ಅಷ್ಟಬಂಧ ಸಹಿತ ಶ್ರೀ ದೇವರ ಪುನರ್ ಪ್ರತಿಷ್ಠೆ ಸಂಪನ್ನ
Team Udayavani, Apr 2, 2017, 5:36 PM IST
ಹೆಬ್ರಿ: ಕಾರ್ಕಳ ತಾಲೂಕಿನ ಹೆಬ್ರಿಯ ಇತಿಹಾಸ ಪ್ರಸಿದ್ಧ ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಷ್ಟಬಂಧ ಸಹಿತ ಶ್ರೀ ದೇವರ ಪುನರ್ ಪ್ರತಿಷ್ಠೆ ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಮಹೋತ್ಸವದ ಅಂಗವಾಗಿ ಎ.2ರಂದು ದೇವಸ್ಥಾನದ ತಂತ್ರಿಗಳಾದ ಪ್ರೇಮಚಂದ್ರ ಐತಾಳ್ ಅವರ ಧಾರ್ಮಿಕ ನೇತೃತ್ವದಲ್ಲಿ ಆರ್ಚಕರ ಸಹಕಾರದೊಂದಿಗೆ ಶ್ರೀ ದೇವರ ಅಷ್ಟಬಂಧ ಸಹಿತ ಪುನರ್ ಪ್ರತಿಷ್ಠೆ ನಡೆಯಿತು.
ಬೆಳಿಗ್ಗೆ ಪ್ರತ್ಯಕ್ಷ ಗೋದಾನ , ಪ್ರಾಸಾದ ಪ್ರತಿಷ್ಠೆ , ನಪುಂಸಕ ಶಿಲಾ ಪ್ರತಿಷ್ಠೆ, ರತ್ನನ್ಯಾಸ ಪೀಠ ಪ್ರತಿಷ್ಠೆ, ಸಾಮಾನ್ಯ ಶಾಂತಿ ಹೋಮ, ಪ್ರಾಯಶ್ಚಿತ ಹೋಮಗಳು ನಡೆದು, ಮಿಥುನ ಲಗ್ನ ಸುಮುಹೂರ್ತದಲ್ಲಿ ಕ್ಷೇತ್ರಾಧಿದೇವತೆ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವರ ಬಿಂಬ ಪುನರ್ ಪ್ರತಿಷ್ಠೆ ,ಬಳಿಕ ಅಷ್ಟಬಂಧ ಪ್ರತಿಷ್ಠೆ ,ಜೀವ ಕುಂಭಾಭಿಷೇಕ, ನಿದ್ರಾ ಕುಂಭಾ, ತತ್ವ ಕಲಶಾಭಿಷೇಕ, ನ್ಯಾಸಾಧಿಗಳು, ಮಹಾಪೂಜೆ, ನತ್ಯ ನೈಮಿತ್ತಿಕ ಪೂಜಾವಿಧಾನಗಳ ಪ್ರತಿಜ್ಞಾ ಸ್ವೀಕಾರ, ಮಂಟಪ ಕುಂಡದಲ್ಲಿ ಅಗ್ನಿ ಪ್ರತಿಷ್ಠೆ, ಭದ್ರದೀಪ ಪ್ರತಿಷ್ಠೆ , ಕವಾಟ ಬಂಧನ ನಡೆಯಿತು. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಪಾದರು ದೇವರಿಗೆ ಪೂಜೆ ಸಲ್ಲಿಸಿದರು.
ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು 8000ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡು ಅನ್ನ ಪ್ರಸಾದ ಸೇವಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್, ಗೌರವಾಧ್ಯಕ್ಷ ಸುಭಾಸ್‌ಕೃಷ್ಣ ಬಲ್ಲಾಳ್,ಎಚ್ ದಯಾನಂದ ಬಲ್ಲಾಳ್,ರವೀಂದ್ರ ಬಲ್ಲಾಳ್,ಪ್ರಸನ್ನ ಬಲ್ಲಾಳ್, ,ಆರ್ಥಿಕ ಸಮಿತಿಯ ಅಧ್ಯಕ್ಷ ಪ್ರಸಾದ್ ಬಲ್ಲಾಳ್, ಸಂಚಾಲಕ ಎಚ್. ಸತೀಶ್ ಪೈ, ಆಡಳಿತಾಧಿಕಾರಿ ಗಣೇಶ್ ಪಿ, ಕ್ಷೇತ್ರೇಶರ ತಾರನಾಥ ಬಲ್ಲಾಳ್, ಮಾಜಿ ಶಾಸಕ ಎಚ್ ಗೋಪಾಲ ಭಂಡಾರಿ, ಅರ್ಚಕ ರಾಮಕೃಷ್ಣ ಆಚಾರ್ಯ, ಪ್ರಚಾರ ಹಾಗೂ ಸಂಪರ್ಕ ಸಮಿತಿಯ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ, ಸಮಿತಿಯ ಉಪಾಧ್ಯಕ್ಷ ಜ್ಯೋತಿಷಿ ನಿತ್ಯಾನಂದ ನಾಯಕ್,ವ್ಯವಸ್ಥೆ ಹಾಗೂ ಕಾಮಗಾರಿ ಸಮಿತಿಯ ಅಧ್ಯಕ್ಷ ಪ್ರವೀಣ್ ಬಲ್ಲಾಳ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.