ಮಹಿಳೆಯರು ಹಸಿರೀಕರಣಕ್ಕೆ ಒತ್ತು ನೀಡಿ
Team Udayavani, Apr 4, 2017, 11:50 AM IST
ಹುಣಸೂರು: ತಾಲೂಕು ಕೆಂಚನಕೆರೆ ಹೊಸಕೋಟೆ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಮೈಸೂರು- ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು.
ತಾಲೂಕಿನ ಕೆಂಚನಕೆರೆ ಹೊಸಕೋಟೆ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಿಂದ ವಿವಿಧ ಯೋಜನೆ ಯಡಿ 10.50 ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿರುವ ಪಶುಆಹಾರ ಮತ್ತು ಹಾಲು ಶೇಖರಣ ಘಟಕ, ಸಭಾಂಗಣವನ್ನೊಳಗೊಂಡ ನೂತನ ಕಟ್ಟಡ ಉದ್ಘಾಟಿಸಿ, ನಂತರ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯರು ಕೃಷಿ ಚಟುವಟಿಕೆ ನಡೆಸುವ ಜೊತೆಗೆ, ಹಳ್ಳಿಗಳಲ್ಲಿ ಹಸಿರೀಕರಣಕ್ಕೆ ಒತ್ತು ನೀಡಿದಲ್ಲಿ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ ಎಂದರು.
ಮಹಿಳೆಯರು ಹೈನುಗಾರಿಕೆ ಮತ್ತು ಗುಡಿಗಾರಿಕೆಗಳನ್ನು ಅವಲಂಭಿಸಿಕೊಳ್ಳುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ-ಗತಿ ಬಲಪಡಿಸಿಕೊಳ್ಳಲು ಸಾಧ್ಯ. ಈ ಬಗ್ಗೆ ಚಿಂತಿಸುವಂತೆ ಸೂಚಿಸಿದ ಅವರು ರಾಜ್ಯದಲ್ಲಿ ಮಳೆ ಇಲ್ಲದೆ, ಮೇವಿನ ಕೊರತೆ ಕಾಡುತ್ತಿದೆ. ಸರ್ಕಾರ ಮೇವಿನ ಕೇಂದ್ರ ತೆರೆದಿದ್ದೇವೆ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ, ಬಿಳಿಕೆರೆ ಬಳಿ ನಾಮ್‌ಕೆವಾಸ್ತೆಗೆ ಮೇವಿನ ಕೇಂದ್ರ ಆರಂಭಿಸಿ, ಇದೀಗ ಮೇವು ಲಭ್ಯ ವಿಲ್ಲದೆ ಪರದಾಡುವಂತಾಗಿದೆ.
ತಾಲೂಕಿನ ಹನಗೋಡು, ಕಸಬಾ ಮತ್ತು ಗಾವಡಗಡರೆ ಹೋಬಳಿಗಳಲ್ಲಿ ಈವರೆ ಗೂ ಮೇವಿನ ಕೇಂದ್ರ ತೆರೆದಿಲ್ಲ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಮನಹರಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲಿದಿದ್ದಲ್ಲಿ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಸದಸ್ಯ ಎಂ.ಬಿ.ಸುರೇಂದ್ರ ಮಾತನಾಡಿ, ಮೈಮುಲ್ ವತಿಯಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 30 ಸರ್ಕಾರದಿಂದ 5 ರೂ ಸಹಾಯಧನ ನೀಡುತ್ತಿದೆ. ಅಲ್ಲದೆ ಹೈನೋದ್ಯಮಕ್ಕಾಗಿ ಹಲವಾರು ಯೋಜನೆಗಳಿವೆ, ಮಾಹಿತಿ ಪಡೆದು ಸೌಲಭ್ಯಗಳನ್ನು ಬಳಕೆ ಮಾಡಿ ಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದು ವಂತೆ ಮನವಿ ಮಾಡಿದರು.
ತಾಪಂ ಸದಸ್ಯರಾದ ಆರ್. ಪ್ರಭಾಕರ್, ಪ್ರೇಮೇಗೌಡ, ಉಪ ವ್ಯವಸ್ಥಾಪಕ ಸಣ್ಣತಮ್ಮೇ ಗೌಡ, ಮೇಲ್ವಿಚಾರಕರಾದ ಗೌತಮ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಗಂಗಮ್ಮ, ನಿರ್ದೇಶಕರಾದ ವೆಂಕಟ ಲಕ್ಷಮ್ಮ, ಗೌರಮ್ಮ, ರತ್ನಮ್ಮ, ಜಯಮ್ಮ, ನಾಗಮ್ಮ, ಮುಖಂಡರಾದ ಜಯಶಂಕರ್, ಮಹದೇವ್ ಶಿವಣ್ಣ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.