ಹೈದರಾಬಾದ್ ಗೆಲುವಿನ ಶುಭಾರಂಭ: ಹೆನ್ರಿಕ್ಸ್, ಯುವಿ ಅರ್ಧಶತಕ
Team Udayavani, Apr 6, 2017, 10:48 AM IST
ಹೈದರಾಬಾದ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಸನ್‌ರೈಸರ್ ಹೈದರಾಬಾದ್ ತಂಡವು 10ನೇ ಐಪಿಎಲ್‌ನಲ್ಲಿ ಗೆಲುವಿನೊಂದಿಗೆ ಶುಭಾರಂಭಗೈದಿದೆ. ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಅದು ರಾಯಲ್ ಚಾಲೆಂಜರ್ ಬೆಂಗಳೂರು ತಂಡವನ್ನು 35 ರನ್ನುಗಳಿಂದ ಸೋಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡವು ಮೊಸಸ್ ಹೆನ್ರಿಕ್ಸ್ ಮತ್ತು ಯುವರಾಜ್ ಸಿಂಗ್ ಅವರ ಆಕರ್ಷಕ ಅರ್ಧಶತಕದಿಂದಾಗಿ 4 ವಿಕೆಟಿಗೆ 207 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಗೆಲ್ಲಲು ಕಠಿನ ಗುರಿ ಪಡೆದ ಆರ್‌ಸಿಬಿ ತಂಡ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ 19.4 ಓವರ್‌ಗಳಲ್ಲಿ 172 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.
ಸ್ಫೋಟಕ ಖ್ಯಾತಿಯ ಕ್ರಿಸ್ ಗೇಲ್ ಅವರನ್ನು ಹೊರತುಪಡಿಸಿ ತಂಡದ ಉಳಿದ ಯಾವುದೇ ಆಟಗಾರ ಮಿಂಚಲು ವಿಫಲರಾದರು. ಗೇಲ್ 21 ಎಸೆತ ಎದುರಿಸಿ 32 ರನ್ ಹೊಡೆ ದರು.
ಐಪಿಎಲ್‌ಗೆ ಪಾದಾರ್ಪಣೆಗೈದ ಅಫ್ಘಾನಿಸ್ಥಾನದ ಬೌಲರ್ ರಶೀದ್ ಖಾನ್ ಎರಡು ವಿಕೆಟ್ ಕಿತ್ತು ಗಮನ ಸೆಳೆದರು. ಅವರಿಗೆ ಉಪಯುಕ್ತ ಬೆಂಬಲ ನೀಡಿದ ಆಶಿಷ್ ನೆಹ್ರ ಮತ್ತು ಭುವನೇಶ್ವರ್ ಕುಮಾರ್ ಕೂಡ ತಲಾ ಎರಡು ವಿಕೆಟ್ ಪಡೆದರು.
ಹೆನ್ರಿಕ್ಸ್ , ಯುವಿ ಆಸರೆ
ಈ ಮೊದಲು ನಾಯಕ ಡೇವಿಡ್ ವಾರ್ನರ್ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ಶಿಖರ್ ಧವನ್ ಅವರನ್ನು ಸೇರಿಕೊಂಡ ಹೆನ್ರಿಕ್ಸ್ ಅವರು ದ್ವಿತೀಯ ವಿಕೆಟಿಗೆ 74 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಈ ಹಂತದಲ್ಲಿ 40 ರನ್ ಗಳಿಸಿದ ಧವನ್ ಔಟಾದರು. 31 ಎಸೆತ ಎದುರಿಸಿದ ಅವರು 5 ಬೌಂಡರಿ ಬಾರಿಸಿದ್ದರು. ಹೆನ್ರಿಕ್ಸ್ ಮತ್ತು ಯುವರಾಜ್ ಭರ್ಜರಿ ಆಟವಾಡಿ ತಂಡದ ರನ್‌ವೇಗ ಹೆಚ್ಚಿಸಿದರು. ಮೂರನೇ ವಿಕೆಟಿಗೆ 58 ರನ್ ಪೇರಿಸಿ ಬೇರ್ಪಟ್ಟರು. ಹೆನ್ರಿಕ್ಸ್ 52 ರನ್ ಗಳಿಸಿ ಔಟಾದರು. 37 ಎಸೆತ ಎದುರಿಸಿದ ಅವರು 3 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ಆಕರ್ಷಕ ಆಟವಾಡಿದ ಯುವರಾಜ್ ಕೇವಲ 27 ಎಸೆತ ಗಳಿಂದ 62 ರನ್ ಹೊಡೆದರು. 7 ಬೌಂಡರಿ ಬಾರಿಸಿದ ಅವರು 3 ಸಿಕ್ಸರ್ ಸಿಡಿಸಿ ರಂಜಿಸಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಪಂದ್ಯಕ್ಕಾಗಿ ಬೆಂಗಳೂರು ತಂಡ ಪರ ಇಬ್ಬರು ಐಪಿಎಲ್‌ಗೆ ಪಾದಾರ್ಪಣೆಗೈದಿದ್ದಾರೆ. ಗಾಯ ಗೊಂಡಿರುವ ವಿರಾಟ್ ಕೊಹ್ಲಿ ಮತ್ತು ಎಬಿ ಡಿ’ವಿಲಿಯರ್ ಬದಲಿಗೆ ತಂಡವನ್ನು ಮುನ್ನಡೆಸಿದ ಶೇನ್ ವಾಟ್ಸನ್ ಅವರು ಟಿಮಲ್ ಮಿಲ್ಸ್ ಮತ್ತು ರಾಜಸ್ಥಾನದ ವೇಗಿ ಅಂಕಿತ್ ಚೌಧರಿ ಅವರನ್ನು ಸೇರಿಸಿಕೊಂಡಿದೆ. ಅವರಿಬ್ಬರು ಐಪಿಎಲ್‌ಗೆ ಪಾದಾ ರ್ಪಣೆಗೈದರೆ ಶ್ರೀನಾಥ್ ಅರವಿಂದ್ ಅವರನ್ನು ಆಡುವ ಬಳಗಕ್ಕೆ ಸೇರಿಸಿ ಕೊಳ್ಳಲಾಗಿದೆ.
ಸನ್‌ರೈಸರ್ ಹೈದರಾಬಾದ್ ತಂಡವು ಅಘಾ^ನಿಸ್ಥಾನದ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಅವರನ್ನು ಸೇರಿಸಿಕೊಂಡಿದೆ. ಈ ಮೂಲಕ ಅವರು ಐಪಿಎಲ್‌ಗೆ ಪಾದಾರ್ಪಣೆಗೈದಿದ್ದಾರೆ. ಆಶಿಷ್ ನೆಹ್ರ ತಂಡಕ್ಕೆ ಮರಳಿದ್ದಾರೆ.
ಉಭಯ ತಂಡಗಳ ನಾಯಕರು ಆಸ್ಟ್ರೇಲಿಯದವರೇ ಆಗಿರುವುದು ಈ ಪಂದ್ಯದ ವಿಶೇಷವಾಗಿದೆ.
ಸನ್‌ರೈಸರ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಶಿಖರ್ ಧವನ್, ಮೊಸಸ್ ಹೆನ್ರಿಕ್ಸ್, ಯುವರಾಜ್ ಸಿಂಗ್, ದೀಪಕ್ ಹೂಡ, ನಮನ್ ಓಜಾ, ಬೆನ್ ಕಟ್ಟಿಂಗ್, ಬಿಪುಲ್ ಶರ್ಮ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಆಶಿಷ್ ನೆಹ್ರ ರಾಯಲ್ ಚಾಲೆಂಜರ್ ಬೆಂಗಳೂರು: ಕ್ರಿಸ್ ಗೇಲ್, ಮನ್‌ದೀಪ್ ಸಿಂಗ್, ಟ್ರ್ಯಾವಿಸ್ ಹೆಡ್, ಶೇನ್ ವಾಟ್ಸನ್ (ನಾಯಕ), ಕೇದಾರ್ ಜಾಧವ್, ಸಚಿನ್ ಬೇಬಿ, ಸ್ಟುವರ್ಟ್ ಬಿನ್ನಿ, ಶ್ರೀನಾಥ್ ಅರವಿಂದ್, ಯುಜ್ವೇಂದ್ರ ಚಾಹಲ್, ಟಿಮಲ್ ಮಿಲ್ಸ್, ಅಂಕಿತ್ ಚೌಧರಿ.
ಸ್ಕೋರ್ ಪಟ್ಟಿ
ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಸಿ ಮನ್‌ದೀಪ್ ಬಿ ಅಂಕಿತ್ 14
ಶಿಖರ್ ಧವನ್ ಸಿ ಸಚಿನ್ ಬಿ ಬಿನ್ನಿ 40
ಮೊಸಸ್ ಹೆನ್ರಿಕ್ಸ್ ಸಿ ಸಚಿನ್ ಬಿ ಚಾಹಲ್ 52
ಯುವರಾಜ್ ಸಿಂಗ್ ಮಿ ಮಿಲ್ಸ್ 62 ದೀಪಕ್ ಹೂಡ ಔಟಾಗದೆ 16
ಬೆನ್ ಕಟ್ಟಿಂಗ್ ಔಟಾಗದೆ 16
ಇತರ: 7
ಒಟ್ಟು (20 ಓವರ್‌ಗಳಲ್ಲಿ 4 ವಿಕೆಟಿಗೆ) 207
ವಿಕೆಟ್ ಪತನ: 1=19, 2-93, 3-151, 4-190
ಬೌಲಿಂಗ್: ಟಿಮಲ್ ಮಿಲ್ಸ್ 4-0-31-1
ಅಂಕಿತ್ ಚೌಧರಿ 4-0-55-1
ಯುಜ್ವೇಂದ್ರ ಚಾಹಲ್ 4-0-22-1
ಶ್ರೀನಾಥ್ ಅರವಿಂದ್ 3-0-36-0
ಶೇನ್ ವಾಟ್ಸನ್ 3-0-41-0
ಟ್ರ್ಯಾವಿಸ್ ಹೆಡ್ 1-0-11-0
ಸ್ಟುವರ್ಟ್ ಬಿನ್ನಿ 1-0-10-1
ರಾಯಲ್ ಚಾಲೆಂಜರ್ ಬೆಂಗಳೂರು
ಕ್ರಿಸ್ ಗೇಲ್ ಸಿ ವಾರ್ನರ್ ಬಿ ಹೂಡ 32
ಮನ್‌ದೀಪ್ ಸಿಂಗ್ ಸಿ ರಶೀದ್ ಖಾನ್ 24
ಟ್ರ್ಯಾವಿಸ್ ಹೆಡ್ ಸಿ ಯುವರಾಜ್ ಬಿ ರಶೀದ್ 30
ಕೇದಾರ್ ಜಾಧವ್ ರನೌಟ್ 31
ಶೇನ್ ವಾಟ್ಸನ್ ಸಿ ಹೆನ್ರಿಕ್ಸ್ ಬಿ ನೆಹ್ರ 22
ಸಚಿನ್ ಬೇಬಿ ಸಿ ಹೆನ್ರಿಕ್ಸ್ ಬಿ ಬಿಪುಲ್ 1
ಸ್ಟುವರ್ಟ್ ಬಿನ್ನಿ ಸಿ ಯುವರಾಜ್ ಬಿ ಕುಮಾರ್ 11
ಶ್ರೀನಾಥ್ ಅರವಿಂದ್ ಬಿ ನೆಹ್ರ 0
ಟಿಮಲ್ ಮಿಲ್ಸ್ ಸಿ ವಾರ್ನರ್ ಬಿ ಕುಮಾರ್ 6
ಯುಜ್ವೇಂದ್ರ ಚಾಹಲ್ ರನೌಟ್ 3
ಅಂಕಿತ್ ಚೌಧರಿ ಔಟಾಗದೆ 6
ಇತರ: 6
ಒಟ್ಟು (19.4 ಓವರ್‌ಗಳಲ್ಲಿ ಆಲೌಟ್) 172
ವಿಕೆಟ್ ಪತನ: 1-52, 2-60, 3-116, 4-126, 5-128, 6-154, 7-156, 8-156, 9-164
ಬೌಲಿಂಗ್: ಆಶಿಷ್ ನೆಹ್ರ 4-0-42-2
ಭುವನೇಶ್ವರ್ ಕುಮಾರ್ 4-0-27-2
ಬೆನ್ ಕಟ್ಟಿಂಗ್ 3.4-0-35-0
ರಶೀದ್ ಖಾನ್ 4-0-30-2
ದೀಪಕ್ ಹೂಡ 1-0-7-1
ಮೊಸಸ್ ಹೆನ್ರಿಕ್ಸ್ 2-0-20-0
ಬಿಪುಲ್ ಶರ್ಮ 1-0-4-1
ಪಂದ್ಯಶ್ರೇಷ್ಠ: ಯುವರಾಜ್ ಸಿಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.