ನಟನೆಯಲ್ಲಿ ಎಲ್ಲವೂ ಗೊತ್ತು ಎನ್ನುವ ಭ್ರಮೆ ಬಿಡಿ
Team Udayavani, Apr 6, 2017, 2:59 PM IST
ಧಾರವಾಡ: ಹೊಸ ನಟವರ್ಗ ನಟನೆಯಲ್ಲಿ ತಮಗೆ ಎಲ್ಲವೂ ಗೊತ್ತು ಎನ್ನುವ ಭ್ರಮಾಲೋಕದಲ್ಲಿದ್ದು, ಇದರಿಂದ ಅವರೆಲ್ಲ ಹೊರ ಬರಬೇಕು ಎಂದು ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ಹೇಳಿದರು.
ರಂಗಾಯಣ ವತಿಯಿಂದ ಹಮ್ಮಿಕೊಂಡ ರಂಗಧ್ವನಿ-2017 ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಸುವರ್ಣ ಸಮುತ್ಛಯ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣ “ರಂಗಾಭಿನಯ : ಮಾತುಕತೆ, ಮಾಟ, ಮನನ’ ಕಾರ್ಯಕ್ರಮದಲ್ಲಿ ಅವರು ಆಶಯ ಭಾಷಣ ಮಾಡಿದರು.
ನವಯುಗದ ನಟರಿಗೆ ನಾಟ್ಯಶಾಸ್ತ್ರವೇ ಕಷ್ಟದ ಕೆಲಸ. ಈ ನಟರಿಗೆ ನಾಟ್ಯಶಾಸ್ತ್ರವೇ ಬೇಕಿಲ್ಲ. ನಟನೆಯಲ್ಲಿ ಶಿರೋನಾಮೆ(ಕುತ್ತಿಗೆ) ಹೇಗೆ ಬಳಸಬೇಕೆಂಬುದು ಗೊತ್ತಿಲ್ಲ. ತಾವೇ ವಿದ್ವಾಂಸರು ಎಂಬ ಭ್ರಮಾಲೋಕದಲ್ಲಿ ಮುಳಗಿದ್ದಾರೆ. ಈ ಭ್ರಮಾಲೋಕದಲ್ಲಿ ಇರುವ ನಟರಿಗೆ ರಾಷ್ಟ್ರೀಯ ನಾಟಕೋತ್ಸವದ ಸಭೆಗಳು ಕಲ್ಪವೃಕ್ಷಗಳಿದ್ದಂತೆ.
ಈ ಕಲ್ಪವೃಕ್ಷಗಳಿಗೆ ಮೊರೆ ಹೋದಾಗಲೇ ಬೇಡಿದ ವರ ಪಡೆಯಬಹುದು ಎಂದು ಸಲಹೆ ನೀಡಿದರು. ನಾಟ್ಯಶಾಸ್ತ್ರವೇ ಇಂದಿನ ನಟ-ನಿರ್ದೇಶಕರಿಗೆ ಸವಾಲಾಗಿದೆ. ಪ್ರೇಕ್ಷಕರು ಪ್ರಬುದ್ಧರಾಗಲು ಮೊದಲು ನಟರು ಪ್ರಬುದ್ಧವಾಗಿ ನಟಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಸಣ್ಣ-ಸಣ್ಣ ಸೂಕ್ಷ್ಮಗಳನ್ನು ಹಿಡಿದು ಕೆಲಸ ಮಾಡುವ ವ್ಯವಧಾನ, ಸಹನೆ, ಸಂಯಮ, ತಾಳ್ಮೆ ಅತ್ಯಗತ್ಯ.
ಒಂದು ದೃಶ್ಯ ಕ್ರಿಯೆ ಅನುಭವಿಸಿ ನಟಿಸುವ ಕೆಲಸವಾಗಬೇಕಿದೆ ಎಂದರು. ರಂಗನಟರು ತಮ್ಮ ದೇಹದ ಅವಯವಗಳನ್ನು ಕರಾರುವಕ್ಕಾಗಿ ಬಳಸುವಂತಹ ಕಲೆ ಕರಗತ ಮಾಡಿಕೊಳ್ಳಿ. ಮರೆತು ಬಿಟ್ಟಿರುವ ದೃಷ್ಟಿನೋಟದತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಹಿಂದಿನ ಅಭಿನಯ ಪದ್ಧತಿ ನೋಡಿಯೇ ಇಂದಿನ ನಟರು ಕಲೆಯುವುದು ಬಹಳಷ್ಟಿದೆ.
ಅಭಿನಯ ಬೆಳೆಯಲು ಕಲಾತಪಸ್ವಿಗಳಂತೆ ಪರಿಶ್ರಮ ಪಡಬೇಕಿದೆ ಎಂದರು. ಅಭಿನಯ ಎಂಬುದು ಆಧ್ಯಾತ್ಮವಿದ್ದಂತೆ. ಇದನ್ನು ನಿರಂತರ ತಪಸ್ಸಿನ ಮೂಲಕ ಸಿದ್ಧಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆದರೆ, ಆಧುನಿಕ ನಟರು ಇಂಥ ಮನೋಸ್ಥಿತಿಗೆ ಇಳಿಯುತ್ತಿಲ್ಲ. ಹೀಗಾಗಿ ನಟನೆಯಲ್ಲಿ ಹಾವ-ಭಾವ, ಅವಯವಗಳ ಕೊರತೆ ಎದ್ದು ಕಾಣುತ್ತದೆ ಎಂದರು.
ಕೇವಲ ಕೈ-ಕಾಲು, ಸ್ವಲ್ಪ ಅವಯವಗಳನ್ನು ಬಳಸಿ ಕುಣಿದರೆ ನಟನೆ ಅಲ್ಲ. ಅಗತ್ಯಕ್ಕೆ ತಕ್ಕಷ್ಟು ನಟಿಸುವುದರ ಜತೆಗೆ ಶಿಸ್ತು ರೂಢಿಸಿಕೊಳ್ಳಬೇಕು. ಹಸ್ತಪ್ರಾಣ, ಹಸ್ತಭೇದ, ಹಸ್ತವೃಕ್ಷಗಳು, ಕೃತಿಬೋಧ, ಮುದ್ರಾಭಾಷೆ ಅರಿತಿರಬೇಕು. ಮುಖ್ಯವಾಗಿ ನಟರಿಗೆ ಒಂದು ನಿಲುವು ಇರಬೇಕು.
ಇದನ್ನು ಗಮನಿಸಿ ರಂಗಭೂಮಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದರು. ರಂಗ ಸಮಾಜದ ಸದಸ್ಯ ಡಾ|ಡಿ.ಎಸ್.ಚೌಗಲೆ ಮಾತನಾಡಿ, ನಟರು ಅಭಿನಯ ಮುಖ್ಯವಾಗಿರಿಸಿ ಮುಂಚೂಣಿಗೆ ಬರಬೇಕು. ನಿರ್ದೇಶಕ-ನಟರ ನಡುವಿನ ಮಾತಿನ ಲಹರಿಯೇ ಮಾಟ. ವಾಸ್ತವದ ನೆಲೆಯಲ್ಲಿ ಅಭಿನಯ ಹೇಳುವ ಕೆಲಸ ನಟರಿಂದ ಆಗಬೇಕಿದೆ.
ಸಮಕಾಲಿನ ಸಮಸ್ಯೆಗಳು ಇರಿಸಿಕೊಂಡು ನಾಟಕ ರಚಿಸುವಂತಹ ಕೆಲಸವೂ ಆಗಬೇಕಿದೆ ಎಂದರು. ಹಿರಿಯ ನಟಿ ಲಕೀಬಾಯಿ ಏಣಗಿ ರಾಷ್ಟ್ರೀಯ ನಾಟಕೋತ್ಸವ ವಿಚಾರ ಸಂಕಿರಣ ಉದ್ಘಾಟಿಸಿದರು. ಧಾರವಾಡ ರಂಗಾಯಣ ನಿರ್ದೇಶಕ ಡಾ|ಪ್ರಕಾಶ ಗರುಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಗಾಯಣ ಆಡಳಿತಾಧಿಧಿಕಾರಿ ಬಸವರಾಜ ಹೂಗಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.