ಮೊದಲ ಸಭೆಯಲ್ಲೇ ಗದ್ದಲ; ಮಾತಿನ ಚಕಮಕಿ,ಸಭಾತ್ಯಾಗ
Team Udayavani, Mar 31, 2017, 3:52 PM IST
ಲಾಲ್‌ಬಾಗ್: ಮೇಯರ್ ಕವಿತಾ ಸನಿಲ್ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಆರೋಗ್ಯ ಸ್ಥಾಯೀ ಸಮಿತಿ ನೂತನ ಅಧ್ಯಕ್ಷೆ ನಾಗವೇಣಿ ಅವರು ಧರಣಿ ನಡೆಸಿ, ಇತರ ಸದಸ್ಯರ ಜತೆಗೆ ಸಭಾತ್ಯಾಗ ಮಾಡಿದ ಘಟನೆ ಗುರುವಾರ ಮಹಾನಗರ ಪಾಲಿಕೆಯಲ್ಲಿ ನಡೆದಿದೆ.
ಆಡಳಿತ ಪಕ್ಷ ಮತ್ತು ವಿಪಕ್ಷ ಎಂಬ ಭೇದ ಮರೆತು ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೇಯರ್ ಕವಿತಾ ಸನಿಲ್ ತಮ್ಮ ಅಧಿಕಾರಾವಧಿಯ ಮೊದಲ ಸಭೆಯಲ್ಲೇ ಇರಿಸು- ಮುರಿಸು ಅನುಭವಿಸುವಂತಾಯಿತು.
ಘಟನೆಯ ವಿವರ
ಸಭೆ ಆರಂಭವಾಗುತ್ತಿದ್ದಂತೆ ಸಾರ್ವ ಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾ ಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷೆ ನಾಗವೇಣಿ ಅವರು, ಮೇಯರ್ ಪೀಠದೆದುರು ಧರಣಿ ಕುಳಿತರು.
“ಪಾಲಿಕೆಯ ನಗರ ಬಡತನ ನಿರ್ಮೂ ಲನ ಕೋಶದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ನನ್ನ ಗಮನಕ್ಕೆ ತಾರದೇ ಮಾ. 31ರಂದು ನಿಗದಿಪಡಿ ಸಲಾಗಿದೆ. ದಲಿತ ಸಮುದಾಯದ ಅಭ್ಯರ್ಥಿಯಾದ ನನ್ನನ್ನು ಕಡೆಗಣಿಸ ಲಾಗಿದೆ’ ಎಂದು ಅವರು ಆರೋಪಿಸಿ ದರು. ವಿಪಕ್ಷ ಸದಸ್ಯರೂ ಮೇಯರ್ ಅವರು ಸರ್ವಾಧಿಕಾರಿಯಂತೆ ವರ್ತಿಸು ತ್ತಿದ್ದಾರೆ ಎಂದು ಆಪಾದಿಸಿದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಕೆಲವು ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದರು.
ಮೇಯರ್ ಸ್ಪಷ್ಟನೆ
“ಪುರಭವನದಲ್ಲಿ ನಡೆಯುವ ಕಾರ್ಯಕ್ರಮ 2016- 17ನೇ ಸಾಲಿನ ಅವಧಿಯಲ್ಲಿ ಮಂಜೂರಾದ ಸವಲತ್ತು ಗಳಿಗೆ ಸಂಬಂಧಿಸಿದ್ದು. ಸ್ಥಾಯೀ ಸಮಿತಿ ಅಧ್ಯಕ್ಷರು ಈ ಬಗ್ಗೆ ಆಕ್ಷೇಪಿಸಿ ಪತ್ರ ಬರೆದಿದ್ದು, ಕಾರ್ಯಕ್ರಮ ಮುಂದೂ ಡಲು ಕೋರಿದ್ದಾರೆ. ಆದರೆ, ಹಿಂದೆಯೇ ನಿಗದಿಯಾದ ಕಾರ್ಯಕ್ರಮ ಉಸ್ತುವಾರಿ ಸಚಿವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈಗ ಸಚಿವರು ನಾಳೆ ಕಾರ್ಯಕ್ರಮ ನಡೆಸಲು ದಿನಾಂಕ ಗೊತ್ತುಪಡಿಸಿದ್ದಾರೆ’ ಎಂದು ಮೇಯರ್, ಸ್ಪಷ್ಟಧಿಪಧಿಡಿಸಿ, ತಮ್ಮ ಸ್ಥಾನಗಳಿಗೆ ತೆರಧಿಳುವಂತೆ ಸ್ಥಾಯೀ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಲ್ಲಿ ವಿನಂತಿಸಿದರು.
ಆಡಳಿತ ಪಕ್ಷದೊಳಗೇ ವಾಗ್ವಾದ
ಈ ಸಂದರ್ಭ ಮಾತಿನ ಚಕಮಕಿ ನಡೆದು, ಗದ್ದಲದ ವಾತಾವರಣ ಸೃಷ್ಟಿ ಯಾಯಿತು. ಆಡಳಿತ ಪಕ್ಷದ ಕೆಲ ಸದಸ್ಯರೂ ಎದ್ದುನಿಂತದ್ದು ಆ ಪಕ್ಷದ ಎರಡು ಗುಂಪುಗಳಲ್ಲೇ ವಾಗ್ವಾದಕ್ಕೆ ಕಾರಣವಾಯಿತು. ಮೇಯರ್ ಅವರು ಸಭೆ ಮುಂದೂಡಿದರು. ಈ ಮಧ್ಯೆ ಮೇಯರ್ ಕೊಠಡಿಯಲ್ಲಿ ಶಾಸಕ ಜೆ.ಆರ್. ಲೋಬೋ ಅವರು ಹಿರಿಯ ಸದಸ್ಯರ ಜತೆ ಸಂಧಾನದಲ್ಲಿ ತೊಡಗಿದ್ದರೆ, ಪರಿಷತ್ತಿನ ಸಭಾಂಗಣದಲ್ಲಿ ಆಡಳಿತ ಪಕ್ಷದ ಸದಸ್ಯರ ಎರಡು ಗುಂಪುಗಳು ವಾಗ್ವಾದದಲ್ಲಿ ತೊಡಗಿದ್ದವು. ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕ ಮೊದಿನ್ ಬಾವಾ ಆಗಮಿಸಿ ಮಾತುಕತೆ ನಡೆಸಿದರು.
ಸದಸ್ಯರ ಸಭಾತ್ಯಾಗ
ಸುಮಾರು ಅರ್ಧ ತಾಸಿನ ಬಳಿಕ, ಸಭಾಂಗಣಕ್ಕೆ ಆಗಮಿಸಿದ ಮೇಯರ್, “ಸದಸ್ಯರೆಲ್ಲರೂ ತಮ್ಮ ಸ್ಥಾನಗಳಿಗೆ ತೆರಳಬೇಕು. ಈ ದಿನಾಂಕವನ್ನು ಉಸ್ತುವಾರಿ ಸಚಿವರು ನಿಗದಿಪಡಿಸಿದ್ದು, ಅವರ ಗಮನಕ್ಕೆ ಈ ವಿಷಯವನ್ನು ತರಲಾಗುವುದು’ ಎಂದು ಹೇಳಿದರು. ಇದರಿಂದ ತೃಪ್ತರಾಗದ ನಾಗವೇಣಿ, ಉಪ ಮೇಯರ್ ರಜನೀಶ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರತಿಭಾ ಕುಳಾಯಿ, ವಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಸಿಪಿಎಂನ ದಯಾನಂದ ಶೆಟ್ಟಿ, ಜೆಡಿಎಸ್‌ನ ಅಬ್ದುಲ್ ಅಝೀಝ್ ಕುದ್ರೋಳಿ, ರಮೀಝಾ ಬಾನು, ಎಸ್‌ಡಿಪಿಐ ಅಯಾಝ್, ಪಕ್ಷೇತರರಾದ ರೇವತಿ ಪುತ್ರನ್ ಸಹ ಹೊರನಡೆದರು.
ಸಭೆ ಮುಂದುವರಿಕೆ..!
ಈ ಹಿನ್ನೆಲೆಯಲ್ಲಿ ಸಭೆ ಮುಂದುವರಿ ಸುವ ಬಗ್ಗೆ ಆಯುಕ್ತ ಮಹಮ್ಮದ್ ನಝೀರ್ ಅವರನ್ನು ಕೋರಲಾಯಿತು. ಸಂಸದರು, ಶಾಸಕರೂ ಸಹಿತ ಒಟ್ಟು 70 ಮಂದಿ ಬಲದ ಪರಿಷತ್ತಿನ ಕಲಾಪ ನಡೆಸಲು ಮೂರನೇ ಒಂದರಷ್ಟು (23.3) ಸದಸ್ಯರ ಹಾಜರಾತಿ ಕಡ್ಡಾಯ. ಅದರಂತೆ 24 ಮಂದಿ ಹಾಜರಿರುವುದರಿಂದ ಸಭೆ ನಡೆಸಲು ತೀರ್ಮಾನಿಸಲಾಯಿತು. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಲೆಕ್ಕಪತ್ರ ಸ್ಥಾಯೀ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.
ನಾಯಿ ಸಾಕಲು ಇನ್ನು ಪರವಾನಿಗೆ ಕಡ್ಡಾಯ
ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಸಾಕು ನಾಯಿಗಳಿಗೆ ಪ್ರಸಕ್ತ (2017-18) ಸಾಲಿನಿಂದಲೇ ಜಾರಿಯಾ ಗುವಂತೆ ಪರವಾನಿಗೆ ಕಡ್ಡಾಯಗೊಳಿಸಲಾಗಿದೆ. ಅದರಂತೆ ಪ್ರಥಮ ವರ್ಷದಲ್ಲಿ ಉಚಿತವಾಗಿ ಪರವಾನಿಗೆ ಪಡೆಯಬಹುದಾಗಿದ್ದು, ಮುಂದಿನ ಸಾಲಿನಿಂದ ಶುಲ್ಕ ಪಾವತಿಸಿ ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳಬೇಕು.
ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಉಚಿತವಾಗಿ ಪರವಾನಿಗೆಯನ್ನು ಪಡೆಯಬಹುದು. ಬಳಿಕ ಪ್ರತಿ ವರ್ಷ 300 ರೂ. ಶುಲ್ಕ ಹಾಗೂ ತಮ್ಮ ಸಾಕು ನಾಯಿಗಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿದ್ದಕ್ಕೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸಿ ಪರವಾನಿಗೆ ನವೀಕರಿಸಿಕೊಳ್ಳಬೇಕು.
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನರಿಗೆ ಉಂಟಾಗುತ್ತಿರುವ ತೊಂದರೆ ನಿವಾರಿಸುವುದು, ಬೀದಿ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸಲು 2016ರ ಮಾ.31ರಲ್ಲಿ ಡಾಗ್ ವೆಲ್ಫೆàರ್ ಸಮಿತಿ ಹಾಗೂ ಲೈಸೆನ್ಸ್ ಸಮಿತಿ ರಚನೆಗೆ ನಿರ್ಣಯಿಸಲಾಗಿತ್ತು. ಬೀದಿ ನಾಯಿ ಹಾಗೂ ಸಾಕು ನಾಯಿಗಳ ಸಮೀಕ್ಷೆ ಮಾಡಿ, ಸಾಕು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸುವುದು ಈ ಸಮಿತಿಯ ಕಾರ್ಯ. ಈ ಬಗ್ಗೆ 2017ರ ಫೆ. 10ರಂದು ಡಾಗ್ ವೆಲ್ಫೆàರ್ ಸಮಿತಿ ಸಭೆಯನ್ನು ಆಯುಕ್ತರು ನಡೆಸಿದ್ದರು. ಅಂದು ನಿಗದಿಪಡಿಸಿದ್ದ ಕೆಲವು ಷರತ್ತುಗಳಿಗೆ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.