ಭಗವಂತನ ಸ್ಮರಣೆಯಿಂದ ಬದುಕು ಸುಂದರ-ಕುದಿ ವಸಂತ ಶೆಟ್ಟಿ
Team Udayavani, Apr 2, 2017, 5:42 PM IST
ಹೆಬ್ರಿ : ಭಗವಂತನ ಸ್ಮರಣೆ ಹಾಗೂ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದರೊಂದಿಗೆ ಬದುಕು ಸುಂದರವಾಗುತ್ತದೆ. ಭಗವಂತನನ್ನು ಭಕ್ತಿಪೂರ್ವಕವಾಗಿ ಸ್ಮರಿಸಿದರೆ ನಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗುವುದರಲ್ಲಿ ಸಂದೇಹವಿಲ್ಲ ಎಂದು ಉಡುಪಿ ತುಳುವ ಚಾವಡಿ ಇದರ ಅಧ್ಯಕ್ಷ ಕುದಿ ವಸಂತ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಷ್ಟಬಂಧ ಸಹಿತ ಶ್ರೀ ದೇವರ ಪುನರ್ ಪ್ರತಿಷ್ಠೆ ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಮಹೋತ್ಸವದ ಅಂಗವಾಗಿ ಎ.1ರಂದು ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಆತ್ಮ ಪರಮಾತ್ಮನ ಗೇನೊಡು ಬದ್‌ಕ್ ಎಂಬ ವಿಷಯದ ಕುರಿತಾಗಿ ಪ್ರವಚನ ನೀಡಿದರು. ಜೀಣೋದ್ಧಾರ ಸಮಿತಿಯ ಉಪಾಧ್ಯಕ್ಷ ಎಚ್. ಸುಬ್ರಾಯ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಲ್ಲಿ ಕರಸೇವೆ ಮಾಡಿದ ನಾರಾಯಣ ಗುರು ಸಂಘ, ರಾಗಿಹಕ್ಲು ಮತ್ತು ಬಚ್ಚಪ್ಪು ವಾರ್ಡ್‌ನ ಸುಮಾರು 210 ಕರಸೇವಕರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್, ಆರ್ಥಿಕ ಸಮಿತಿಯ ಸಂಚಾಲಕ ಎಚ್. ಸತೀಶ್ ಪೈ, ಆಡಳಿತಾಧಿಕಾರಿ ಗಣೇಶ್ ಪಿ, ಕ್ಷೇತ್ರೇಶರ ತಾರನಾಥ ಬಲ್ಲಾಳ್,ಪ್ರಚಾರ ಹಾಗೂ ಸಂಪರ್ಕ ಸಮಿತಿಯ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ, ಸಮ್ಮಾನ ಸಮಿತಿಯ ಅಧ್ಯಕ್ಷ ಸುಧೀರ ನಾಯಕ್ ಮೊದಲಾದವರಿದ್ದರು. ಮುದ್ರಣ, ಬ್ಯಾನರ್ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ಸ್ವಾಗತಿಸಿ, ದಿವಾಕರ ಮರಕಾಲ ಕಾರ್ಯಕ್ರಮ ನಿರೂಪಿಸಿ, ಸುಬ್ರಹ್ಮಣ್ಯ ಓಕುಡ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.