ಗಂಭೀರತೆ ಅರಿವಾಗಿದೆ; ಯೋಜನೆ ರೂಪಿಸುತ್ತೇವೆ: ಜಿಲ್ಲಾಧಿಕಾರಿ
Team Udayavani, Apr 4, 2017, 3:53 PM IST
ಉಡುಪಿ: ಅಕ್ರಮ ಮರಳುಗಾರಿಕೆ ಗಂಭೀರತೆ ಅರಿವಾಗಿದೆ. ಘಟನೆಗೆ ಹೆದರಿ ಕುಳಿತುಕೊಳ್ಳುವುದಿಲ್ಲ. ಅಕ್ರಮಗಳ ವಿರುದ್ಧ ಮತ್ತಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾನ್ಯ ಪ್ರಕರಣದಂತೆ ಅನಿರೀಕ್ಷಿತ ಭೇಟಿ ಮಾಡಲು ಕಂಡೂರು, ಹಳ್ನಾಡು ಭಾಗಕ್ಕೆ ತೆರಳಿದ್ದೆವು. ಅಲ್ಲಿ ನಡೆದ ಒಟ್ಟು ಘಟನೆಗಳಿಂದ ನಾವು ವಿಚಲಿತರಾಗಿಲ್ಲ. ಮುಂದೆ ಟಾಸ್ಕ್ಧಿಫೋರ್ಸ್ ತಂಡ ಅಕ್ರಮ ಮರಳುಗಾರಿಕೆ ಸ್ಥಳ ಗುರುತಿಸಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವ ಯೋಜನೆ ರೂಪಿಸಲಿದೆ. ಪ್ರತಿಯೊಂದು ಇಲಾಖೆಯವರನ್ನು ಸೇರಿಸಿಕೊಂಡು ಗ್ರಾಮಮಟ್ಟದಿಂದಲೇ ಟಾಸ್ಕ್ಫೋರ್ಸ್ ಕಾರ್ಯನಿರ್ವಹಿಸುವಂತೆ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.
ಪರಿಶೀಲನೆಗೆ ತೆರಳುವಾಗ ಹೇಳಬೇಕೆಂದಿಲ್ಲ: ಎಡಿಜಿಪಿ
ರಾಜ್ಯದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಮೋಹನ್ ಮಾತನಾಡಿ, ಜಿಲ್ಲಾಧಿಕಾರಿ ಪರಿಶೀಲನೆಗೆ ತೆರಳುವಾಗ ಪೊಲೀಸರಿಗೆ ತಿಳಿಸಬೇಕು ಎಂದೇನಿಲ್ಲ. ಟಾಸ್ಕ್ಧಿಫೋರ್ಸ್ನ ಮುಖ್ಯಸ್ಥರು ಅವರೇ ಆಗಿರುವುದರಿಂದ ಯಾವುದೇ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರರಾಗಿರುತ್ತಾರೆ. ಜಿಲ್ಲಾಧಿಕಾರಿ ಅವರೊಂದಿಗೆ ಅಲ್ಲಿನ ಜನರು ವರ್ತಿಸಿದ ರೀತಿ ಸರಿಯಲ್ಲ. ಪ್ರಕರಣದಲ್ಲಿ ಯಾವುದೇ ಪ್ರಭಾವಕ್ಕೆ ಮಣಿಯದೆ ಆರೋಪಿಗಳ ಬಂಧನಕ್ಕೆ ಸೂಚಿಸಲಾಗಿದೆ. ತನಿಖೆ ಮುಂದುವರಿಯುತ್ತದೆ ಎಂದರು.
ಆರೋಪಿಗಳ ಬಂಧನ: ಎಸ್ಪಿ
ಜಿಲ್ಲಾಧಿಕಾರಿ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿದೆ. ತನಿಖೆ ತೀವ್ರಗೊಳಿಸಲಾಗಿದೆ. ಟಾಸ್ಕ್ಫೋರ್ಸ್ ಮೂಲಕ ಪರಿಣಾಮಕಾರಿ ಕ್ರಮಕ್ಕೆ ಚರ್ಚೆ ನಡೆಸಲಾಗುವುದು ಎಂದು ಎಸ್ಪಿ ಕೆ.ಟಿ. ಬಾಲಕೃಷ್ಣ ತಿಳಿಸಿದರು.
ಹೆಚ್ಚುವರಿ ಎಸ್ಪಿ ಎನ್. ವಿಷ್ಣುವರ್ಧನ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.