ಆ್ಯಂಬುಲೆನ್ಸ್ನಲ್ಲಿಯೇ ಪರೀಕ್ಷೆ ಬರೆದ ಶರೀಫ್
Team Udayavani, Apr 1, 2017, 3:09 PM IST
ಚೆಂಗನ್ನೂರು: ಅಸ್ವಸ್ಥನಾದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಪರೀಕ್ಷೆ ಬರೆದ ಸುದ್ದಿಯನ್ನು ಹಿಂದೆ ಓದಿದ್ದೇವೆ. ಇದೀಗ ಅಪಘಾತದಲ್ಲಿ ಜಖಂಗೊಂಡಿದ್ದ ಓರ್ವ ವಿದ್ಯಾರ್ಥಿಗಾಗಿ ಆ್ಯಂಬುಲೆನ್ಸ್ ಅನ್ನೇ ಪರೀಕ್ಷಾ ಕೊಠಡಿಯಾಗಿ ಬದಲಾಯಿಸಲಾಗಿದೆ.
ಚೆಂಗನ್ನೂರು ಸಮೀಪದ ಕೊಡುಕುಲಂಜಿ ರಾಜರಾಜೇಶ್ವರಿ ಹಿರಿಯ ಮಾಧ್ಯಮಿಕ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಶರೀಫ್ ಟ್ಯೂಶನ್ಗೆ ಹೋಗುತ್ತಿದ್ದಾಗ ಬೈಕ್ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯ ಗೊಂಡಿದ್ದೇನೆ. ನಿತ್ಯ ನಡೆದುಕೊಂಡೆ ಟ್ಯೂಶನ್ಗೆ ಹೋಗುವ ಶರೀಫ್ಗೆ ಆ ದಿನ ಪರಿಚಿತ ವ್ಯಕ್ತಿಯೊಬ್ಬರು ಆ ದಾರಿಯಾಗಿ ಬೈಕ್ನಲ್ಲಿ ಬಂದಾಗ ಟ್ಯೂಶನ್ ಕೇಂದ್ರದ ತನಕ ಲಿಫ್ಟ್ ಕೊಡುತ್ತೇನೆ ಎಂದು ಕರೆದುಕೊಂಡು ಹೋಗಿದ್ದರು. ಆದರೆ ತುಸು ದೂರ ಹೋಗುವಷ್ಟರಲ್ಲಿ ಬೈಕ್ ಪಲ್ಟಿಯಾಗಿ ಹಿಂದೆ ಕುಳಿತಿದ್ದ ಶರೀಫ್ ಗಾಯಗೊಂಡಿದ್ದ.
ತಿರುವಲ್ಲದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದ ಶೆರಿಫ್ ವೈದ್ಯರ ಅನುಮತಿ ಪಡೆದುಕೊಂಡು ಸಿಎಇಎಸ್ಇ ಪರೀಕ್ಷೆ ಬರೆಯಲು ಆ್ಯಂಬುಲೆನ್ಸ್ನಲ್ಲಿ ಬಂದಿದ್ದ. ಆದರೆ ಆ್ಯಂಬುಲೆನ್ಸ್ನಿಂದ ಇಳಿದು ಪರೀಕ್ಷಾ ಕೊಠಡಿಗೆ ಹೋಗಲು ಸಾಧ್ಯವಾಗದ ಕಾರಣ ಆ್ಯಂಬುಲೆನ್ಸ್ನಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲಾಯಿತು. ಕೈಗೂ ಗಾಯವಾಗಿರುವ ಕಾರಣ ಪೆನ್ ಹಿಡಿಯಲು ಕಷ್ಟವಾಗುತ್ತಿತು. ನೋವನ್ನು ಅವಡುಗಚ್ಚಿ ಸಹಿಸಿ ಶೆರಿಫ್ ಇಂಗ್ಲೀಷ್ ಪರೀಕ್ಷೆ ಬರೆದಿದ್ದಾನೆ. ಇನ್ನುಳಿದ ಪರೀಕ್ಷೆಗಳನ್ನು ಇದೇ ರೀತಿ ಬರೆಯುಲ ಛಲ ಅವನಲ್ಲಿದೆ. ಅಪಘಾತದ ಕಾರಣ ಒಂದು ವರ್ಷ ವ್ಯರ್ಥವಾಗಿ ಹೋಗಬಾರದು ಎನ್ನುವುದು ಅವನ ಕಾಳಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ
Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು
Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.