ದಾಖಲೆ ಬಿಸಿಲಿಗೆ ಸಾಕ್ಷಿಯಾಗಿದ್ದ ರಾಜಧಾನಿಯಲ್ಲಿ ದಿಢೀರ್ ಮಳೆ
Team Udayavani, Apr 6, 2017, 12:02 PM IST
ಬೆಂಗಳೂರು: ಮಾರ್ಚ್ನಲ್ಲಿ ದಾಖಲಾಗಿದ್ದ ದಾಖಲೆಯ ಉಷ್ಣಾಂಶದಿಂದ ಬೆಂದಿದ್ದ ಬೆಂಗಳೂರು, ಏಪ್ರಿಲ್ ಆರಂಭದಲ್ಲೇ ಸುರಿದ ಮಳೆಯಿಂದ ತಂಪಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ 35ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಿನ್ನೆಲೆಧಿಯಲ್ಲಿ ಬಿಸಿಗಾಳಿಗೆ ಬಸವಳಿದಿದ್ದ ರಾಜಧಾನಿಯ ನಾಗರಿಕರಿಗೆ ಬುಧವಾರ ಸಂಜೆ ಸುರಿದ ಜಿಟಿಜಿಟಿ ಮಳೆ ಹಿತ ತಂದಿತು.
ರಸ್ತೆಯಲ್ಲಿದ್ದ ವಾಹನ ಸವಾರರು ಮಳೆಗೆ ಮೈಯೊಡ್ಡಿದರೆ, ಕೆಲವು ಬಡಾಧಿವಣೆಗಳಲ್ಲಿ ಮಕ್ಕಳು ರಸ್ತೆಗಿಳಿದು ಮಳೆಯಲ್ಲಿ ಖುಷಿಧಿಪಟ್ಟರು. ಆದರೆ, ಮನೆಗೆ ಧಾವಿಧಿಸುವ ಭರದಲ್ಲಿದ್ದ ವಾಹನ ಸವಾರರು ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆಗೆ ಸಿಲುಕಿದರು.
ನಗರದ ಉತ್ತರ ಭಾಗದಲ್ಲಿ ಹೆಚ್ಚು ಮಳೆ ದಾಖಲಾಗಿದ್ದು, ಹೊಸ್ಕೂರು, ಶಿವಕೋಟೆಯಲ್ಲಿ 17 ಮಿ.ಮೀ. ಮಳೆಯಾಗಿದೆ. ಕಾಡುಗೋಡಿ, ಸಿಂಗಸಂದ್ರ, ಹುಣಸಮಾರನಹಳ್ಳಿ, ಕೋನಪ್ಪನ ಅಗ್ರಹಾರ ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಮುಂಗಾರು ಪೂರ್ವ ಮಳೆ ಇದು
ಛತ್ತೀಸ್ಗಡದಿಂದ ಕರಾವಳಿವರೆಗೆ “ಕಡಿಮೆ ಒತ್ತಡದ ತಗ್ಗು’ (ಟ್ರಫ್) ನಿರ್ಮಾಣವಾಗಿದ್ದರಿಂದ ಮಳೆಯಾಗುತ್ತಿದೆ. ಇದು ಮುಂಗಾರು ಪೂರ್ವ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಗುರುವಾರ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Rishab Shetty: ʼಜೈ ಹನುಮಾನ್ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್ ಶೆಟ್ಟಿ?
Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ
India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?
Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
MGM: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು; ಅಮೃತ ಮಹೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.