ಕಾಪಿ ಚಿರಾಯು: ಕಾಪಿ ಆಗದ ಭಾರತ ಮ್ಯಾಪು
Team Udayavani, Apr 4, 2017, 5:53 PM IST
ನಾನಾಗ 10ನೇ ತರಗತಿಯಲ್ಲಿ ಓದುತ್ತಿದ್ದೆ. ನನಗೆ ಪರೀಕ್ಷೆ ಅಂದ್ರೆ ಸ್ವಲ್ಪಾನೂ ಭಯ ಇದ್ದಿರಲಿಲ್ಲ. ಅಂದು ಸಮಾಜಶಾಸ್ತ್ರ ಎಕ್ಸಾಮು. ಸಮಾಜಶಾಸ್ತ್ರದಲ್ಲಿ ಭಾರತದ ನಕ್ಷೆ ಗುರುತಿಸುವುದು ಸರ್ವೇಸಾಮಾನ್ಯವಾದ ಪ್ರಶ್ನೆ. ನನಗೆ ನಕ್ಷೆ ಗುರುತಿಸುವುದೆಂದರೆ ಯುದ್ಧ ಆಡಿದ ಹಾಗೆ. ನನ್ನ ಪಕ್ಕದಲ್ಲಿ ಸ್ನೇಹಿತ ಪ್ರಸಾದ ಕುಳಿತಿದ್ದ. ಅವನು ಬಹಳ ತರಲೆ, ತುಂಟತನ ಮಾಡುವ ಹುಡುಗ. ಅವನು ನಕ್ಷೆ ಬರೆಯಲು ಸುಲಭವಾಗಲಿ ಎಂದು ನೋಟ್‌ಬುಕ್ ಮೇಲೆ ಇರುವ ರಟ್ ಅನ್ನು ನಕ್ಷೆ ಆಕಾರದಲ್ಲಿ ಕತ್ತರಿಸಿ ಕಾಪಿ ಮಾಡಲು
ತಗೊಂಡು ಬಂದು ಬೆಂಚಿನ ಕೆಳಗೆ ಇಟ್ಟಿದ್ದ.
ಪರೀಕ್ಷೆ ಶುರುವಾಯಿತು. ಸ್ವಲ್ಪ ಸಮಯ ಕಳೆಯಿತು, ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಇನ್ನೇನು ನಕ್ಷೆ ರಚಿಸಲು ಪ್ರಯತ್ನಿಸುತ್ತಿದ್ದೆ. ಆಗ ಅವನು ಅದನ್ನು ನೋಡಿ ತಾನು ಮುಚ್ಚಿಟ್ಟಿದ್ದ ನಕ್ಷೆಯನ್ನು ನನಗೆ ಕೊಡಲು ಬಂದ. ನಾನು ಅದನ್ನು ತೆಗೆದುಕೊಳ್ಳದೆ “ಬೇಡ, ನಾನು ಹಾಗೆಯೇ ರಚಿಸುತ್ತೇನೆ’ ಎಂದೆ. ಅದಕ್ಕೆ ಅವನು “ಅಲ್ಲಾ, ಈಗ ಸಮಯವಿಲ್ಲ. ಪರೀಕ್ಷೆ ಮುಗಿಯಲು ಕೆಲವೇ ನಿಮಿಷಗಳಿವೆ
ಪರ್ವಾಗಿಲ್ಲ, ತಗೋ’ ಎಂದ. ಅದಕ್ಕೆ ನಾನು “ಇಲ್ಲ, ಕಾಪಿ ಮಾಡಿ ನಾನು ಮಾರ್ಕ್ಸ್ ಪಡೆಯುವುದಿಲ್ಲ. ನಮ್ಮ ಹಾಗೆ ಎಷ್ಟೋ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಕಾಪಿ ಮಾಡದೆ ಬರೆಯುತ್ತಿದ್ದಾರೆ. ಅವರಿಗೆ ಮೋಸ ಮಾಡಿದ ಹಾಗೆ ಆಗುತ್ತೆ. ಬೇಡ’ ಎಂದೆ. ಅದನ್ನು ಕೇಳಿದ ಅವನು “ನಿನಗೆ ಬೇಡಾ ಎಂದರೆ ನನಗೂ ಬೇಡ. ಇನ್ಮೆàಲಿಂದ ನಾನೂ ಕಾಪಿ ಮಾಡಲ್ಲ’ ಎಂದು ಹೇಳಿ ಅದನ್ನು ಹೊರಗೆ ಒಗೆದ!
ವಿನಂತಿ ಕುಲಕರ್ಣಿ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.