ಯೋಗಿಯ ಕೈಯಲ್ಲಿದೆ ಉತ್ತರದ ಭವಿಷ್ಯ


Team Udayavani, Apr 4, 2017, 9:59 AM IST

04-ANKANA-2.jpg

“ಮೋದಿಯ ಎರಕ’ಕ್ಕೆ ಸರಿಹೊಂದುವ ಪ್ರಬಲ ನಾಯಕ ಎನ್ನುವ ಭಾವನೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರಂಭದಲ್ಲೇ ಮೂಡಿಸಿದ್ದಾರೆ. ಅರಾಜಕತೆಯೇ ತಾಂಡವವಾಡುತ್ತಿದ್ದ ಆ ರಾಜ್ಯಕ್ಕೆ ಪ್ರಬಲ, ತೀಕ್ಷ್ಣ ಕತೃìತ್ವ ಶಕ್ತಿಯುಳ್ಳ, ಪ್ರಾಮಾಣಿಕ ಮುಖ್ಯಮಂತ್ರಿಯ ಅಗತ್ಯವಿತ್ತು. ಅದೀಗ ಯೋಗಿ ಆದಿತ್ಯನಾಥ್‌ ಮುಖಾಂತರ ಈಡೇರಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಅಂತರ ಮಾತ್ರವಲ್ಲದೆ ಆನಂತರ ನಡೆದ ಬೆಳವಣಿಗೆಗಳು ಮಾಧ್ಯಮ ಹಾಗೂ ಇತರ ರಾಜಕೀಯ ಪಕ್ಷಗಳಿಗೆ ಚೇತರಿಸಿಕೊಳ್ಳಲಾಗದಷ್ಟು ಆಘಾತವಿಕ್ಕಿವೆ. 300 ಪ್ಲಸ್‌ ಸ್ಥಾನಗಳನ್ನು ಗೆದ್ದ ಪಕ್ಷ ಪ್ರಖರ ಹಿಂದುತ್ವವಾದಿಯಾಗಿರುವ ಯೋಗಿ ಆದಿತ್ಯನಾಥ್‌ ಅವರನ್ನು ಮುಖ್ಯಮಂತ್ರಿ ಮಾಡಿರುವುದನ್ನು ಅನೇಕ ಮಂದಿ “ಸರ್ಜಿಕಲ್‌ ಸ್ಟ್ರೈಕ್‌’ ಎಂದೇ ಬಣ್ಣಿಸುತ್ತಿದ್ದಾರೆ. ಎಡಪಂಥೀಯರಿಗಂತೂ ಇನ್ನೂ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿರುವುದನ್ನು ಜೀರ್ಣಿಸಿಧಿಕೊಳ್ಳಲು ಆಗಿಲ್ಲ. ಅವರು ಇದನ್ನು “ಪೈಶಾಚಿಕ  ನಡೆ’ ಎಂದು ಟೀಕಿಸಿ ತಮ್ಮ ಹೊಟ್ಟೆಯುರಿಯನ್ನು ತಣಿಸಿಕೊಳ್ಳುತ್ತಿದ್ದಾರೆ. ಅನೇಕ ಮಂದಿ ಯೋಗಿ ಆದಿತ್ಯನಾಥ್‌ ಅವರಿಗೆ ತನ್ನ ನಿಲುವು ಮತ್ತು ಕಾರ್ಯಸೂಚಿಗಳನ್ನು ತಿಳಿಸಲು ಒಂದು ಅವಕಾಶವನ್ನೂ ಕೊಡದೆ ಕೋಮುವಾದಿ, ಮತಾಂಧ, ಹಿಂದು ಮೂಲಭೂತವಾದಿ ಇತ್ಯಾದಿ ಬಿರುದು ಬಾವಲಿಗಳನ್ನು ದಯಪಾಲಿಸಿದ್ದಾರೆ. 

ಈ ವಿಚಾರದಲ್ಲಿ ಮಾಧ್ಯಮಗಳೂ ಹಿಂದೆ ಬಿದ್ದಿಲ್ಲ. ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರವನ್ನು ತಮಗೆ ತಾವೇ ಕೊಟ್ಟುಕೊಂಡಿರುವ ಮಾಧ್ಯಮಗಳು ಪ್ರತಿಪಕ್ಷಗಳ ಕೆಲಸವನ್ನು ಕೂಡ ತಾವೇ ನಿಭಾಯಿಸುತ್ತಿವೆ. ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿರುವುದರಿಂದ ಒಂದು ನಿರ್ದಿಷ್ಟ ಸಮುದಾಯದಲ್ಲಿ ಭಯಭೀತಿ ಉಂಟಾಗಿದೆ ಎಂದು ನಂಬಿಸಲು ಮಾಧ್ಯಮಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. 

ಯೋಗಿ ಆದಿತ್ಯನಾಥ್‌ ಅವರನ್ನು ಮುಖ್ಯಮಂತ್ರಿ ಮಾಡಿಧಿರುವುದು ಬಿಜೆಪಿಯ ಅತ್ಯಂತ ಚಾಣಾಕ್ಷ ನಡೆ ಎನ್ನುವುದರಲ್ಲಿ ಅನುಮಾನವಿಲ್ಲ. ಐದು ಸಲ ಸಂಸದರಾಗಿ ಸೇವೆ ಸಲ್ಲಿಸಿದ ಅನುಭವವಿರುವ, ಪ್ರಖರ  ವಾಗ್ಮಿಯಾಗಿರುವ ಯೋಗಿ ಆದಿತ್ಯಧಿನಾಥ್‌ಗೆ ಮುಖ್ಯಮಂತ್ರಿಯಾಗುವ ಎಲ್ಲ ಯೋಗ್ಯತೆಯಿದೆ. ಅಸಾಧಿಧಾರಣ ಚೈತನ್ಯದ ಯುವಕರಾಗಿರುವ, ಮತದಾರರ ಬೇಕುಬೇಡಗಳಿಗೆ ಸ್ಪಂದಿಸುವ ತಳಮಟ್ಟದ ಕಾರ್ಯಕರ್ತರೂ ಆಗಿರುವ ಯೋಗಿ ಆದಿತ್ಯನಾಥ್‌ ಪಕ್ಷಕ್ಕೆ ಮತಗಳನ್ನು ತಂದುಧಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೂ ಮಿಗಿಲಾಗಿ ಉತ್ತರ ಪ್ರದೇಶದ ಮಹತ್ವಾಕಾಂಕ್ಷಿ ಯುವ ಮತದಾರರನ್ನು ಅವರು ಪ್ರತಿನಿಧಿಸುತ್ತಾರೆ. ಸ್ವಕ್ಷೇತ್ರವಾದ ಗೋರಖಪುರದಲ್ಲಿ ಅವರು ಎಲ್ಲ ಸಮುದಾಯಗಳ ಬೆಂಬಲ ಹೊಂದಿದ್ದಾರೆ. ಅಲ್ಲಿ ಅವರು ಸೋಲಿಲ್ಲದ ಸರದಾರ. ಅವರ ಬದ್ಧತೆ ಮತ್ತು ಜನಸೇವೆಯ ಕಾಳಜಿ ಪ್ರಶ್ನಾತೀತವಾಗಿದೆ. ಗೋರಖಪುರದಲ್ಲಿ ಮುಸ್ಲಿಮರಿಗೂ ಅವರು ಮೆಚ್ಚಿನ ನಾಯಕ. ದೇಶದ ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಹಳ್ಳಿಗಳೇ ಅಧಿಕವಿರುವ ಈ ರಾಜ್ಯ ಇಷ್ಟರ ತನಕ ನೋಡಿದ್ದು ದುರಾಡಳಿತವನ್ನು ಮಾತ್ರ. ಕಳೆದ ಹತ್ತು ವರ್ಷದಲ್ಲಿ ಅಭಿವೃದ್ಧಿ ಮತ್ತು ಸಮೃದ್ಧಿ ಹಿನ್ನೆಲೆಗೆ ಸರಿದು ಜಾತಿ ಆಧಾರಿತ ಗುಂಪುಗಳ ಕಾರುಬಾರು ಮಾತ್ರ ವಿಜೃಂಭಿಸುತ್ತಿತ್ತು. 

ಸ್ಪಷ್ಟ ನಿಲುವಿನ ಮುಖ್ಯಮಂತ್ರಿ
ಹೊಸ ಮುಖ್ಯಮಂತ್ರಿ ಅತ್ಯಂತ ಸ್ಪಷ್ಟ ನಿಲುವುಗಳುಳ್ಳ ವ್ಯಕ್ತಿ. ತನಗನ್ನಿಸಿದ್ದನ್ನು ಹೇಳಲು ಹಿಂಜರಿಯುವುದಿಲ್ಲ ಮತ್ತು  ಅದರಿಂದ ವಿವಾದ ಸೃಷ್ಟಿಯಾದರೂ ಎದೆಗುಂದುವುದಿಲ್ಲ. ನಡೆನುಡಿಯಲ್ಲಿ ತಾನು ಹಿಂದು ಎಂದು ನಿರ್ಭಯವಾಗಿ, ಹೆಮ್ಮೆಯಿಂದ ತೋರಿಸಿಕೊಳ್ಳುತ್ತಾರೆ. ಯೋಗಿ ಆದಿತ್ಯನಾಥ ಅವರು ಅಖಂಡ ಬ್ರಹ್ಮಚರ್ಯವನ್ನು ಪಾಲಿಸುವ ಸನ್ಯಾಸಿ ಮತ್ತು ಪುರಾತನ ಮಠವೊಂದರ ಪೀಠಾಧಿಪತಿಯಾಗಿದ್ದಾರೆ. ಹಿಂದೆ ನಿರ್ದಿಷ್ಟ ಅಲ್ಪಸಂಖ್ಯಾತ‌ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪ ಅವರ ಮೇಲಿರುವುದು ನಿಜ. ಗಲಭೆೆ, ದೊಂಬಿ, ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಹಲವು ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿರುವುದೂ ಸುಳ್ಳಲ್ಲ. ರಾಜಕೀಯವಾಗಿ ಅವರನ್ನು  ಮುಗಿಸಲು ಹಿಂದೆ ಉತ್ತರಪ್ರದೇಶದಲ್ಲಿದ್ದ ಅಖೀಲೇಶ್‌ ನೇತೃತ್ವದ ಸಮಾಜವಾದಿ ಪಕ್ಷದ ಸರಕಾರ ಬಹಳ ಪ್ರಯತ್ನ ಮಾಡಿತ್ತು. ಆದರೆ ಇವೆಲ್ಲ ವಿರೋಧಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ಹೋರಾಡಿದ ಯೋಗಿ ಆದಿತ್ಯನಾಥ್‌ ಜಾತೀಯ ನೆಲೆಯಲ್ಲಿ ವಿಭಜನೆಯಾಗಿದ್ದ ಉತ್ತರಪ್ರದೇಶ ರಾಜ್ಯದ ಸಮಾಜವನ್ನು ಹಿಂದುತ್ವದ ನೆಲೆಯಲ್ಲಿ ಒಗ್ಗೂಡಿಸಿದ್ದಾರೆ; ಜಾತಿ, ಮತ, ಧರ್ಮ ಬೇಧ ಪ್ರಾಂತ್ಯಗಳ ಬೇಧವಿಲ್ಲದೆ ಎಲ್ಲ ಮತದಾರರ ಬೆಂಬಲವನ್ನು ಒಗ್ಗೂಡಿಸಿ ವಿಜಯಪತಾಕೆ ಹಾರಿಸಿದ್ದಾರೆ. “ಮೋದಿಯ ಎರಕ’ಕ್ಕೆ ಸರಿಹೊಂದುವ ಪ್ರಬಲ ನಾಯಕ ಎನ್ನುವ ಭಾವನೆಯನ್ನು ಯೋಗಿ ಆರಂಭದಲ್ಲೇ ಮೂಡಿಸಿದ್ದಾರೆ. ಅರಾಜಕತೆಯೇ ತಾಂಡವವಾಡುತ್ತಿದ್ದ ಉತ್ತರಪ್ರದೇಶ ರಾಜ್ಯಕ್ಕೆ ಪ್ರಬಲ, ತೀಕ್ಷ್ಣ ಕತೃìತ್ವ ಶಕ್ತಿಯುಳ್ಳ, ಪ್ರಾಮಾಣಿಕ ಮುಖ್ಯಮಂತ್ರಿಯ ಅಗತ್ಯವಿತ್ತು. ಅದೀಗ ಯೋಗಿ ಆದಿತ್ಯನಾಥ್‌ ಮುಖಾಂತರ ಈಡೇರಿದೆ. ಮುಖ್ಯಮಂತ್ರಿಯಾದ ಬಳಿಕ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಅವರು ತನ್ನ ಆಡಳಿತ ಕಠಿಣವಾಗಿರುತ್ತದೆ ಎಂಬ ಸುಳಿವು ನೀಡಿದ್ದಾರೆ. ರಾಜ್ಯವನ್ನು ಅಭಿವೃದ್ಧಿಗೊಳಿಸುತ್ತೇನೆ ಮತ್ತು ಯಾವುದೇ ತಾರತಮ್ಯ ಮಾಡದೆ ಎಲ್ಲ ಪ್ರಜೆಗಳನ್ನು ರಕ್ಷಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ. 

ಚುನಾವಣೆಯ ತಯಾರಿ
ಚುನಾವಣೆಯ ದೃಷ್ಟಿಯಿಂದ ನೋಡುವುದಾದರೆ, ದೇಶದ ರಾಜ್ಯಗಳಲ್ಲೇ ಅತಿ ಹೆಚ್ಚು ಮತದಾರರಿರುವಂತಹ, ಫ‌ಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರುವಂತಹ ರಾಜ್ಯ ಉತ್ತರಧಿಪ್ರದೇಶ. ಇಂತಹ ರಾಜ್ಯದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಅವರ ಆಯ್ಕೆಯು ಬಿಜೆಪಿಯು ಮುಂಬರುವ 2019ರ ಸಾರ್ವತ್ರಿಕ ಚುನಾವಣೆಗೆ ಈಗಲೇ ದೊಡ್ಡ ಮಟ್ಟದಲ್ಲಿ ಅತ್ಯಂತ ಯೋಜಿತವಾದ ವ್ಯೂಹಾತ್ಮಕ ತಯಾರಿ ಪ್ರಾರಂಭಿಸಿರುವುದನ್ನು ಸೂಚಿಸುತ್ತದೆ. ದಿಲ್ಲಿಯ ಗದ್ದುಗೆಯನ್ನು ಗೆಲ್ಲಬೇಕಾದರೆ ಉತ್ತರಪ್ರದೇಶವನ್ನು ಗೆಲ್ಲಲೇಬೇಕು ಎನ್ನುವುದು ಎಲ್ಲ ರಾಜಕೀಯ ಪಕ್ಷಗಳಂತೆ ಬಿಜೆಪಿಗೂ ಚೆನ್ನಾಗಿ ಗೊತ್ತಿದೆ. ಅತ್ಯಧಿಕ ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶವನ್ನು ಬಿಜೆಪಿ ಸಹಿತ ಯಾವುದೇ ರಾಜಕೀಯ ಪಕ್ಷಗಳು ಯಾವ ಕಾರಣಕ್ಕೂ ಕಡೆಗಣಿಸುವಂತಿಲ್ಲ. 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭಾ ಚುನಾವಣೆಗಳ ಫ‌ಲಿತಾಂಶ ಪುನರಾವರ್ತಿಸಬೇಕಾದರೆ ಜಾತಿಗಳನ್ನು ಮೀರಿ ನಿಂತು ಹಿಂದು ಮತಗಳನ್ನು ಒಗ್ಗೂಡಿಸುವುದು ಅಗತ್ಯ. ಹಿಂದಿನ ಚುನಾವಣೆಗಳಲ್ಲಿ ಉಳಿದೆಲ್ಲ ಪಕ್ಷಗಳು ಅಲ್ಪಸಂಖ್ಯಾತ‌ರ ಓಲೈಕೆಯ ಮಾದರಿಯನ್ನು ಮುಂದಿಟ್ಟುಕೊಂಡು ಉಳಿದ ಜಾತಿ ಮತಗಳ ಬೆಂಬಲದಿಂದ ಅಧಿಕಾರ ಗಳಿಸುವ ಪ್ರಯತ್ನ ಮಾಡಿದರೆ ಬಿಜೆಪಿ ಮಾತ್ರ ಸಮಸ್ತ ಹಿಂದು ಮತಗಳ ಮೇಲೆ ಕಣ್ಣಿಟ್ಟಿತ್ತು. ಈ ರಣತಂತ್ರದಿಂದಾಗಿ ಅಲ್ಪಧಿಸಂಖ್ಯಾತ ಮತಗಳು ಗಮನಾರ್ಹವಾಗಿ ಸಿಗದಿದ್ದರೂ ಬಿಜೆಪಿ ಗೆದ್ದಿದೆ. ಇದೇ ಹಿನ್ನೆಲೆಯಲ್ಲಿ 2019ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಉಳಿದೆಲ್ಲ ಪಕ್ಷಗಳು ಒಂದಾಗಿ ಮಹಾಮೈತ್ರಿಕೂಟ ರಚಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. 

ಹೀಗಾಗಿ ಹಿಂದು ಮತಗಳನ್ನು ಒಗ್ಗೂಡಿಸುವುದು ಬಿಜೆಪಿಗೆ ಅನಿವಾರ್ಯವೂ ಹೌದು. ಹಾಗೆಂದು ಹಿಂದು ಮತಗಳನ್ನು ಒಗ್ಗೂಡಿಸಿದ ಮಾತ್ರಕ್ಕೆ 2019ರ ಮಹಾಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುವಂತಿಲ್ಲ. 2019ರ ಜಯದ ಗುರಿ ಈಡೇರಬೇಕಾದರೆ ಯೋಗಿ ಆದಿತ್ಯನಾಥ್‌ ಉತ್ತಮವಾದ ಆಡಳಿತವನ್ನು ನೀಡಬೇಕು. ಅಭಿವೃದ್ಧಿ, ಆರ್ಥಿಕ ಚೇತರಿಕೆ, ಉದ್ಯೋಗ ಈ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು. ಮುಖ್ಯವಾಗಿ ಹದಗೆಟ್ಟಿರುವ ಕಾನೂನು ಮತ್ತು ವ್ಯವಸ್ಥೆ ಪಾಲನೆಯನ್ನು ನಿಯಂತ್ರಿಸಬೇಕು. ಜನರಲ್ಲಿ ಸುರಕ್ಷೆಯ ಭಾವ ಮೂಡಿಸಬೇಕು. ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು. ಮಹಿಳೆಯರೂ ಸೇರಿದಂತೆ ಎಲ್ಲರ ಸುರಕ್ಷೆ ಮತ್ತು ಸಮೃದ್ಧಿಯೇ ಸರಕಾರದ ಮಂತ್ರವಾಗಬೇಕು. ಅಲ್ಪಸಂಖ್ಯಾತ‌ರೂ ಸೇರಿದಂತೆ ಎಲ್ಲ ಬಡವರ ಮತ್ತು ದಮನಿತರ ಬದುಕು ಹಸನಾಗಬೇಕು. ರಸ್ತೆ, ವಿದ್ಯುತ್‌, ನೀರು ಕೃಷಿ, ಆರೋಗ್ಯ ಶಿಕ್ಷಣ ಸಹಿತ ಎಲ್ಲ ಮೂಲಸೌಕರ್ಯಗಳನ್ನು ಸುಧಾರಿಸುವ ದೊಡ್ಡ ಹೊಣೆಗಾರಿಕೆ ಯೋಗಿ ಆದಿತ್ಯನಾಥ್‌ ಅವರ ಮೇಲಿದೆ. ಆ ಮೂಲಕ ರಾಜ್ಯದ ಎಲ್ಲ ಮತದಾರರ ವಿಶ್ವಾಸ 2019ರವರೆಗೆ ಮತ್ತು ಆ ಮುಂದಕ್ಕೂ ತನ್ನ ಮೇಲೆ ಉಳಿಯುವುದನ್ನು ಅವರು ಖಾತರಿಪಡಿಸಿಕೊಳ್ಳಬೇಕಾಗಿದೆ. ಉತ್ತರಪ್ರದೇಶಕ್ಕೆ ಅಂಟಿಧಿಕೊಂಡಿರುವ ಗೂಂಡಾರಾಜ್‌ ಎಂಬ ಕಳಂಕವನ್ನು ತೊಡೆದು ಹಾಕುಧಿವುದು ನೂತನ ಮುಖ್ಯಮಂತ್ರಿಯ ಎದುರು ಇರುವ ದೊಡ್ಡ ಸವಾಲು. ಎಲ್ಲ ವರ್ಗದವರಿಗೂ ಸಮಾನ ಆರ್ಥಿಕ ಅಭಿವೃದ್ಧಿಯ ಅವಕಾಶಗಳನ್ನು ಸೃಷ್ಟಿಸಿ ಜೀವನ ಮಟ್ಟವನ್ನು ಸುಧಾರಿಸುವುದು ಯೋಗಿ ನೇತೃತ್ವದ ಬಿಜೆಪಿ ಸರಕಾರದ ಆದ್ಯತೆಯ ಕಾರ್ಯಕ್ರಮವಾಗಬೇಕು. 

ಏಕೆ ಸಾಧ್ಯವಿಲ್ಲ?!
ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ 10 ವರ್ಷಗಳಲ್ಲಿ ಇಡೀ ಗುಜರಾತ್‌ ರಾಜ್ಯದ ಚಹರೆಯನ್ನೇ ಬದಲಾಧಿಯಿಸಿರುವಾಗ ಇದೇ ಕೆಲಸವನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಮಾಡಲು ಏಕೆ ಸಾಧ್ಯವಿಲ್ಲ? ಅಧಿಕಾರದ ಜತೆಗೆ ಜವಾಬ್ದಾರಿಯೂ ಹಿಂಬಾಲಿಸಿ ಬಂದೇ ಬರುತ್ತದೆ. ಅಪ್ಪಟ ದೇಶಭಕ್ತ, ದೇಶವನ್ನು ಅಪಾರವಾಗಿ ಪ್ರೀತಿಸುವ ಕಡು 
ರಾಷ್ಟ್ರೀಧಿಯವಾದಿಯಾಗಿರುವ ಯೋಗಿಗೆ ಒಂದು ಬೃಹತ್‌ ರಾಜ್ಯವನ್ನು ಹೇಗೆ ಆಳಬಹುದು ಎಂದು ಸಮರ್ಥವಾಗಿ ತೋರಿಸಿಕೊಡಲು ಒದಗಿರುವ ಸದವಕಾಶವಿದು. ಯೋಗಿ ಆದಿತ್ಯನಾಥ್‌ ಆಳ್ವಿಕೆ ಇಡೀ ದೇಶಕ್ಕೆ ಭವಿಷ್ಯದ ರಾಜಕೀಯ ದಿಕ್ಸೂಚಿಯಾಗುವ ಸಾಧ್ಯತೆಯಿದೆ. ಸನ್ಯಾಸಿಯನ್ನು ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡುವ ಮೂಲಕ ಬಿಜೆಪಿ ಅತಿ ದೊಡ್ಡ ಜೂಜಾಟದಲ್ಲಿ ಮಹತ್ವದ ದಾಳ ಉರುಳಿಸಿದೆ ಎಂದರೆ ತಪ್ಪಲ್ಲ. ಈ ಜೂಜಿನಲ್ಲಿ ಪಕ್ಷವನ್ನು ಗೆಲ್ಲಿಸುವ ಹಾಗೂ ಇದೇ ವೇಳೆ ರಾಜಕೀಯಕ್ಕೊಂದು ಹೊಸ ವ್ಯಾಖ್ಯಾನ ಬರೆಯುವ ಹೊಣೆ ಯೋಗಿ ಆದಿತ್ಯನಾಥ್‌ ಅವರಿಗಿದೆ. ಇದರಲ್ಲಿ ಅವರು ಸಫ‌ಲರಾದರೆ ಅವರಿಗೆ, ಬಿಜೆಪಿಗೆ ಮಾತ್ರವಲ್ಲ; ದೇಶಕ್ಕೂ ಒಳಿತಾಗಲಿದೆ.

ಟಿ. ವಿ. ಮೋಹನದಾಸ್‌ ಪೈ ಚಿಂತಕ, ಆಡಳಿತ ತಜ್ಞ 

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.