಾರದಿಂದಲೇ ಮೈಸೂರಿನಲ್ಲಿ ಠಿಕಾಣಿ ಹೂಡಿ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಅವರೊಂದಿಗೆ ಹಳ್ಳಿ ಹಳ್ಳಿ ಸುತ್ತಿ ಮತಯಾಚನೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಸೇರಿದಂತೆ ಪಕ್ಷದ ಕೇಂದ್ರ ಸಚಿವರು, ರಾಜ್ಯದ ಮಾಜಿ ಮಂತ್ರಿಗಳು, ಶಾಸಕರು ಹಾಗೂ ಪಕ್ಷದ ಹಲವು ಮುಖಂಡರು ಕ್ಷೇತ್ರದಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಶುಕ್ರವಾರ ಕ್ಷೇತ್ರದ ಉಸ್ತುವಾರಿ ವಿ.ಸೋಮಣ್ಣ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಎಸ್‌.ಮಹದೇವಯ್ಯ ಹಲ್ಲೆರೆ, ಮಲ್ಕುಂಡಿ, ಮಲ್ಲಹಳ್ಳಿ, ಕೆಲ್ಲೂಪುರ, ಹೊಸಕಡಜಟ್ಟಿ, ಹಾಡ್ಯ, ಮಡುವಿನಹಳ್ಳಿ, ಚಿಲ್ಕಹಳ್ಳಿ,ಹೆಡಿಯಾಲ, ನಾಗಣಾಪುರ, ಬಳ್ಳೂರು ಹುಂಡಿ, ಹೊಸವೀಡು, ಹಂಚೀಪುರ ಗ್ರಾಮಗಳಲ್ಲಿ, ಮಾಜಿ ಸಚಿವ ಎ.ನಾರಾಯಣ ಸ್ವಾಮಿ, ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ವಿಪ ಮಾಜಿ ಸದಸ್ಯ ಸಿ.ರಮೇಶ್‌ ಬಂಕಳ್ಳಿ, ಹೆಡಿಯಾಲ, ಚಿಲ್ಕಳ್ಳಿ, ಮಲ್ಲಹಳ್ಳಿ, ಹಾಡ್ಯ, ಹೊಸಕಡಜೆಟ್ಟಿ,ಕಡಜೆಟ್ಟಿ, ಜಾಲಹಳ್ಳಿ ಹಾಗೂ ಹುರ ಗ್ರಾಮಗಳಲ್ಲಿ ಮತಯಾಚನೆ ಮಾಡಿದರೆ, ಮಾಜಿ ಸಚಿವ ಎಸ್‌.ಸುರೇಶ್‌ಕುಮಾರ್‌ ನಂಜನಗೂಡು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ ಮಾಡಲಿದ್ದಾರೆ.

* ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.