ಉಪದೇಶ ಪಾಲನೆಯಿಂದ ಮೋಕ್ಷ ಪ್ರಾಪ್ತಿ
Team Udayavani, Apr 6, 2017, 2:46 PM IST
ಹುಬ್ಬಳ್ಳಿ: ಮಹಾವೀರ ತೀರ್ಥಂಕರರ ಉಪದೇಶವೇ ನಮ್ಮ ಎರಡು ಕಣ್ಣುಗಳಾಗಿದ್ದು, ಸ್ವಾಮಿಯ ಮಾರ್ಗದಲ್ಲೇ ಜೀವನ ಸಾಗಿಸು ತ್ತೇವೆಂದು ಮುಂದೆ ಸಾಗಿದರೆ ಮೋಕ್ಷಪ್ರಾಪ್ತಿ ಪಡೆಯಬಹುದೆಂದು ಹೊಂಬುಜದ ಶ್ರೀ ಜೈನ ಮಠದ ಡಾ| ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿದರು.
ಇಲ್ಲಿನ ಮಹಾವೀರ ಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿರುವ ಮಹಾವೀರ ತೀರ್ಥಂಕರರ 2616ನೇ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಶಾಂತಿನಾಥ ತೀರ್ಥಂಕರರು ಮಾರ್ಗ ತಪ್ಪಿ ಹೋಗುತ್ತಿದ್ದಾಗ ಅವರಿಗೆ ಸರಿಯಾದ ಮಾರ್ಗ ತೋರಿದ ಬೇಡನು ಶ್ರೀಗಳ ಆಶೀರ್ವಾದದ ಫಲದಿಂದಾಗಿ ಮಹಾವೀರರಾಗಿ ಜನಿಸಿದರು.
ಮಹಾವೀರ ತೀರ್ಥಂಕರರು ಅಪಾರ ಪುಣ್ಯಪ್ರಾಪ್ತಿ ಮಾಡಿಕೊಂಡು ಮೋಕ್ಷ ಹೊಂದಿದರು. ಇಂದಿಗೂ ತೀರ್ಥಂಕರರ ಅನುಶಾಸನ, ಉಪದೇಶ, ಮಾರ್ಗದರ್ಶನದಂತೆ ಮೋಕ್ಷ ಮಾರ್ಗ ನಡೆಯುತ್ತಿದೆ ಎಂದರು. ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಡಿಆರ್‌ಎಂ ಅರುಣ ಜೈನ ಮಾತನಾಡಿ, ಸದ್ಯದಲ್ಲೇ ಹುಬ್ಬಳ್ಳಿ-ಶ್ರವಣಬೆಳಗೊಳಕ್ಕೆ ರೈಲು ಆರಂಭಿಸಲಾಗುವುದು.
ಅಲ್ಲದೆ ಈ ರೈಲಿಗೆ ಧಾರವಾಡದಿಂದ ಎರಡು ಹೆಚ್ಚುವರಿ ಬೋಗಿ ಅಳವಡಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಸ್ಥಳೀಯ ದಿಗಂಬರ ಜೈನ ಸಮಾಜದ ಅಧ್ಯಕ್ಷ ಶಾಂತಿನಾಥ ಹೋತಪೇಟಿ ಮಾತನಾಡಿ, ಮಹಾಮಸ್ತಕಾಭಿಷೇಕ ನಿಮಿತ್ತ ನಗರಕ್ಕೆ ಅನೇಕ ತ್ಯಾಗಿಗಳು ಬರುತ್ತಾರೆ. ಸಮಾಜದವರು ತ್ಯಾಗಿಗಳ ಸೇವೆಯಲ್ಲಿ ಪಾಲ್ಗೊಳ್ಳಿರಿ. ಯುವ ಜನಾಂಗವು ಸಮಾಜ ಸೇವೆಯಲ್ಲಿ ತೊಡಗಿರುವುದು ಸಂತಸದ ವಿಷಯ.
ಸಮಾಜದಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಮಾಜ ಬಲಗೊಳಿಸೋಣವೆಂದರು. ಇದೇ ಸಂದರ್ಭದಲ್ಲಿ ಶ್ರೀಗಳು ಸಮಾಜದಲ್ಲಿ ವಿವಿಧ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿದರು. ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿಮಲ ತಾಳಿಕೋಟಿ, ರಾಜೇಂದ್ರ ಬೀಳಗಿ, ಶ್ರೇಣಿಕರಾಜ ರಾಜಮಾನೆ, ಆರ್.ಟಿ. ತವನಪ್ಪನವರ, ಮಹಾವೀರ ಸೂಜಿ, ರಾಮಚಂದ್ರ ದಿನಕರ ಇದ್ದರು. ಭರತಕುಮಾರ ಮುತ್ತಗಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.