ಶೋಷಿತರು ಸರ್ಕಾರದ ಸೌಲಭ್ಯ ಪಡೆಯಲಿ


Team Udayavani, Apr 6, 2017, 2:38 PM IST

hub1.jpg

ಧಾರವಾಡ: ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿದ ಯೋಜನೆಗಳ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳು ಪಡೆಯಬೇಕು ಎಂದು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರು ಹೇಳಿದರು. ನಗರದ ಡಾ|ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ನಡೆದ ಹಸಿರು ಕ್ರಾಂತಿ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ|ಬಾಬು ಜಗಜೀವನರಾಂ ಅವರ 110 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಕೆಳ ಸಮುದಾಯದಲ್ಲಿ ವಾಸಿಸುವ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳು ಇರುವುದಿಲ್ಲ. ರಸ್ತೆ, ನೀರು, ವಾಸಿಸಲು ಮನೆ, ಶಿಕ್ಷಣ, ಮುಂತಾದ ಯೋಜನೆಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ. ಅವೆಲ್ಲವುಗಳನ್ನು ಪಡೆದು ಸ್ವಾಭಿಮಾನ-ಆದರ್ಶ ಜೀವನ ನಡೆಸಲು ಪ್ರಯತ್ನಿಸಬೇಕು ಎಂದರು. 

ಜಾತಿ ಹುಟ್ಟಿನಿಂದ ಬಂದುದಲ್ಲ ಬದಲಾಗಿ ವೃತ್ತಿಯಿಂದ ಬಂದದ್ದು. ಮೇಲು ಕೀಳು, ವರ್ಣಭೇದ ಮಾಡುವುದರಿಂದ ವ್ಯಕ್ತಿ ದೊಡ್ಡವನಾಗುವುದಿಲ್ಲ. ಡಾ|ಬಾಬು ಜಗಜೀವನರಾಂ ಅವರ ಪ್ರತಿಭೆಯಿಂದ ಉನ್ನತ ಹುದ್ದೆ ಅಲಂಕರಿಸಿದವರು ಅಂತಹ ಪಾರಂಪರಿಕ ಸಾಂಸ್ಕೃತಿ, ಧರ್ಮ ಭಾರತದಲ್ಲಿದೆ ಎಂದರು.

ಡಾ|ಬಾಬು ಜಗಜೀವನರಾಂ ಅವರು ಕೃಷಿ ಮಂತ್ರಿಗಳಾಗಿ ಕೃಷಿ ಸಲಕರಣೆ ಹಾಗೂ ಕೃಷಿಕರಿಗೆ ಆರ್ಥಿಕ ಸೌಲಭ್ಯ ಒದಗಿಸಿ ಭಾರತಕ್ಕೆ ಆಗಿರುವ ಆಹಾರ ಧಾನ್ಯಗಳ ಕೊರತೆ ನೀಗಿಸಿದ್ದರು. ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಆಹಾರ ಧಾನ್ಯ ನಿಲ್ಲಿಸಿದರು. ಹೆಚ್ಚು ಕೃಷಿ ಉತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡುವ ಹಂತಕ್ಕೆ ತಂದರು.

ರೈತರ ಆರ್ಥಿಕ, ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸಿ ಹಸಿರು ಕ್ರಾಂತಿ ಹರಿಕಾರರಾದರು ಎಂದರು. ಜಿಲ್ಲಾಧಿಕಾರಿ ಡಾ|ಎಸ್‌.ಬಿ. ಬೊಮ್ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಜಿಪಂ ಸಿಇಒ ಆರ್‌.ಸ್ನೇಹಲ್‌ ಮಾತನಾಡಿದರು. ದಾವಣಗೆರೆಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಪೊ|ಎ.ಕೆ ಹಂಪಣ್ಣ ಉಪನ್ಯಾಸ ನೀಡಿದರು. 

ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಕ್ಷೇತ್ರದಲ್ಲಿ ನಿಂಗಪ್ಪ ದು. ಮುಗಳಿ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಸಿದ್ದರಾಜು ಯ.ಹಿಪ್ಪರಗಿ, ಕೃಷಿ ಸಂಶೋಧನೆ ಕ್ಷೇತ್ರದಲ್ಲಿ ಡಾ|ಶಿವ ಸೋಮಣ್ಣ ನಿಟ್ಟೂರ, ಸರ್ಕಾರಿ ಸೇವೆಯಲ್ಲಿ ಡಾ|ದಿವಾಕರ ಕೆ. ಶಂಕಿನದಾಸರ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮಣ್ಣ ಮಾದರ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. 

ಗಿರೀಶ ಆರ್‌.ಕಾಂಬಳೆ, ಪಿತಾಂಬ್ರಪ್ಪ ಬೀಳಾರ, ವಿ.ಜಿ ಪರಶಿ ಎಸ್‌.ಎಸ್‌ .ಪೂಜಾರ, ಅಶೋಕ ದೊಡ್ಡಮನಿ, ಲಕ್ಷ್ಮಣ ಬಕ್ಕಾಯಿ, ಶಿವರಾಜ ಕುಮಾರ ಕಲ್ಲಿಗನವರ, ವೆಂಕಟೇಶ ಸಕಬಾಲ, ಜಿಪಂ ಸದಸ್ಯ ಕರೆಪ್ಪ ಮಾದರ, ಶಾರದಾ ಕೇಲ್ಕಾರ ಇದ್ದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್‌.ಮುನಿರಾಜು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವೈ.ಎನ್‌.ನಾಗಮ್ಮನವರ ನಿರೂಪಿಸಿದರು. ಎಂ.ಬಿ.ಸಣ್ಣೇರ ವಂದಿಸಿದರು.  

ಟಾಪ್ ನ್ಯೂಸ್

Channapatna ByPoll: NDA ticket to Yogeshwar: Aswath Narayan Gowda confident

Channapatna ByPoll: ಎನ್ ಡಿಎ ಟಿಕೆಟ್ ಯೋಗೇಶ್ವರ್ ಗೆ: ಅಶ್ವಥ್ ನಾರಾಯಣ ಗೌಡ ವಿಶ್ವಾಸ

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!

Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA Case: Siddaramaiah should resign and face investigation: MP Yaduveer

MUDA Case: ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸಂಸದ ಯದುವೀರ್

ByPoll: No worries about Channapatnam constituency; committed to NDA decision: Nikhil Kumaraswamy

ByPoll: ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಹಪಾಹಪಿ ಇಲ್ಲ; ಎನ್‌ಡಿಎ ನಿರ್ಧಾರಕ್ಕೆ ಬದ್ಧ: ನಿಖಿಲ್

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

By Election: ಸಿಪಿವೈ ಎನ್‌ಡಿಎ ಅಭ್ಯರ್ಥಿ ಆದರೆ ಒಳ್ಳೆಯದು: ಜೋಶಿ

ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಜೋಶಿ

Pralhad Joshi: ಟಿಕೆಟ್‌ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Kalaburagi: ಬಿಜೆಪಿ ಎಂಎಲ್ಸಿ ಸುನೀಲ ವಲ್ಯಾಪುರೆ ಮನೆ ಮೇಲೆ‌ ಸಿಐಡಿ ದಾಳಿ

Kalaburagi: ಬಿಜೆಪಿ ಎಂಎಲ್ಸಿ ಸುನೀಲ ವಲ್ಯಾಪುರೆ ಮನೆ ಮೇಲೆ‌ ಸಿಐಡಿ ದಾಳಿ

15-bng

Bengaluru: ಸಾಕ್ಷಿದಾರರಿಗೆ ಜೈಲಿನಿಂದ ಬೆದರಿಕೆ: ಜೈಲು ಅಧೀಕ್ಷಕರ ವಿರುದ್ದ ತನಿಖೆ

14-yellapur

Yellapur: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಲಾರಿ

Channapatna ByPoll: NDA ticket to Yogeshwar: Aswath Narayan Gowda confident

Channapatna ByPoll: ಎನ್ ಡಿಎ ಟಿಕೆಟ್ ಯೋಗೇಶ್ವರ್ ಗೆ: ಅಶ್ವಥ್ ನಾರಾಯಣ ಗೌಡ ವಿಶ್ವಾಸ

ಯಕ್ಷಧ್ರುವ ಯುರೋಪ್‌ ಘಟಕ ಉದ್ಘಾಟನೆ; ಮಕ್ಕಳಿಂದ ಮಾಯಾಮೃಗ ಪ್ರದರ್ಶನ

ಯಕ್ಷಧ್ರುವ ಯುರೋಪ್‌ ಘಟಕ ಉದ್ಘಾಟನೆ; ಮಕ್ಕಳಿಂದ ಮಾಯಾಮೃಗ ಪ್ರದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.