ಇತಿಹಾಸ ಸಂಶೋಧಿಸುವ ಮನೋಭಾವ ಬೆಳೆಯಲಿ
Team Udayavani, Apr 4, 2017, 12:18 PM IST
ಚನ್ನಗಿರಿ: ಸಾಮಾಜಿಕ ನೆಲೆಗಟ್ಟಿನ ಹಾದಿಯಲ್ಲಿ ಯುವ ಸಮೂಹ ಮುನ್ನಡೆಯಬೇಕು ಹಾಗೂ ಇತಿಹಾಸವನ್ನು ಸಂಶೋಧಿಸುವಂತಹ ಮನೋಭಾವವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆಕಾಲೇಜ್ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ರಂಗಸೌರಭ ನಾಟ್ಯ ಕಲಾ ಹವ್ಯಾಸಿ ಸಂಘ ಹಾಗೂ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಚನ್ನಗಿರಿಯ ವೀರ ದೋಂಡಿಯಾವಾಘ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಗಟ್ಟಿಯಾಗಿ ನೆಲೆಗೊಂಡಿರುವ ಭ್ರಷ್ಟಚಾರವನ್ನು ಕಿತ್ತೂಸೆಯಲು ಯುವಕರಿಂದ ಮಾತ್ರ ಸಾಧ್ಯ. ಅನ್ಯಾಯ- ಅನಾಚಾರ ಮುಳುಗಿರುವ ದೇಶದಲ್ಲಿ ಪ್ರಾಮಾಣಿಕತೆಯೆಂಬುದ ಮೂಲೆ ಗುಂಪಾಗಿದ್ದು, ನಿಟ್ಟಿನಲ್ಲಿ ಯುವಕರು ಸಮಾಜದ ಸೇವೆಗೆ ಸಿದ್ಧರಾಗಬೇಕು ಭ್ರಷ್ಟಾಚಾರವನ್ನು ನಿರ್ನಾಮ ಮಾಡಲು ಮುಂದಾಗಬೇಕು ಎಂದು ಕರೆನೀಡಿದರು.
ಸ್ವಾತಂತ್ರ ಪೂರ್ವದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದಂತಹ ಸಾಕಷ್ಟು ಮಹನೀಯರು ನಮ್ಮ ರಾಜ್ಯದಲ್ಲಿದ್ದಾರೆ. ಅವರ ಬಗ್ಗೆ ಹೆಚ್ಚು ಸಂಶೋಧನೆಯನ್ನು ಮಾಡುವ ಮೂಲಕ ಇಂದಿನ ಯುವಸಮೂಹಗಳಿಗೆ ಕೃತಿ ನಾಟಕಗಳ ಮೂಲಕ ನೀಡುವಂತಹ ಕೆಲಸವನ್ನು ಕೈಗೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ದೇಶಾಭಿಮಾನ ಮೂಡಿಸಬೇಕು.
ಆಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯ ಎಂದರು. ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ, ದೇಶಕ್ಕಾಗಿ ಹೋರಾಡಿದಂತಹ ಮಹನೀಯರನ್ನು ನೆನಪಿನಲ್ಲಿಡಲು ರಾಜ್ಯದ ಬಹತೇಕ ಜಿಲ್ಲೆ ತಾಲೂಕು ಕೇಂದ್ರಗಳಲ್ಲಿ ಮೂರ್ತಿ ನಿರ್ಮಾಣ ಮಾಡಬೇಕು.
ಪ್ರಮುಖವಾಗಿ ಇತಿಹಾಸದ ಪುಟ್ಟದಲ್ಲಿರುವ ದೋಂಡಿಯಾಘ ಮತ್ತು ಕಿತ್ತೂರು ರಾಣಿ ಚನ್ನಮ್ಮರ ಮೂರ್ತಿಯನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಪ್ರಾಂಶುಪಾಲ ಡಾ| ಬಿ.ವಿ ವೀರಪ್ಪ, ಡಾ| ಬಿ.ಸಿ. ದಾದಾಪೀರ್, ಸಾಹಿತಿ ಚಂದ್ರಶೇಖರ್ ತಾಳ್ಯ, ಹೊದಿಗೆರೆ ರಮೇಶ್, ಶಿವಮೊಗ್ಗದ ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಎಸ್. ಇಂದ್ರನಾಯ್ಕ,
ತುಮ್‌ಕೊಸ್ ಅಧ್ಯಕ್ಷ ಎಚ್. ಎಸ್. ಶಿವಕುಮಾರ್, ಬಸವ ಬಳಗದ ಅಧ್ಯಕ್ಷ ಎಸ್.ಕುಮಾರ್‌ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ವೈ.ಎಂ. ರಾಮಚಂದ್ರರಾವ್, ಓ.ಎಸ್. ನಾಗರಾಜ್, ಸಾಹಿತಿ. ಎಂ.ಪಿ. ಗುರು, ಕೃತಿ ಲೇಖಕ ಎಂ. ಅಣೋಜಿರಾವ್, ಎಂ.ಎಂ. ಮಂಜುನಾಥ್ ಜಾದವ್, ವಿ.ನಿರಂಜನ್ ಮೂರ್ತಿ, ಕೆ.ಎಸ್.ಬಸವರಾಜ್, ಕೆ.ಪಿ.ಎಂ. ಗಣೇಶ್‌ಯ್ಯ, ಬಿ. ಆನಂದ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.