ಲಕ್ಕಿ ಡ್ರಾ ವಿಜೇತರಿಗೆ 100 ಗ್ರಾಂ ಚಿನ್ನ!
Team Udayavani, Apr 5, 2017, 2:42 PM IST
ಹುಬ್ಬಳ್ಳಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಫೆಸ್ಟಿವಲ್ನ 8ನೇ ಹಾಗೂ ಅಂತಿಮ ವಾರದ ಲಕ್ಕಿ ಡ್ರಾದಲ್ಲಿ ರಾಣಿಬೆನ್ನೂರದ ಡಾ|ಪೂಜಾ ಕೆಲಗಾರ ಅವರು ಲಕ್ಕಿ ಡ್ರಾ ವಿಜೇತ ಗ್ರಾಹಕರಾಗಿ 100 ಗ್ರಾಂ ಚಿನ್ನದ ಗಟ್ಟಿ ತಮ್ಮದಾಗಿಸಿಕೊಂಡರು.
ಇಲ್ಲಿನ ಕೊಯಿನ್ ರಸ್ತೆಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ (ಎಂಜಿಡಿ) ಮಳಿಗೆಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅವರು ವಿಜೇತರಿಗೆ 100ಗ್ರಾಂ ಚಿನ್ನದ ಗಟ್ಟಿ ಬಹುಮಾನ ವಿತರಿಸಿ ಮಾತನಾಡಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತನ್ನ ಪ್ರಾಮಾಣಿಕ, ಪಾರದರ್ಶಕ ಸೇವೆಗೆ ಹೆಸರಾಗಿದೆ. ಲಕ್ಕಿ ಡ್ರಾ ಗ್ರಾಹಕರಿಗೆ ತ್ವರಿತವಾಗಿ ಬಹುಮಾನ ವಿತರಿಸುವ ಮೂಲಕ ತನ್ನ ಪ್ರಾಮಾಣಿಕತೆ ಮೆರೆಯುತ್ತಿದೆ.ಅತ್ಯುತ್ತಮ ಚಿನ್ನಾಭರಣ,ಪಾರದರ್ಶಕ ಬೆಲೆ, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮಳಿಗೆ ಪ್ರಧಾನ ವ್ಯವಸ್ಥಾಪಕ ಶಶಾಂಕ ಏಕಬೋಟೆ ಮಾತನಾಡಿ, ಸಂಸ್ಥೆಯು ಗ್ರಾಹಕರಿಗಾಗಿ ಜನವರಿ 13ರಿಂದ ಮಾರ್ಚ್ 10ರವರೆಗೆ ಎಂಜಿಡಿ ಫೆಸ್ಟಿವಲ್ ಆಯೋಜಿಸಿತ್ತು. ಇದರಲ್ಲಿ ಪ್ರತಿ 20 ಸಾವಿರ ರೂ. ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಒಂದು ಲಕ್ಕಿ ಡ್ರಾ ಕೂಪನ್ ನೀಡಲಾಗುತ್ತಿತ್ತು. 8ನೇ ವಾರದ ಲಕ್ಕಿ ವಿಜೇತರಾಗಿ ಸ್ಥಳೀಯ ಶಾಖೆಯ ಗ್ರಾಹಕರು ಆಯ್ಕೆಯಾಗಿದ್ದು ಸಂತಸ ತಂದಿದೆ.
ಯೋಜನೆಯಲ್ಲಿ ಪ್ರತಿವಾರ ಒಬ್ಬ ಲಕ್ಕಿ ಗ್ರಾಹಕರನ್ನು ಆಯ್ಕೆ ಮಾಡಲಾಗುತ್ತಿತ್ತು. ವಿಜೇತ ಗ್ರಾಹಕರಿಗೆ 100 ಗ್ರಾಂ ಚಿನ್ನದ ಗಟ್ಟಿ ನೀಡುವ ಯೋಜನೆ ಇದಾಗಿದ್ದು, ಜೊತೆಗೆ ಗ್ರಾಹಕರಿಗೆ ಇನ್ನಿತರೆ ಉಡುಗೊರೆಗಳನ್ನು ನೀಡಲಾಗಿದೆ ಎಂದರು. ಶಾಖಾ ಮುಖ್ಯಸ್ಥ ಅಜ್ಮಲ್ ರೋಷನ್, ಶಮೀಮ ಟಿ., ಮಳಿಗೆ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.