ತ್ರಿವಳಿ ತಲಾಖ್, ಗೋಹತ್ಯೆ ವಿರುದ್ಧ ಫತ್ವಾ
Team Udayavani, Apr 6, 2017, 11:35 AM IST
ಹೊಸದಿಲ್ಲಿ: ದೇಶಾದ್ಯಂತ ಮುಸ್ಲಿಂ ಸಮುದಾಯದಲ್ಲಿನ ತ್ರಿವಳಿ ತಲಾಖ್, ಗೋಹತ್ಯೆ ವಿಚಾರ ವ್ಯಾಪಕ ಚರ್ಚೆಗೊಳಗಾಗುತ್ತಿರುವಂತೆಯೇ, ಎರಡೂ ವಿಚಾರಗಳ ವಿರುದ್ಧ ಶಿಯಾ ವೈಯಕ್ತಿಕ ಕಾನೂನು ಮಂಡಳಿ (ಎಐಎಸ್ಪಿಎಲ್ಬಿ) ಫತ್ವಾ ಹೊರಡಿಸಿದೆ. ಜೊತೆಗೆ ರಾಮಜನ್ಮಭೂಮಿ ವಿವಾದವನ್ನು ನ್ಯಾಯಾಲಯದ ಹೊರಗೆ ತೀರ್ಮಾನಿಸಬೇಕು ಎಂಬ ನಿರ್ಧಾರವನ್ನು ಪ್ರಕಟಿಸಿದೆ. ಬುಧವಾರ ಲಕ್ನೋದಲ್ಲಿ ನಡೆದ ಸಭೆಯಲ್ಲಿ ಶಿಯಾದ ಉನ್ನತ ಮೌಲ್ವಿ ಇರಾಕ್ನ ಅಯತುಲ್ಲಾ ಶೇಖ್ ಬಶೀರ್ ಹುಸೈನ್ ನಜಾಫಿ ಅವರ ಬಳಿ ಗೋಹತ್ಯೆ ವಿಚಾರದಲ್ಲಿ ಅಭಿಪ್ರಾಯ ಕೇಳಲಾಗಿದೆ.
ಅವರ ಅಭಿಪ್ರಾಯ ಪ್ರಕಾರ, ಶಿಯಾ ಸಮುದಾಯ ಗೋಹತ್ಯೆ ನಡೆಸದಂತೆ ಫತ್ವಾ ಹೊರಡಿಸಲಾಗಿದೆ. ಇತರ ಧರ್ಮದ ಧಾರ್ಮಿಕ ಧೋರಣೆಗಳನ್ನೂ ಗೌರವಿಸುವುದು ಅಗತ್ಯವಾಗಿದೆ ಎಂದು ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಯಾಸೂಬ್ ಅಬ್ಟಾಸ್ ಹೇಳಿದ್ದಾರೆ. ಇದರೊಂದಿಗೆ ಒಂದೇ ಬಾರಿ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡುವುದು ಸರಿಯಾದ ನಡೆ ಅಲ್ಲ. ತ್ರಿವಳಿ ತಲಾಖ್ ವಿಚಾರದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ನಮ್ಮನ್ನೂ ಪ್ರತಿವಾದಿಗಳನ್ನಾಗಿ ಮಾಡುವಂತೆ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.