ಪ್ರತಿ ಮೂರು ವರ್ಷಕ್ಕೊಮ್ಮೆ ಮಾತು: ಜಡೆಯ ಸ್ವಾಮೀಜಿ
Team Udayavani, Mar 31, 2017, 1:10 PM IST
ಹುಬ್ಬಳ್ಳಿ: ವರ್ಷಕ್ಕೊಮ್ಮೆ ಯುಗಾದಿ ಹಬ್ಬದಂದು ಮಾತ್ರ ನಾವು ಮಾತನಾಡುತ್ತಿದ್ದೆವು. ಆದರೆ ಇನ್ನು ಮೇಲೆ ಮೂರು ವರ್ಷಕ್ಕೊಮ್ಮೆ ಮಾತನಾಡುವುದಾಗಿ ಎಂದು ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾ ಸ್ವಾಮೀಜಿ ನುಡಿದರು.
ಇಲ್ಲಿಯ ಲ್ಯಾಮಿಂಗ್ಟನ್ ರಸ್ತೆಯ ದಿ| ಪಾರ್ವತೆಮ್ಮ ಬುಳ್ಳಾ ಹತ್ತಿ ಕಾರ್ಖಾನೆ ಆವರಣದಲ್ಲಿ ನಡೆದ ಹೊಸ ಸಂವತ್ಸರ ಯುಗಾದಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು,ಪಾರ್ವತೆಮ್ಮ ಬುಳ್ಳಾ ಅವರು ತಾವು ಜೀವಂತ ಇರುವವರೆಗೂ ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ದಿನದಿಂದಾದರೂ ಮಾತನಾಡಿ ಎಂದು ಮನವಿ ಮಾಡಿದ್ದರು.
ಹೀಗಾಗಿ ಪ್ರತಿ ವರ್ಷಕ್ಕೊಮ್ಮೆ ಮಾತನಾಡುತ್ತಿದ್ದೆವು. ಆದರೆ ಮಾತೋಶ್ರೀ ಅವರು ಕಳೆದ ನ. 6ರಂದು ನಮ್ಮನ್ನು ಬಿಟ್ಟು ಹೋಗಿದ್ದರಿಂದ ಇನ್ಮುಂದೆ ವರ್ಷಕ್ಕೊಮ್ಮೆ ಮಾತನಾಡುವುದಿಲ್ಲ. ಅಧಿಕ ಮಾಸ ಬಂದ ಆ ವರ್ಷದ ಯುಗಾದಿ ಹಬ್ಬದ ದಿನದಂದು ಅಂದರೆ ಮೂರು ವರ್ಷಕ್ಕೊಮ್ಮೆ ಮಾತ್ರ ಮಾತನಾಡುವುದಾಗಿ ಪ್ರಕಟಿಸಿದರು.
ಹು-ಧಾ ನಡುವೆಯೂ ಸಮಾಧಾನ: ಕಲಬುರಗಿ, ಸೊಲ್ಲಾಪುರ, ವಿಜಯಪುರ, ಬಾಗಲಕೋಟೆ, ಬೆಂಗಳೂರಿನಲ್ಲಿ “ಸಮಾಧಾನ’ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ- ಧಾರವಾಡ ನಡುವೆ ಸಮಾಧಾನವೊಂದನ್ನು ಸ್ಥಾಪಿಸಲು ಭಕ್ತರು ಮುಂದೆ ಬಂದಿದ್ದಾರೆ. ನಿಂಗಣ್ಣಗೌಡ ಎಂಬುವರು ಎರಡು ಎಕರೆ ಭೂಮಿ ನೀಡುತ್ತಿದ್ದಾರೆ.
ಸಮಾಧಾನದ ಎಲ್ಲ ಉಸ್ತುವಾರಿ ಭಕ್ತರೇ ನೋಡಿಕೊಳ್ಳುತ್ತಾರೆ. ನಾವು ಹಣಕಾಸು ಸೇರಿದಂತೆ ಯಾವ ವಿಚಾರದಲ್ಲೂ ತಲೆ ಹಾಕುವುದಿಲ್ಲ. ತಮ್ಮ ಹಿರಿಯ ಗುರುಗಳು ಮಠದ ಲೆಕ್ಕ ನೋಡಬ್ಯಾಡ- ನಿನ್ನ ಲೆಕ್ಕ ಬಿಡಬ್ಯಾಡ ಎಂದಿದ್ದರು. ಹಣ ಎಲ್ಲಿ ಕೂಡಿರುತ್ತದೆಯೋ ಅಲ್ಲಿ ಜಗಳ ಶುರುವಾಗುತ್ತೆ ಎಂದರು. ಮಕ್ಕಳಿಂದು ಏನೆಲ್ಲ ಸಂಪಾದಿಸುತ್ತಿದ್ದಾರೆ.
ಆದರೆ ಹೆತ್ತ ತಂದೆ- ತಾಯಿಯನ್ನು ಗೌರವದಿಂದ ನೋಡಿಕೊಳ್ಳಲಾಗುತ್ತಿಲ್ಲ. ಜೀವನದುದ್ದಕ್ಕೂ ಮಕ್ಕಳ ಏಳ್ಗೆಗೆ ಶ್ರಮಿಸುವ ಗುರು-ಹಿರಿಯರಿಗೆ ಏನೂ ಕೊಡಬೇಕಿಲ್ಲ. ಅವರಿಗೆ ಒಂದಿಷ್ಟು ಪ್ರೀತಿ- ಗೌರವ, ಆಶ್ರಯ ನೀಡಿದರೆ ಅದೇ ದೊಡ್ಡ ಕೊಡುಗೆ ಎಂದರು. ನಾವು ಗುರು ಹಿರಿಯರನ್ನು ನೋಡಿದರೆ ಮುಂದೆ ನಮ್ಮ ಮಕ್ಕಳು ನಮ್ಮನ್ನು ನೋಡುತ್ತಾರೆ ಎನ್ನುವ ಮನೋಭಾವ ಎಲ್ಲರಲ್ಲಿ ಬರುವುದು ಅಗತ್ಯ.
ನಾಲ್ಕೈದು ಮಕ್ಕಳಿದ್ದರೂ ವಯೋವೃದ್ಧರು ಯಾರೂ ಇಲ್ಲದ ಹಾಗೆ ಬದುಕುವ ಸ್ಥಿತಿ ಹಾಗೂ ಮನಸ್ಸುಗಳು ನಿರ್ಮಾಣವಾಗುತ್ತಿವೆ. ಇದು ನಿವಾರಣೆಯಾಗಬೇಕು. ವಯೋವೃದ್ಧರನ್ನು ಸಲಹುವ ನಿಟ್ಟಿನಲ್ಲಿ ವೃದ್ಧಾಶ್ರಮವೊಂದನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ವೃದ್ಧಾಶ್ರಮ ಸ್ಥಾಪಿಸುವುದು ದೊಡ್ಡದಲ್ಲ.
ಸೇವೆಯಿಂದ ದುಡಿಯುವವರು ದೊರೆಯುವುದು ಮುಖ್ಯವಾಗಿದೆ. ಭಕ್ತರು ಹಣ-ದೇಣಿಗೆ ಕೊಡಬಹುದು. ಆದರೆ ಸೇವೆ ಮಾಡುವ ಭಕ್ತರು ಬೇಕಾಗಿದ್ದಾರೆ. ಸೇವೆ ಮಾಡುವರು ಮುಂದೆ ಬರಬೇಕೆಂದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ವೃದ್ಧಾಶ್ರಮಕ್ಕಾಗಿ ಮೊದಲ ಹಂತವಾಗಿ ಎರಡು ಲಕ್ಷ ರೂ. ನೀಡುವುದಾಗಿ ಘೋಷಿಸಿದರಲ್ಲದೇ, ತಮಗೆ ಬಂದ ಆಸ್ತಿ ನೀಡುವುದಾಗಿ ಪ್ರಕಟಿಸಿದರು.
ಗೊಗ್ಗೆಹಳ್ಳಿ ಸಂಗಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಸೂರ್ಯ ಉದಯಿಸುವಾಗ ಓಂ ಎನ್ನುವ ಶಬ್ದ ಬರುತ್ತದೆ ಎಂಬುದನ್ನು ಸಾವಿರಾರು ವರ್ಷಗಳ ಹಿಂದೆ ಹೇಳಿದ್ದನ್ನು ನಾಸಾ ವಿಜ್ಞಾನಿಗಳು ದೃಢಪಡಿಸಿದ್ದಾರೆ ಎಂದರು. ಮೂಡಿಯ ಸದಾಶಿವ ಮಹಾಸ್ವಾಮೀಜಿ, ಜಡೆಯ ಅಮರೇಶ್ವರ ಶಿವಾಚಾರ್ಯರು, ಗೌಡೇಶ ಬಿರಾದಾರ ಸೇರಿದಂತೆ ಅಪಾರ ಭಕ್ತವಂದ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.