ನಮ್ಮೂರ ರಸ್ತೆ ದುರಸ್ತಿಗೂ ಮೋದಿ ಹೇಳ್ಬೇಕು !
Team Udayavani, Apr 1, 2017, 2:36 PM IST
ಬೆಳ್ತಂಗಡಿ : ಬೆಳ್ತಂಗಡಿ – ಉಪ್ಪಿನಂಗಡಿ ರಸ್ತೆ ಮೂಲಕ ಹೋಗುವಾಗ ಸಿಗುವ ಕುಪ್ಪೆಟ್ಟಿಯಿಂದ ವಿಭಜನೆಯಾಗುವ ಮೊಗೆರೋಡಿ ಪದು¾ಂಜ ಬಂದಾರು ರಸ್ತೆಯ ದುರವಸ್ಥೆ ಕುರಿತು ಅದೆಷ್ಟೋ ಬಾರಿ ನಾಗರಿಕರು, ಮಾಧ್ಯಮಗಳು ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ.
13 ದಿನಗಳ ಹಿಂದೆ ಸ್ಥಳೀಯ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿರುವ ಹರ್ಷಿತಾ ಕೆ. ಎಸ್. ಅವರು ಫೇಸ್‌ಬುಕ್ ಮೂಲಕ “ಕುಪ್ಪೆಟ್ಟಿ ಮೊಗೆರೋಡಿ ರಸ್ತೆಯ ದುರವಸ್ಥೆ ನೋಡಿ, ದುರಸ್ತಿ ಮಾಡಿಸಿ’ ಎಂದು ಒಂದಷ್ಟು ಛಾಯಾಚಿತ್ರ ಹಾಕಿದ್ದರು. ಈ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೂ ಅನೇಕ ಮನವಿ ಮಾಡಲಾಗಿತ್ತು. ಸ್ಪಂದನವೇ ಇಲ್ಲ ಎಂದಾದಾಗ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಚಿತ್ರಗಳ ಸಹಿತ ಮನವಿ ನೀಡಲಾಯಿತು. ದಿನಗಳು ಹೆಚ್ಚು ಉರುಳಲೇ ಇಲ್ಲ. ಶುಕ್ರವಾರ ದ.ಕ. ಜಿಲ್ಲಾ ಪಂಚಾಯತ್‌ನಿಂದ ಹರ್ಷಿತಾ ಅವರಿಗೆ ರಸ್ತೆಯ ಮಾಹಿತಿಗಾಗಿ ದೂರವಾಣಿ ಕರೆ ಬಂದಿದೆ. ದುರಸ್ತಿಯ ಸಾಧ್ಯತೆ ನಿಚ್ಚಳವಾಗಿದೆ.
ಹಳ್ಳಿಗಾಡಿನ ಅನಿವಾರ್ಯವಾದ ರಸ್ತೆ ದುರಸ್ತಿಗೂ ಮೋದಿ ಕಾರ್ಯಾಲಯದಿಂದ ಸೂಚನೆ ಬರಬೇಕಾಯಿತು. ಇದು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ ಎಂದು ಈ ಭಾಗದ ಜನ ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.