ರಸ್ತೆ ಹಂಪ್‌ಗೆ ಬಣ್ಣ ಬಳಿದು ಅಪಘಾತ ನಿಯಂತ್ರಿಸಲು ಆಗ್ರಹ 


Team Udayavani, Apr 1, 2017, 2:20 PM IST

humps.jpg

ಮಹಾನಗರ: ನಗರದ ರಸ್ತೆಗಳಲ್ಲಿ ಹಾಕಿರುವ ಉಬ್ಬುಗಳಿಗೆ (ಹಂಪ್‌) ಬಣ್ಣ ಬಳಿಯದಿರುವುದರಿಂದ ಅಪಘಾತಗಳು ಹೆಚ್ಚಳವಾಗುತ್ತಿವೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು  ದೂರು ನೀಡಿದರು. 

ಹಂಪ್‌ಗ್ಳಿಗೆ ಬಣ್ಣ  ಬಳಿಯುವುದು ಮಹಾನಗರ ಪಾಲಿಕೆಯ ಕೆಲಸ. ಈ ಕುರಿತು ಪಾಲಿಕೆಯ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೂ ಕ್ರಮ ಆಗಿಲ್ಲ. ಮತ್ತೆ ಈಗ ಪಾಲಿಕೆಗೆ ನೆನಪೋಲೆ ಕಳುಹಿಸಲಾಗುವುದು ಎಂದು ಸಂಚಾರ ವಿಭಾಗದ ಎಸಿಪಿ ತಿಲಕ್‌ ಚಂದ್ರ ತಿಳಿಸಿದರು. 

ತ್ರಿಚಕ್ರ ವಾಹನಗಳಲ್ಲಿ  ಕಬ್ಬಿಣದ ಸರಳುಗಳನ್ನು ಅಪಾಯಕಾರಿ ರೀತಿ ಯಲ್ಲಿ ಸಾಗಿಸಲಾಗುತ್ತಿದ್ದು, ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆಗಳಾಗುತ್ತಿವೆ ಎಂದು ಸವಾರ ರೊಬ್ಬರು ದೂರಿದರು. ಈ ಬಗ್ಗೆ ಫೋಟೊ ತೆಗೆದು ನಂಬರ್‌ ಸಮೇತ ಕುಡ್ಲ ಟ್ರಾಫಿಕ್‌ ವಾಟ್ಸಪ್‌ ಗ್ರೂಪ್‌ಗೆ (ನಂ: 9480802312) ಕಳುಹಿಸು ವಂತೆ ಅವರು ತಿಳಿಸಿದರು. 
ಬಿ.ಸಿ. ರೋಡ್‌ನಿಂದ ಕದ್ರಿ ಮಲ್ಲಿಕಟ್ಟೆ ತನಕ ಮಾತ್ರ ಪರವಾನಿಗೆ ಪಡೆದಿರುವ ಬಸ್ಸುಗಳನ್ನು  ಪರವಾನಿಗೆ ಉಲ್ಲಂಘಿಸಿ ಹಂಪನಕಟ್ಟೆ  ಕಡೆಗೆ ಚಲಾಯಿಸಲಾಗುತ್ತಿದೆ ಎಂಬ ದೂರು ಈ ಬಾರಿ ಮತ್ತೆ ಮರುಕಳಿಸಿತು. ಇದಕ್ಕೆ ಉತ್ತರಿಸಿದ ಎಸಿಪಿ ತಿಲಕ್‌ಚಂದ್ರ, ಈಗಾಗಲೇ ಒಂದು ಬಸ್‌ ಕಾರ್ಯವೈಖರಿಯನ್ನು ಪರಿಶೀಲಿಸಿ ದಂಡ ವಿಧಿಸಲಾಗಿದೆ. ಕಾರ್ಯಾ ಚರಣೆಯನ್ನು  ಮುಂದುವರಿಸ ಲಾಗುವುದು ಎಂದು ವಿವರಿಸಿದರು. 

ಬಜಪೆಯಿಂದ ಮುಚ್ಚಾರು ಮಾರ್ಗವಾಗಿ ಸಂಚರಿಸುವ ಒಂದೇ ಕಂಪೆನಿಗೆ ಸೇರಿದ 3 ಖಾಸಗಿ ಸರ್ವಿಸ್‌ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಕಂಡಕ್ಟರ್‌ ಟಿಕೆಟ್‌ ನೀಡುತ್ತಿಲ್ಲ  ಎಂಬುದಾಗಿ ಸಾರ್ವಜನಿಕರೊಬ್ಬರು ದೂರು ನೀಡಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಬಜಪೆ ಠಾಣೆಯ ಪೊಲೀಸರಿಗೆ ಸೂಚಿಸಲಾಗುವುದು ಎಂದು ಎಸಿಪಿ ಹೇಳಿದರು. 
ಉಳ್ಳಾಲ ನಗರ ಸಭೆಯ ಕಚೇರಿಯಲ್ಲಿ  ಪೊಲೀಸ್‌ ಬೀಟ್‌ ಪುಸ್ತಕವನ್ನು ಇರಿಸುವ ವ್ಯವಸ್ಥೆ ಆಗ ಬೇಕು, ಕಂಕನಾಡಿ ಕರಾವಳಿ ವೃತ್ತದಲ್ಲಿ ಮನೆ ಎದುರು ರಿಕ್ಷಾ  ನಿಲುಗಡೆ ಮಾಡುವುದನ್ನು ತಡೆಯಬೇಕೆಂದು ಒತ್ತಾಯಿಸಲಾಯಿತು. 
ಬಿಕರ್ನಕಟ್ಟೆ  ಕೈಕಂಬದಲ್ಲಿರುವ ಹಳೆ ಗ್ರಾಮಾಂತರ ಪೊಲೀಸ್‌ ಠಾಣಾ ಕಟ್ಟಡದ ಹಿಂಭಾಗದಲ್ಲಿ ಸಂಜೆ ಹೊತ್ತು ಕೆಲವು ಮಂದಿ ಪಡ್ಡೆ ಹುಡುಗರಿಂದ ವಿವಿಧ ಅನೈತಿಕ ವ್ಯವಹಾರ ನಡೆಯುತ್ತಿದೆ ಎಂದೊಬ್ಬರು ದೂರು ನೀಡಿದರು. ಈ ಬಗ್ಗೆ ತಪಾಸಣೆ ನಡೆಸಲಾಗುವುದು ಎಂದು ಎಸಿಪಿ ತಿಳಿಸಿದರು. 

ಮುಕ್ಕದಲ್ಲಿ  ಖಾಸಗಿ ಎಕ್‌ಪ್ರಸ್‌ ಬಸ್‌ ಚಾಲಕರು ವಿದ್ಯಾರ್ಥಿಗಳಿಗೆ ನಿಲುಗಡೆ ಕೊಡುತ್ತಾರೆ, ಇತÃರಿಗೆ ಕೊಡುವುದಿಲ್ಲ ಎಂಬ ದೂರು ಇಂದು ಕೂಡ ಕೇಳಿ ಬಂತು. ಇದಕ್ಕೆ ಉತ್ತರಿಸಿದ ಎಸಿಪಿ ತಿಲಕ್‌ ಚಂದ್ರ   ಮುಕ್ಕದಲ್ಲಿ  ಎಕ್ಸ್‌ ಪ್ರಸ್‌ ಬಸ್ಸುಗಳಿಗೆ ಅಧಿಕೃತ ನಿಲುಗಡೆ ಇರುವುದಿಲ್ಲ. ಈ ಬಗ್ಗೆ ಆರ್‌ಟಿಒ ಅವರಿಗೆ ಪತ್ರ ಬರೆದು ಅಲ್ಲಿ  ಅಧಿಕೃತ ನಿಲುಗಡೆ ಒದಗಿಸುವಂತೆ ಕೋರ ಬೇಕು. ಆರ್‌ಟಿಒ ಅನುಮತಿ ಲಭಿಸಿದರೆ ಅಲ್ಲಿ ಎಕ್ಸ್‌ಪ್ರೆಸ್‌ ಬಸ್‌ ನಿಲ್ಲಿಸುವ ಬಗ್ಗೆ ಬಸ್‌ ಮಾಲಕರ ಮೇಲೆ ಒತ್ತಡ ತರಲು ಪೊಲೀಸರಿಗೆ ಸಾಧ್ಯವಾಗುವುದು ಎಂದರು. 

ಅಗ್ನಿ ಶಾಮಕ  ವ್ಯವಸ್ಥೆ ಇಲ್ಲ
ಸುರತ್ಕಲ್‌-  ಎಂಆರ್‌ಪಿಎಲ್‌ ರಸ್ತೆಯ ಕಾನ/ ಬಾಳದಲ್ಲಿ   ಬಿಎಎಸ್‌ಎಫ್‌ ಸಮೀಪ ಗ್ಯಾಸ್‌ ತುಂಬಿಸಿದ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಭಯದಿಂದ ವಾಸಿಸುವಂತಾಗಿದೆ. ಈ ಪ್ರದೇಶದಲ್ಲಿ ಹತ್ತಿರದಲ್ಲಿ  ಎಲ್ಲೂ ಅಗ್ನಿ ಶಾಮಕ ವಾಹನ ಗಳಿಲ್ಲ, ನೀರಿನ ವ್ಯವಸ್ಥೆ ಇಲ್ಲ. ಅಕಸ್ಮಾತ್‌ ಗ್ಯಾಸ್‌ ಸೋರಿಕೆಯಾದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಗ್ಯಾಸ್‌ ಟ್ಯಾಂಕರ್‌ಗಳ ನಿಲುಗಡೆಗೆ ಇಲ್ಲಿ ಅವಕಾಶ ನೀಡ ಬಾರದು ಎಂದು ವ್ಯಕ್ತಿಯೊಬ್ಬರು ಒತ್ತಾಯಿಸಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವ ಉತ್ತರ ಸಿಕ್ಕಿತು. 

ಪಿವಿಎಸ್‌ ಜಂಕ್ಷನ್‌ ಮೂಲಕ ಸಂಚರಿಸಬೇಕಾದ ಕೆಲವು ಬಸ್ಸುಗಳನ್ನು ಕೆನರಾ ಕಾಲೇಜು- ಜೈಲ್‌ ರೋಡ್‌ ಮೂಲಕ ಸಾಗುವ ಬಗ್ಗೆ ಬಂದ ಫೋನ್‌ ಕರೆಗೆ ಪ್ರತಿಕ್ರಿಯಿಸಿದ ಎಸಿಪಿ  ಕೆಲವೊಂದು ಅನಿವಾರ್ಯ (ಪಿವಿಎಸ್‌ ಜಂಕ್ಷನ್‌- ಬಂಟ್ಸ್‌ ಹಾಸ್ಟೆಲ್‌ ರಸ್ತೆಯಲ್ಲಿ  ಟ್ರಾಫಿಕ್‌ ಜಾಂ ಉಂಟಾದರೆ) ಸಂದರ್ಭ ಗಳಲ್ಲಿ  ಪೊಲೀಸರೇ ಬಸ್ಸುಗಳನ್ನು ಈ ಮಾರ್ಗ ದಲ್ಲಿ  ಸಂಚರಿಸುವಂತೆ ಚಾಲಕರಿಗೆ ಸೂಚನೆ ನೀಡುತ್ತಾರೆ. ಒಂದೊಮ್ಮೆ  ಪಿವಿಎಸ್‌ನಲ್ಲಿ ಟ್ರಾಫಿಕ್‌ ಜಾಂ ಇಲ್ಲದೆ ಇದ್ದು, ಬಸ್‌ ಚಾಲಕರು ತಾವಾಗಿಯೇ ಜೈಲ್‌ ರೋಡ್‌ನ‌ಲ್ಲಿ  ಬಸ್‌ ಚಲಾಯಿಸಿದರೆ ನಮಗೆ ತಿಳಿಸಿ ಎಂದು ಎಸಿಪಿ ತಿಲಕ್‌ಚಂದ್ರ ತಿಳಿಸಿದರು. 

ಬೆಳ್ಳಂಬೆಳಗ್ಗೆ ವೈನ್‌ ಶಾಪ್‌ ಓಪನ್‌
ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಇರುವ ಕೆಲವು ವೈನ್‌ ಶಾಪ್‌ಗ್ಳನ್ನು ಬೆಳಗ್ಗೆ 5.30 ರ ವೇಳೆಗೆ ತೆರೆದು ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದರು. ಇದರ ಬಗ್ಗೆ  ತತ್‌ಕ್ಷಣ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಎಸಿಪಿ ವಿವರಿಸಿದರು.

ಬೈಕಂಪಾಡಿಯಲ್ಲಿ  ಕೆಲವು ರಿಕ್ಷಾ  ಚಾಲಕರು ಮಿತಿ ಮೀರಿ ಲಗ್ಗೇಜ್‌ ಸಾಗಾಟ ಮಾಡುತ್ತಿದ್ದು,  ಇದರಿಂದ ಟೆಂಪೊ ಚಾಲಕರಿಗೆ ಬಾಡಿಗೆ ಸಿಗುತ್ತಿಲ್ಲ ಎಂದು ಟೆಂಪೊ ಚಾಲಕರೊಬ್ಬರು ಆರೋಪಿಸಿದರು. ಇದರ ಬಗೆ ಪರಿಶೀಲಿಸಿ ಕ್ರಮ ಜರಗಿಸುವ ಬಗ್ಗೆ ಸಂಬಂಧ ಪಟ್ಟ ಪೊಲೀಸ್‌ ಅಧಿಕಾರಿಗಳು ತಿಳಿಸಿದರು. 

ಬೋಳಾರದಲ್ಲಿ  ಇತ್ತೀಚೆಗೆ ಮದುವೆಗೆ ಬಂದಿದ್ದ  ವ್ಯಕ್ತಿಯೊಬ್ಬರು ಕಾರ್ಯಕ್ರಮ ಮುಗಿಸಿ ಹೊರಗೆ ಬಂದಾಗ ವ್ಯಕ್ತಿಯೊಬ್ಬ ಬಳಿ ಬಂದು ತನಗೆ ತುರ್ತಾಗಿ ಫೋನ್‌ ಮಾಡಬೇಕಾಗಿದೆ ಎಂದು ನಂಬಿಸಿ ಮೊಬೈಲ್‌ ಫೋನ್‌ ಪಡೆದುಕೊಂಡು ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದಾನೆ ಎಂಬ ದೂರು ಬಂತು. ಈ ಕುರಿತು ಪಾಂಡೇಶ್ವರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸುವಂತೆ ಎಸಿಪಿ ತಿಳಿಸಿದರು.

ಕದ್ರಿ  ಮಾರ್ಗವಾಗಿ ಸಂಚರಿಸುವ ಕೆಲವು ಸಿಟಿ ಬಸ್ಸುಗಳನ್ನು ಚಾಲಕರು ಮಲಿಕಟ್ಟೆಗೆ ಬಾರದೆ ಹೊರಗಿನಿಂದಲೇ ಚಲಾಯಿಸುತ್ತಿದ್ದಾರೆ  ಎಂಬ ದೂರಿಗೆ, ಈ ಕುರಿತು ತಪಾಸಣೆ ನಡೆಸಿ ಅಗತ್ಯ ಬಿದ್ದರೆ ಕೇಸು ದಾಖಲಿಸಲು  ಟ್ರಾಫಿಕ್‌ ಪೂರ್ವ ಠಾಣೆಯ ಇನ್ಸ್‌ಪೆಕ್ಟರ್‌ ಸುರೇಶ್‌ ಕುಮಾರ್‌ ಅವರಿಗೆ ಸ್ಥಳದಲ್ಲಿಯೇ ಸೂಚಿಸಿದರು. 

ಆರ್‌ಟಿಒ ಕಚೇರಿಯಲ್ಲಿ ಹಣ ಪಾವತಿಸಲು ಹಿರಿಯ ನಾಗರಿಕರೂ ಕ್ಯೂ ನಿಲ್ಲ ಬೇಕಾಗುತ್ತದೆ ಎಂದು ಹಿರಿಯ ನಾಗರಿಕರೊಬ್ಬರು ತಿಳಿಸಿದಾಗ ಈ ಬಗ್ಗೆ ಆರ್‌ಟಿಒ ಕಚೇರಿಗೆ ಪತ್ರ ಬರೆಯ ಲಾಗುವುದು. ಸೆಂಟ್ರಲ್‌ ಮಾರ್ಕೆಟ್‌ನಲ್ಲಿ  ಪಾರ್ಕಿಂಗ್‌ ಸಮಸ್ಯೆ ಬಗ್ಗೆ  ವ್ಯಕಿಯೊಬ್ಬರು ಪ್ರಸ್ತಾವಿಸಿದಾಗ  ಸದ್ಯದಲ್ಲಿಯೇ ದ್ವಿಚಕ್ರ ಮತ್ತು ಚತುಷcಕ್ರ ವಾಹನಗಳ ನಿಲುಗಡೆಗೆ ಪ್ರತೇಕ ವ್ಯವಸ್ಥೆ ಮಾಡಲಾಗುವುದು ಎಂದು ಎಸಿಪಿ ತಿಳಿಸಿದರು. 

ಬಂದರ್‌ನ ಬೀಬಿ ಅಲಾಬಿ ರಸ್ತೆಯಲ್ಲಿ  ಗುಜರಿ ಸಾಮಗ್ರಿಗಳನ್ನು ರಾಶಿ ಹಾಕುವುದರಿಂದ ನಡೆದಾಡಲೂ ಕಷ್ಟವಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದರು. ಬರ್ಕೆ ಪೊಲೀಸ್‌ ಠಾಣೆ ವತಿಯಿಂದ ವಿವಿಧ ಪ್ರಕರಣ ಗಳಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಎಲ್ಲೆಂದರಲ್ಲಿ ರಾಶಿ ಹಾಕುವುದರಿಂದ  ಸಮಸ್ಯೆ ಯಾಗುತ್ತಿದೆ ಎಂದೊಬ್ಬರು ತಿಳಿಸಿದಾಗ ಅಲ್ಲಿ  ವಾಹನ  ಸುವ್ಯವಸ್ಥೆಗೆ ಬರ್ಕೆ ಠಾಣೆಯ ಪೊಲೀಸ ರಿಗೆ ಸೂಚಿಸಲಾಗುವುದು ಎಂದು ಎಸಿಪಿ ತಿಲಕ್‌ ಚಂದ್ರ ಹೇಳಿದರು. 

34ನೇ ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ  ಸಾರ್ವಜನಿಕರಿಂದ ಒಟ್ಟು 21 ಕರೆಗಳು ಸ್ವೀಕೃತವಾದುವು. 
ಎಸಿಪಿ ವೆಲೆಂಟೈನ್‌ ಡಿ’ಸೋಜಾ, ಟ್ರಾಫಿಕ್‌ ಪಿಐ ಸುರೇಶ್‌ ಕುಮಾರ್‌, ಎಎಸ್‌ಐ ಯೂಸುಫ್‌, ಸಿಬಂದಿ ಪುರುಷೋತ್ತಮ  ಉಪಸ್ಥಿತರಿದ್ದರು.

ಟಾಪ್ ನ್ಯೂಸ್

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kasaragod ಅಪರಾಧ ಸುದ್ದಿಗಳು

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.