EVM ತಿರುಚುವಿಕೆ: ಮತ್ತೆ ಮತ ಪತ್ರ ಬಳಕೆಗೆ ಕೇಜ್ರಿ, ಕೈ ನಾಯಕರ ಆಗ್ರಹ
Team Udayavani, Apr 1, 2017, 5:40 PM IST
ಹೊಸದಿಲ್ಲಿ : ಈಚಿನ ಪಂಚರಾಜ್ಯ ಚುನಾವಣೆಗಳಲ್ಲಿ ಮತ ಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳಿಗೆ ಕಳವಳ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕರನ್ನು ಒಳಗೊಂಡ ನಿಯೋಗವೊಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಝಾಯಿದಿ ಅವರನ್ನು ಭೇಟಿಯಾಗಿ ತಿರುಚುವಿಕೆಯಿಂದ ಮಕ್ತವಾಗಿರುವ ಚುನಾವಣೆಗಳನ್ನು ಆಗ್ರಹಿಸಿದ್ದಾರೆ.
“ಆರಂಭದಿಂದಲೇ ನಾನು ವಿದುನ್ಮಾನ ಮತ ಯಂತ್ರ (ಇವಿಎಂ)ಗಳನ್ನು ನಂಬುತ್ತಿರಲಿಲ್ಲ. ಇಡಿಯ ಜಗತ್ತೇ ಚುನಾವಣೆಗೆ ಮತ ಪತ್ರಗಳನ್ನು ಬಳಸುತ್ತಿರುವಾಗ ನಾವು ಕೂಡ ಮತಪತ್ರಗಳನ್ನು ಬಳಸುವುದಕ್ಕೆ ಏನು ತೊಂದರೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಇದಕ್ಕೆ ಮೊದಲು ಆಮ್ ಆದ್ಮಿ ಪಕ್ಷ ಪಂಜಾಬ್‌ನಲ್ಲಿ ಮತ ಯಂತ್ರಗಳನ್ನು ತಿರುಚಲಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸಿ ವಿವಿಪಿಟಿ ಯಂತ್ರಗಳ ಮೂಲಕ ಕೊಡಲಾಗಿರುವ ಮತದಾನದ ಚೀಟಿಗಳನ್ನು ಚುನಾವಣಾ ಫಲಿತಾಂಶಗಳೊಂದಿಗೆ ತಾಳೆ ಹಾಕಲು ಆಗ್ರಹಿಸಿತು.
ಸಭೆಯ ಬಳಿಕ ಆಪ್ ನಾಯಕ ರಾಘವ ಛಡ್ಡಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಕ್ಷವು ಬೂತ್ ಮಟ್ಟದ ಮತದಾನದ ನಮೂನೆಯ ಬಗ್ಗೆ ನಡೆಸಿದ ಪ್ರಾಥಮಿಕ ವಿಶ್ಲೇಷಣೆಯು ಇವಿಎಂ ತಿರುಚುವಿಕೆ ನಡೆದಿರುವುದನ್ನು ತೋರಿಸಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
MUST WATCH
ಹೊಸ ಸೇರ್ಪಡೆ
Niveus Mangaluru Marathon 2024: ನ.10ರಂದು ಬೆಳಗ್ಗೆ ವಾಹನ ಸಂಚಾರದಲ್ಲಿ ಬದಲಾವಣೆ
Waqf: ಮಠದ ಜಾಗದ ಪಹಣಿಯಲ್ಲಿ ವಕ್ಫ್ ನಮೂದು; ಸ್ವಾಮೀಜಿ ಪಾದಯಾತ್ರೆ ಬಳಿಕ ಹೆಸರು ಮಾಯ!
Mangaluru: ಮಾತೃ ಭಾಷಿಕರ ಕೊಡುಗೆಯಿಂದ ಕೊಂಕಣಿ ಸಮೃದ್ಧ: ಅವಧೂತ್ ತಿಂಬ್ಲೊ
Mangaluru: ಮೂಡುಶೆಡ್ಡೆ; ಸರಕಾರಿ ಜಾಗದಲ್ಲಿ ಮರಗಳ ಮಾರಣ ಹೋಮ
Kasaragod: ಶ್ರೀಗಂಧ ಕೊರಡು ಸಹಿತ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.