ವಿಜೃಂಭಣೆಯಿಂದ ನಡೆದ ಆಂಜನೇಯಸ್ವಾಮಿ ರಥೋತ್ಸವ

Team Udayavani, Apr 6, 2017, 1:12 PM IST

mys6.jpg

ಹುಣಸೂರು: ತಾಲೂಕಿನ ಹೊಸಕೋಟೆ  (ತಟ್ಟೆಕೆರೆ ಗೇಟ್‌)ಯಲ್ಲಿ ಶ್ರೀರಾಮ ನವಮಿಯಂದು ಪುಟ್ಟ ಕಂದಮ್ಮಗಳನ್ನು ರಥದ ಕೆಳಗೆ ಮಲಗಿಸಿ ತೇರು ಎಳೆಯುವ, ಉತ್ಸವ ಮೂರ್ತಿಯನ್ನು ಉಯ್ನಾಲೆಯಲ್ಲಿಟ್ಟು ಪೂಜೆ ಸಲ್ಲಿಸಿ ಉಯ್ನಾಲೆಯಾಡಿಸುವ ಹಾಗೂ ಹೆಂಗಸರು – ಮಕ್ಕಳು ಸೇರಿದಂತೆ ಎಲ್ಲರು ಸೇರಿ ರಥ ಎಳೆದು ಪುನೀತರಾಗುವ ವಿಶಿಷ್ಟ, ವಿಜೃಂಭಣೆಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಜನರು ಉತ್ಸುಕತೆಯಿಂದ ಭಾಗವಹಿಸಿದ್ದರು.

ಬೆಳಗ್ಗೆಯಿಂದಲೇ ಪೂಜಾ ವಿಧಿವಿಧಾನ ಆರಂಭಗೊಂಡು 10 ಗಂಟಗೆ ಬಣ್ಣಬಣ್ಣದ ಬಾವುಟ – ಹೂವಿನಿಂದ ಅಲಂಕೃತಗೊಂಡಿದ್ದ ರಥವನ್ನು ಹೆಂಗಸರು, ಮಕ್ಕಳೆನ್ನದೆ ಎಲ್ಲರೂ ಭಕ್ತಿಭಾವದಿಂದ ಎಳೆದರು. ಹುಣಸೂರು – ಹನಗೋಡು ಮುಖ್ಯರಸ್ತೆಯ ಹೊಸಕೋಟೆ ಕೆರೆಯವರೆಗೆ ಎಳೆದು ಮತ್ತೆ ಹಿಮ್ಮುಖವಾಗಿ ಎಳೆತಂದು ಮುಖ್ಯರಸ್ತೆ ಬದಿಯಲ್ಲಿ ನಿಲ್ಲಿಸಿದರು. ಸಂಜೆ ರಥವನ್ನು ಮತ್ತೆ ದೇವಸ್ಥಾನದ ಆವರಣಕ್ಕೆ ಎಳೆದು ತರಲಾಯಿತು.

ಉತ್ಸವ ಮೂರ್ತಿಗೆ ಉಯ್ನಾಲೆ: ಶ್ರೀರಾಮ, ಸೀತಾ, ಲಕ್ಷಣ, ಆಂಜನೇಯ ಉತ್ಸವ ಮೂರ್ತಿಯನ್ನು ರಥಕ್ಕೇರಿಸುವ ಮುನ್ನಾ ದೇವಾಲಯದಿಂದ ಮೆರವಣಿಗೆಯಲ್ಲಿ ತಂದು ಮಹಿಳೆಯರು ಪೂಜೆ ಸಲ್ಲಿಸಿ ನಂತರ ಉಯ್ನಾಲೆಯಾಡಿಸಿದರು. ನಂತರ ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ರಥದ ಮೇಲಕ್ಕೇರಿಸಿದರು.

ತೇರಿನ ಕೆಳಗೆ ಕೈಗೂಸುಗಳು: ಸಂಪ್ರ ದಾಯದಂತೆ ರಥೋತ್ಸವಕ್ಕೂ ಮುನ್ನಾ 10ಕ್ಕೂ ಹೆಚ್ಚು ಮಕ್ಕಳನ್ನು ರಥದ ಕೆಳೆಗೆ ಮಲಗಿಸಿ ಹರಕೆ ತೀರಿಸಿದರು. ಹರಕೆ ಹೊತ್ತ 6 ತಿಂಗಳಿಂದ 3 ವರ್ಷದ ಪುಟ್ಟ ಮಕ್ಕಳನ್ನು ದೊಡ್ಡವರ ರಕ್ಷಣೆಯೊಂದಿಗೆ ರಥದ ಕೆಳಗೆ ಸಾಲಾಗಿ ಮಲಗಿಸಿ ನಂತರ ರಥವನ್ನು ಭಕ್ತಿ ಭಾವದಿಂದ ಎಳೆದರು.

ಅನ್ನದಾನ: ಜಾತ್ರೆಗೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ದೂರದ ಊರುಗಳಿಂದ ಬರುವ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯಿಂದ ಊಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಹರಕೆ ಹೊತ್ತವರು ಹಾಗೂ ಭಕ್ತರು ಊಟದ ವ್ಯವಸ್ಥೆಗಾಗಿ ಅಕ್ಕಿ, ತರಕಾರಿ ನೀಡುವ ಮೂಲಕ ನೆರವಾದರು. ರಥೋತ್ಸವ ನಂತರ ಕೋಸಂಬರಿ, ಪಾನಕ ವಿತರಿಸಲಾಯಿತು. ಎಸ್‌ಐ ಪುಟ್ಟಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇಂದು ತೆಪ್ಪೋತ್ಸವ: ಗುರುವಾರ ಸಂಜೆ 4 ಗಂಟೆಗೆ ತಟ್ಟೆಕೆರೆ ಗೇಟ್‌ ಹೊಸಕೋಟೆ ಕೆರೆಯಲ್ಲಿ ತೆಪ್ಪೋತ್ಸವ ನಂತರ ಹೊಸಕೋಟೆ ಗ್ರಾಮದಲ್ಲಿ ದೇವರ ಉತ್ಸವ ನಡೆಯಲಿದೆ.

ಟಾಪ್ ನ್ಯೂಸ್

1-raju

Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ

1-PTI

Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್

1-asddasdsa

Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು

1-lo

Police; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್.

1-anurag

Constitution ನಲ್ಲಿ ಎಷ್ಟು ಪುಟಗಳಿವೆ?: ವಿಪಕ್ಷಗಳಿಗೆ ಅನುರಾಗ್ ಠಾಕೂರ್ ಪ್ರಶ್ನೆ ವೈರಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Grama Panchayat ಮಟ್ಟದಲ್ಲಿ ಟಾಸ್ಕ್ ಪೋರ್ಸ್‌: ಕೃಷ್ಣ ಬೈರೇಗೌಡ

Grama Panchayat ಮಟ್ಟದಲ್ಲಿ ಟಾಸ್ಕ್ ಪೋರ್ಸ್‌: ಕೃಷ್ಣ ಬೈರೇಗೌಡ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Chirathe

Hunasuru: ಹಬ್ಬನಕುಪ್ಪೆಯಲ್ಲಿ ಬೋನಿಗೆ ಬಿದ್ದ ಚಿರತೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

1-raju

Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ

1-PTI

Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್

1-asddasdsa

Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000

Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್‌ ಲಾಂಚ್‌

Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್‌ ಲಾಂಚ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.