ಬೆಂಗಳೂರಿಗನ ಫಾಲೋ ಮಾಡಿದ ಮೋದಿ!
Team Udayavani, Apr 5, 2017, 12:03 PM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಲಕ್ಷಗಟ್ಟಲೆ ಮಂದಿ ಟ್ವೀಟರ್ನಲ್ಲಿ ಹಿಂಬಾಲಿಸುತ್ತಾರೆ. ಆದರೆ, ಅವರು ವಿಶ್ವಾದ್ಯಂತ ಫಾಲೋ ಮಾಡುವುದು 1700 ಮಂದಿಯನ್ನು ಮಾತ್ರ. ಅಂಥ ಮೋದಿ ಬೆಂಗಳೂರಿನ ಯುವಕನನ್ನು ಟ್ವಿಟರ್ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು “ಸ್ವತ್ಛ ಭಾರತ ಅಭಿಯಾನ!’
ಬೆಂಗಳೂರಿನಲ್ಲಿರುವ ಅಕಾಶ್ ಜೈನ್ ಅವರ ಸಹೋದರಿಗೆ ಮದುವೆ ನಿಶ್ಚಯವಾಧಿಗಿದೆ. ಮದುವೆ ಆಮಂತ್ರಣದಲ್ಲಿ ಅವರ ಕುಟುಂಬದವರು ಸ್ವತ್ಛ ಭಾರತ ಅಭಿಯಾನದ ಲೋಗೋವನ್ನು ಮುದ್ರಿಸಿದ್ದು, ಅದನ್ನಧಿವರು ಪ್ರಧಾನಿ ಅವರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದರು.
ಇದು ಹಲವು ಬಿಜೆಪಿ ನಾಯಕರ, ಸಚಿವರ ಗಮನಕ್ಕೆ ಬಂದಿದ್ದು, ಪೋಸ್ಟ್ ಅನ್ನು ರಿ ಟ್ವೀಟ್ ಮಾಡಿದ್ದರು. ಮದುವೆ ಕಾರ್ಯಕ್ರಮದಲ್ಲೂ ಸರ್ಕಾರದ ಅಭಿಯಾನವನ್ನು ಬೆಂಬಲಿಸುವಂತೆ ಅಕಾಶ್ ಕುಟುಂಬ ಲೋಗೋ ಹಾಕಿದ್ದು ವೈರಲ್ ಆಗಿತ್ತು.
ಪರಿಣಾಮ ಪ್ರಧಾನಿ ಮೋದಿ ಅವರೂ ಕೆಲ ಹೊತ್ತಿನಲ್ಲಿ ಅಕಾಶ್ ಅವರನ್ನು ಫಾಲೋ ಮಾಡಿದ್ದಾರೆ! ಪ್ರಧಾನಿ ಮೋದಿ ಅವರು ಟ್ವಿಟ್ಟರ್ನಲ್ಲಿ ಹಿಂಬಾಲಿಸಿದ್ದನ್ನು ಟ್ವೀಟ್ ಮೂಲಕ ಆಕಾಶ್ ಅವರು ಹೇಳಿದ್ದು, “ಮೋದಿ ಅವರು ತಮ್ಮನ್ನು ಹಿಂಬಾಲಿಸುತ್ತಾರೆಂದು ಗ್ರಹಿಸಲೇ ಇಲ್ಲ. ಇದು ತೀರ ಅಚ್ಚರಿ ತಂದಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.