ಹಳ್ಳಿಜನರಲ್ಲಿ ಮತಯಾಚಿಸಿದ ಸಿದ್ದರಾಮಯ್ಯ
Team Udayavani, Apr 5, 2017, 12:45 PM IST
ಮೈಸೂರು: ನೋಡ್ರಪ್ಪಾ ಗೆಯ್ಯೋ ಎತ್ತಿಗೆ ಹುಲ್ಲು ಹಾಕಿ, ಕಳ್ಳ ಎತ್ತಿಗೆ ಹುಲ್ಲು ಹಾಕೆºàಡಿ..ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂಜನಗೂಡು ಕ್ಷೇತ್ರದ ಮತದಾರರಲ್ಲಿ ಮಾಡಿದ ಮನವಿ.
ಉಪ ಚುನಾವಣೆ ಹಿನ್ನೆಲೆ ಮಂಗಳವಾರ ನಂಜನ ಗೂಡು ಕ್ಷೇತ್ರ ವ್ಯಾಪ್ತಿಯ ದೇಬೂರು, ಹೆಗ್ಗಡಹಳ್ಳಿ, ಬೆಳೆಲೆ, ಶಿರಮಳ್ಳಿ, ಕುರಿಹುಂಡಿ, ತರಗನಹಳ್ಳಿ, ಕಪ್ಪಸೋಗೆ, ನೆಲ್ಲಿತಾಳಪುರ, ಬಸಾಪುರ, ಕಾಟೂರು, ಇಟಾjಲಾ, ಹರದನಹಳ್ಳಿ, ಕಣ್ಣೇನೂರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಪರ ಮತಯಾಚನೆ ಮಾಡಿದರು.
ಹಳ್ಳಿಗಳಲ್ಲಿ ಪಟಾಕಿ ಸಿಡಿಸಿ, ವಾದ್ಯಗಳೊಂದಿಗೆ ಮುಖ್ಯಮಂತ್ರಿಯವರನ್ನು ಬರಮಾಡಿಕೊಳ್ಳ ಲಾಯಿತು. ಹಂಡುವಿನ ಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕ ರ್ತರು ಪಟಾಕಿ ಸಿಡಿಸಿ, ಮುಖ್ಯಮಂತ್ರಿ ಅವರನ್ನು ಗ್ರಾಮದೊಳಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದರೂ ಗ್ರಾಮದ ಪ್ರವೇಶದ್ವಾರದಲ್ಲೇ ಬಿಜೆಪಿಯ ಹತ್ತಾರು ಯುವ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು, ಯಡಿಯೂರಪ್ಪ ಪರ ಜೈಕಾರ ಕೂಗಿದ್ದರಿಂದ ಮುಜುಗರಕ್ಕೊಳಗಾದ ಸಿಎಂ ಗ್ರಾಮದೊಳಕ್ಕೆ ಹೋಗದೆ ಮುನ್ನಡೆದರು.
ದೇಬೂರು ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚಿಸುವ ವೇಳೆ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಸಭ್ಯಸ್ಥ, ಒಳ್ಳೆ ಮನುಷ್ಯ ಎಂದು ಗುಣಗಾನ ಮಾಡಿದ ಮುಖ್ಯಮಂತ್ರಿಗೆ ಗ್ರಾಮಸ್ಥರು, ನೀವು ಒಳ್ಳಯವರಲ್ಲವಾ ಸಾರ್.. ಎಂಬ ಪ್ರಶ್ನೆ ಮುಂದಿಟ್ಟರು, ನಾನೂ ಒಳ್ಳೆಯವನೇ ಇವ°ಷ್ಟು ಅಲ್ಲ ಎಂದು ಗ್ರಾಮಸ್ಥರನ್ನು ನಗೆಗಡಲಲ್ಲಿ ತೇಲಿಸಿದರು.
ಅಲ್ಲಿಂದ ಮುಂದೆ ಸಾಗಿದ ಮುಖ್ಯಮಂತ್ರಿ ನೇತೃತ್ವದ ತಂಡ ಹೆಗ್ಗಡಹಳ್ಳಿ ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿತು. ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ನಾಲ್ಕು ವರ್ಷಗಳ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿ, ಅನ್ನಭಾಗ್ಯ, ಕೃಷಿ ಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ ಹೀಗೆ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದೇವೆ.
ಈ ಉಪ ಚುನಾವಣೆಯಲ್ಲಿ ನಾವು ಮಾಡಿದ ಕೆಲಸಕ್ಕೆ ಕೂಲಿ ಕೇಳಲು ಬಂದಿದ್ದೇವೆ. ನೀವು ಗೆಯ್ಯೋ ಎತ್ತಿಗೆ ಹುಲ್ಲು ಹಾಕಿ, ಕಳ್ಳ ಎತ್ತಿಗೆ ಹುಲ್ಲು ಹಾಕಬೇಡಿ, ನಂಜನಗೂಡು ತಾಲೂಕಿನ ಅಭಿವೃದ್ಧಿ ಪರ್ವ ಶುರುವಾಗಿದೆ, ಅದನ್ನು ಮುಂದುವರಿಸಲು ಹಸ್ತಕ್ಕೆ ಮತ ನೀಡಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯನ್ನು ಗೆಲ್ಲಿಸಿಕೊಡಿ ಎಂದರು.
ಈ ಗ್ರಾಮದಲ್ಲಿ 3 ಸಾವಿರ ವೋಟ್ ಇದೆ. ಏ.9ನೇ ತಾರೀಖು ಸತ್ತವರು, ಊರಲ್ಲಿ ಇಲ್ಲದವರನ್ನು ಬಿಟ್ಟು ಎಲ್ಲರೂ ಬಂದು ವೋಟು ಹಾಕಿ ಎಂದು ಚಟಾಕಿ ಹಾರಿಸಿದರು. ಅಲ್ಲಿಂದ ಮುಂದೆ ಬಂದ ಮುಖ್ಯಮಂತ್ರಿಗೆ ಗ್ರಾಮದ ಮತ್ತೂಂದು ಗುಂಪು ಮೈಸೂರು ಪೇಟ ತೊಡಸಿ, ಹಾರ ಹಾಕಿ ಸಂಭ್ರಮಿಸಿತು. ವಾದ್ಯವೃಂದದ ಜತೆಗೆ ಇಡೀ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಮುಖ್ಯಮಂತ್ರಿಯನ್ನು ಗ್ರಾಮದ ಕೊನೆಯವರೆಗೆ ಬಂದು ಗ್ರಾಮಸ್ಥರು ಬಿಳ್ಕೊಟ್ಟರು.
ಅಲ್ಲಿಂದ ಮುಂದೆ ಬೆಳಲೆ ಮತ್ತು ಶಿರಮಳ್ಳಿಯ ಗ್ರಾಮಸ್ಥರು ಮುಖ್ಯಮಂತ್ರಿಯ ಆಗಮನಕ್ಕಾಗಿ ಕಾದು ನಿಂತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಬರುತ್ತಿದ್ದಂತೆ ಜೈಕಾರ ಕೂಗಿ, ಪಟಾಕಿ ಸಿಡಿಸಿ ಗ್ರಾಮಕ್ಕೆ ಬರಮಾಡಿಕೊಂಡರು.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.