ಪಾಲಿಕೆಯ ಘನತೆ-ಮಾನ-ಮರ್ಯಾದೆ ಮೂರಾಬಟ್ಟೆ..
Team Udayavani, Apr 4, 2017, 12:41 PM IST
ಹುಬ್ಬಳ್ಳಿ: ಮಹಾಪೌರ-ಆಯುಕ್ತರು ಪರಸ್ಪರ ಆರೋಪ- ಪ್ರತ್ಯಾರೋಪ, ಸವಾಲು, ಸಭಾತ್ಯಾಗ ನಂತರ ಆಡಳಿತ ಪಕ್ಷದ ಸದಸ್ಯರು ಮಹಾಪೌರ ಪೀಠದ ಹಿಂದೆ ಆಗಮಿಸಿ ಸಭೆ ಮುಂದೂಡುವಂತೆ ಒತ್ತಾಯ, ವಿಪಕ್ಷ ಸದಸ್ಯರೊಬ್ಬರಿಂದ ಬದ್ಮಾಶ್ಗಳು ಪದ ಬಳಕೆ, ವಿಪಕ್ಷ ನಾಯಕರಿಗೆ ಮಹಾಪೌರ ಸ್ಥಾನದಲ್ಲಿ ಕೂಡಲು ಆಹ್ವಾನ..
ಹೀಗೆ ಹಲವು ಅಧ್ವಾನಗಳೊಂದಿಗೆ ಪಾಲಿಕೆ ಘನತೆ, ಮಾನ-ಮಾರ್ಯದೆ ಮೂರಾಬಟ್ಟೆಗೆ ಸಾಮಾನ್ಯ ಸಭೆ ವೇದಿಕೆ-ಸಾಕ್ಷಿಯಾಯ್ತು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ-ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ವಿಪಕ್ಷಗಳ ಸಭಾತ್ಯಾಗ ಸಾಮಾನ್ಯ ಆದರೆ, ಆಡಳಿತ ನಿರ್ವಹಣೆ ಜವಾಬ್ದಾರಿಯ ಮಹಾಪೌರ-ಆಯುಕ್ತರು ಸದನದಲ್ಲಿ ಬಹಿರಂಗವಾಗಿ ಆರೋಪ-ಸವಾಲು ಹಾಕುವುದು,
ಆಡಳಿತ ಪಕ್ಷದ ಸದಸ್ಯರೇ ಸಭಾತ್ಯಾಗ ಮಾಡುವುದು, ಪಾಲಿಕೆ ಆದಾಯ ವಿಷಯಕ್ಕೆ ಆಡಳಿತ ಪಕ್ಷದವರ ಮೂಗು ಹಿಡಿಯಬೇಕಾದ ವಿಪಕ್ಷದ ಸದಸ್ಯರು ಅಧಿಕಾರಿಗಳ ವಕ್ತಾರರಂತೆ ಬೆಂಬಲಕ್ಕೆ ನಿಲ್ಲುವಂತಹ ಕೆಟ್ಟ ಸಂಪ್ರದಾಯ ಗೋಚರಿಸುವಂತಾಯಿತು. ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆದಾಯ ಕುರಿತಾಗಿ ನಡೆದ ಚರ್ಚೆ ಹಲವು ತಿರುವುಗಳೊಂದಿಗೆ ಅಸಮಾನ್ಯ ಸ್ಥಿತಿಯಲ್ಲಿ ಸಭೆ ಮುಕ್ತಾಯಗೊಂಡಿತು.
ಧಾರವಾಡದಲ್ಲಿನ ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಪೌರ-ಆಯುಕ್ತರು ಬಹಿರಂಗ ಆರೋಪ-ಪ್ರತ್ಯಾರೋಪಕ್ಕೆ ಮುಂದಾಗುವ ಲಕ ಸಭೆಯ ಘನತೆಗೆ ಕುಂದು ತರುವ ಕಾರ್ಯ ಮಾಡಿದರು. ಗೊಂದಲದ ವಾತಾವರಣ ಸೃಷ್ಟಿಸಿದರು.
ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳವರಿಗೆ 15 ದಿನ ಕಾಲಾವಕಾಶ ಮಹಾಪೌರರು ನೀಡಿದ್ದು, ನನಗೂ ಫೋನ್ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ ಎಂದುಆಯುಕ್ತರು ಹೇಳಿದ್ದು, ವಿವಾದದ ಬೆಂಕಿಗೆ ತುಪ್ಪ ಸುರಿದಂತಾಯಿತು. ಇದರಿಂದ ಕಾಂಗ್ರೆಸ್ ಸದಸ್ಯರು ಮಹಾಪೌರರ ಮೇಲೆ ಮುಗಿ ಬಿದ್ದು ನೀವೇ ಕಾಲಾವಕಾಶ ನೀಡುತ್ತೀರಿ ನಿಮ್ಮ ಪಕ್ಷದ ಸದಸ್ಯರು ಇದೇ ವಿಷಯವಾಗಿ ಸಭಾತ್ಯಾಗ ಮಾಡುತ್ತಾರೆ ಏನಿದರ್ಥ ಎಂದು ತರಾಟೆಗೆ ತೆಗೆದುಕೊಂಡರು.
ಇದರಿಂದ ಕೊಂಚ ಗಲಿವಿಲಿಗೊಂಡ ಮಹಾಪೌರರು ಆಕ್ರೋಶಭರಿತರಾಗಿ 15 ದಿನ ತಡೆಗೆ ಒತ್ತಡ ತಂದ ದಾಖಲೆ ತೋರಿಸಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದರು. ಕೆಲವೇ ನಿಮಿಷಗಳಲ್ಲಿ ತಮ್ಮ ಹೇಳಿಕೆ ಬದಲಾಯಿಸಿದ ಆಯುಕ್ತರು ಮಹಾಪೌರರು ನನಗೆ ನೇರವಾಗಿ ಹೇಳಿಲ್ಲ. ನಮ್ಮ ಅಧಿಕಾರಿಗೆ ಹೇಳಿದ್ದು ಅವರು ನನಗೆ ಹೇಳಿದ್ದಾರೆಂದು ಹೇಳಿ ಗೊಂದಲ ಸೃಷ್ಟಿಸಿದರು. ಪಾಲಿಕೆಯ ಜವಾಬ್ದಾರಿ ಸ್ಥಾನದ ಇಬ್ಬರು ತಾವೇ ಖುದ್ದಾಗಿ ಪಾಲಿಕೆ ಮಾನ- ಮರ್ಯಾದೆಯ ಮೂರಾಬಟ್ಟೆಗೆ ಮುಂದಾದರು.
ವಿಪಕ್ಷ ನಾಯಕರಿಗೆ ಆಹ್ವಾನ: ಬಿಜೆಪಿ ಸದಸ್ಯರು ಸಭಾತ್ಯಾಗದಿಂದ ಮಹಾಪೌರರು ಸಭೆ ಕೆಲಕಾಲ ಮುಂದೂಡಿದಾಗ, ಕಾಂಗ್ರೆಸ್ನ ಕೆಲ ಸದಸ್ಯರು ನಡೆದುಕೊಂಡ ರೀತಿ ಎಂಥವರಿಗೂ ನಾಚಿಕೆ ತರಿಸುವಂತಿತ್ತು. ಮಹಾಪೌರರು ಇಲ್ಲದಿದ್ದರೇನಂತೆ ನೀವು ಮಹಾಪೌರರ ಆಸನಕ್ಕೆ ಬನ್ನಿ ನಾವೇ ಸಭೆ ನಡೆಸೋಣ ಎಂದು ವಿಪಕ್ಷ ನಾಯಕ ಸುಭಾಸ ಶಿಂಧೆ ಅವರನ್ನು ಆಹ್ವಾನಿಸುವ ಮೂಲಕ ಎಲ್ ಕೆಜಿ, ಯುಕೆಜಿ ಮಕ್ಕಳಿಗಿಂತಲೂ ಕಡೆ ರೀತಿಯಲ್ಲಿ ವರ್ತಿಸಿದರು.
ಮಾತಿನ ಭರಾಟೆಯಲ್ಲಿ ಕಾಂಗ್ರೆಸ್ ಸದಸ್ಯರೊಬ್ಬರು ಆಡಳಿತ ನಡೆಸಲು ಬರುವುದಿಲ್ಲ ಬದ್ಮಾಶ್ ಗಳು ಸಭಾತ್ಯಾಗ ಮಾಡುತ್ತಾರೆ ಎಂದು ಹೇಳಿದ್ದು, ಮಹಾನಗರ ಪಾಲಿಕೆ ಸಭೆ ಎತ್ತಸಾಗುತ್ತಿದೆ ಎಂಬ ಪ್ರಶ್ನೆ ಹುಟ್ಟು ಹಾಕುವಂತೆ ಮಾಡಿತು.
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ
Fire Temple: ಅಜರ್ಬೈಜಾನ್ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು
Udupi: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಹಗುರವಾಗಿ ಪರಿಗಣಿಸಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಪತ್ನಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ!
Varanasi: ರೈಲು ನಿಲ್ದಾಣದ ಬಳಿ ಭಾರಿ ಅಗ್ನಿ ಅವಘಡ: 200ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.