ರಶ್ಯದಲ್ಲಿ ಉಗ್ರ ದಾಳಿ: ಅವಳಿ ಬಾಂಬ್ ಸ್ಫೋಟ,10 ಸಾವು,50 ಮಂದಿಗೆ ಗಾಯ
Team Udayavani, Apr 3, 2017, 7:05 PM IST
ಮಾಸ್ಕೋ : ರಶ್ಯದ ಸೈಂಟ್ ಪೀಟರ್ಬರ್ಗ್ ನಗರದ ಮೆಟ್ರೋದಲ್ಲಿ ಎರಡು ಪ್ರಬಲ ಸ್ಫೋಟಗಳು ಸಂಭವಿಸಿದ್ದು ಕನಿಷ್ಠ 10 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಎರಡು ಸ್ಫೋಟಗಳ ಪೈಕಿ ಶೆನಾಯಾ ಪ್ಲೊಶಾಡ್ ಸಬ್‌ವೇ ಮೆಟ್ರೋದಲ್ಲಿ ಕನಿಷ್ಠ ಒಂದು ಸ್ಫೋಟ ಸಂಭವಿಸಿರುವುದಾಗಿ ಸರಕಾರಿ ಸುದ್ದಿ ಸಂಸ್ಥೆ ತಾಸ್ ವರದಿ ಮಾಡಿದೆ.
ರಶ್ಯದ ಇನ್ನೊಂದು ಸುದ್ದಿ ಸಂಸ್ಥೆ ಆರ್‌ಐಎ ನವೋಸ್ತಿ ಮತ್ತು ಇತರ ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿರುವ ಪ್ರಕಾರ ಎರಡು ಮೆಟ್ರೋ ಸ್ಟೇಶನ್‌ಗಳಲ್ಲಿ ಅವಳಿ ಸ್ಫೋಟಗಳು ಸಂಭವಿಸಿವೆ.
ಈ ಸ್ಫೋಟಗಳಲ್ಲಿ ಹತ್ತು ಮಕ್ಕಳು ಸೇರಿದಂತೆ ಒಟ್ಟು 50 ಮಂದಿ ಗಾಯಗೊಂಡಿದ್ದಾರೆ.
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ನಗರದಲ್ಲಿ ಬೆಲಾರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಅವರೊಂದಿಗೆ ಸಭೆ ನಡೆಸುತ್ತಿದ್ದ ವೇಳೆಯೇ ಈ ಅವಳಿ ನ್ಪೋಟಗಳು ಸಂಭವಿಸಿವೆ. ಸ್ಫೋಟಗಳ ಬಗ್ಗೆ ಪುತಿನ್ ಅವರಿಗೆ ತಿಳಿಸಲಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ದಿಮಿತ್ರಿ ಪೆಸ್‌ಕೋವ್ ಅವರನ್ನು ಉಲ್ಲೇಖೀಸಿ ರಶ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 2.30ರ ವೇಳೆಗೆ ಭೂಗತ ಬ್ಲೂಲೈನ್ ಮೆಟ್ರೋದಲ್ಲಿ ಬೆನ್ನು ಬೆನ್ನಿಗೆ ಈ ಅವಳಿ ಸ್ಫೋಟಗಳು ಸಂಭವಿಸಿವೆ. ಸ್ಫೋಟಗಳನ್ನು ಅನುಸರಿಸಿ ಎಂಟು ಆ್ಯಂಬುಲೆನ್ಸ್‌ಗಳು ಸೆನಾಯಾ ಪ್ಲೋಶಾದ್ ಮೆಟ್ರೋ ಸ್ಟೇಶನ್ ಬಳಿ ಧಾವಿಸಿ ಬಂದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಅವಳಿ ಸ್ಫೋಟಗಳಿಗೆ ಕಾರಣವೇನೆಂದು ಇನ್ನೂ ಗೊತ್ತಾಗಿಲ್ಲ. ಸಬ್‌ವೇ ಆಡಳಿತೆಯು ಉತ್ತರ ರಶ್ಯ ನಗರದ ಹಲವಾರು ಸ್ಟೇಶನ್‌ಗಳನ್ನು ಮುಚ್ಚಲಾಗಿದ್ದು ಸ್ಥಳಾಂತರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ
Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್; ಮಹಿಳೆಯರು ಸೇರಿ ಹಲವರ ಸಾವು
Donald Trump ಸುರಕ್ಷಿತವಾಗಿಲ್ಲ: ರಷ್ಯಾ ಅಧ್ಯಕ್ಷ ಪುತಿನ್ ಆತಂಕ
Gold; ಜಗತ್ತಿನ ಅತಿದೊಡ್ಡ ಚಿನ್ನ ನಿಕ್ಷೇಪ ಚೀನದಲ್ಲಿ ಪತ್ತೆ!
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.