ಐಪಿಎಲ್‌ಗೆ ಅದ್ದೂರಿ ಚಾಲನೆ
Team Udayavani, Apr 6, 2017, 10:30 AM IST
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ನ 10ನೇ ವರ್ಷದ ಕ್ರಿಕೆಟ್ ಹಬ್ಬಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಬಾಲಿವುಡ್ ತಾರೆ ಆ್ಯಮಿ ಜಾಕ್ಸನ್ ಅವರ ಅಮೋಘ ನೃತ್ಯ ಪ್ರದರ್ಶನದ ಜತೆ ಭಾರತೀಯ ಕ್ರಿಕೆಟ್‌ನ ನಾಲ್ವರು ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹವಾಗ್ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಉದ್ಘಾಟನಾ ಸಮಾರಂಭದ ವೇಳೆ ಸಮ್ಮಾನಿಸಲಾಯಿತು.
ಈ ಹಿಂದಿನ 9 ಐಪಿಎಲ್‌ಗಳ ವಿಜೇತರನ್ನು ವೀಡಿಯೊ ಮೂಲಕ ತೋರಿಸಿದ ಬಳಿಕ ಕ್ರಿಕೆಟ್ ದಿಗ್ಗಜರನ್ನು ಸಮ್ಮಾನಿಸಲಾಯಿತು. 2008ರಲ್ಲಿ ಮೊದಲ ಐಪಿಎಲ್ ವೇಳೆ ಈ ನಾಲ್ವರು ದಿಗ್ಗಜರನ್ನು ಆಯಾಯ ತಂಡಗಳ ಐಕಾನ್ ಆಟಗಾರರಾಗಿ ಆಯ್ಕೆ ಮಾಡಲಾಗಿತ್ತು. ಮುಂಬೈ ಇಂಡಿಯನ್ಸ್ ಪಾಲಾದ ತೆಂಡುಲ್ಕರ್ 2013ರವರೆಗೆ ಆಡಿದರು. ಗಂಗೂಲಿ ಕೋಲ್ಕತಾ ಪರ ಆಡಿದರೆ ಸೆಹವಾಗ್ ಮತ್ತು ಲಕ್ಷ್ಮಣ್ ಅನುಕ್ರಮವಾಗಿ ಡೆಲ್ಲಿ ಮತ್ತು ಡೆಕ್ಕನ್ ಚಾರ್ಜರ್ ಪರ ಆಡಿದರು. 10 ವರ್ಷಗಳ ಬಳಿಕ ಬಿಸಿಸಿಐ ಈ ನಾಲ್ವರನ್ನು ಐಪಿಎಲ್ ಕ್ರಿಕೆಟನ್ನು ಉನ್ನತ ಸ್ಥಾನಕ್ಕೇರಲು ನೆರವಾದ ಕಾರಣಕ್ಕಾಗಿ ಸಮ್ಮಾನಿಸಿತು.
ಹಿಂದಿಯಲ್ಲಿ ಹರ್ಷ ಬೋಗ್ಲೆ ವೀಕ್ಷಕ ವಿವರಣೆ
ಹೈದರಾಬಾದ್: ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಐಪಿಎಲ್‌ನ ಕಾಮೆಂಟರಿ ತಂಡ ದಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ಆದರೆ ಅವರು ಈ ಬಾರಿ ಹಿಂದಿಯಲ್ಲಿ ವೀಕ್ಷಕ ವಿವರಣೆ ಮಾಡು ವುದು ವಿಶೇಷವಾಗಿದೆ. ವೀಕ್ಷಕರಿಗೆ ಇದು ಸ್ವಲ್ಪ ಮಟ್ಟಿಗೆ ಹಾಸ್ಯವಾಗಿ ಕಾಣಬಹುದು. ಆದರೆ ನಿಜ. ವೀಕ್ಷಕವಿವರಣೆಗಾರರ ಪಟ್ಟಿಗೆ ಮರಳಿರುವುದು ನನಗೆ ಅತೀವ ಖುಷಿ ನೀಡಿದೆ. ಆದರೆ ಇಂಗ್ಲಿಷ್ ಬದಲು ಹಿಂದಿಯಲ್ಲಿ ವೀಕ್ಷಕ ವಿವರಣೆ ಮಾಡಲಿದ್ದೇನೆ ಎಂದು ಅವರು ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.